17 ಅದಕ್ಕೆ, ಅಬ್ಬ! ಬದುಕೇ ಸುದೀರ್ಘವಾದೊಂದು ಇರುಳಾಗಿದೆ; ದುಃಸ್ವಪ್ನವೊಂದು ಕೊನೆಯೇ ಇಲ್ಲದಂತೆ ಬಲೆ ಹೆಣೆಯುತ್ತಿದೆ. ಬೆಕ್ಕು 'ಮಿಯಾಂವ್' ಎನ್ನುತ್ತ, ಅಡುಗೆ ಸಿದ್ದವಾಯ್ಕೆ ಎಂದು, ಹಿತ್ತಿಲ ಗೋಡೆ ಯಾಚೆಗೆ ಕೆಳಕ್ಕೆ ಧುಮುಕಿತು. ತಿ “ಅಮ್ಮಾ, ಬೆಕ್ಕು ಇಲ್ಲ,” ಎಂದು ಸರಸ್ವತಿ ತಾಯಿಗೆ ವರದಿಕೊಟ್ಟಳು. ಎಂದು ತಾನೂ ಅದೇ ಮಾತನು ಅಂದಳು ಸುನಂದಾ, “ಬೆಕ್ಕು, ಇಲ್ಲ, ಯಾಂತ್ರಿಕವಾಗಿ, ಬೀದಿಯ ಕಡೆಗೆ ಹರಿಯಿತು ಮಗುವಿನ ಮನಸ್ಸು, ಯಾವುದೋ ಹೈ ಹೈ ಗಾಡಿ ದಂಟಿನ ಸೊಪ್ಪು, ಅರಿವೇ ಸೊಪ್ಪು, ಕೊತಮಿರಿ ಸೊಪ್ಪು,' 'ಊವಾ ಬೇಕೇನವ್ವಾ ಊವಾ....' ಸರಸ್ವತಿಯ ತಾಯಿಯ ಕಿವಿ ದಂಡೆಗೂ ಈ ಸ್ವರಗಳು ಅಪ್ಪಳಿಸಿ ಹಾಗೆಯೇ ಹಿಂತಿರುಗುತ್ತಿದ್ದುವು. ಕಿವಿ ಕೇಳುವ ಕೆಲಸವನ್ನು ಮಾಡುತ್ತಿತ್ತೇ ಹೊರತು, ಯಾವ ಸಂದೇಶವನ್ನೂ ಮೆದುಳಿಗೆ ಮುಟ್ಟಿಸುತ್ತಿರಲಿಲ್ಲ. ಬಿಡುವೇ ಇರಲಿಲ್ಲ ಮೆದುಳಿಗೆ ನೆನಪುಗಳ ಸೇನೆಯನ್ನು ಇದಿರ್ಗೊಳ್ಳುವುದರಲ್ಲಿ ಅದು ಮಗ್ನವಾಗಿತ್ತು. ಆದೇ ಕೊಠಡಿ, ನಾಲ್ಕು ವರ್ಷಗಳ ಹಿಂದೆ. ಅನಂತರವೂ ಒಂದೆರಡು ಸಾರೆ. ಮೊದಲು ಸಂಕೋಚದಿಂದ ತಾನು ಗಂಡನ ಬಳಿ ಸೇರಿದ್ದಳು. ಪ್ರತಿಯೊಂದಕ್ಕೂ ತಾಯಿಯ ಮುಖವನ್ನೇ ನೋಡುತ್ತಿದ್ದ ಆತನೂ ಅಳುಕುತ್ತ ವರ್ತಿಸಿದ್ದ. ಮುಂದೆ, ಇಬ್ಬರೂ ಪರಸ್ಪರ ಬಯಸತೊಡಗಿದ ಬಳಿಕ, ಅವರೊಳಗಿನ ಸಂಬಂಧ ಸರಳವಾ ಯಿತು... ಆದರೂ ಅದು ವ್ಯಾವಹಾರಿಕವಾಗಿಯಷ್ಟೆ ಇತ್ತೆಂದು ಸುನಂದೆಗೆ ಈಗ ಅನಿಸು ತ್ತಿತ್ತು.. ಪ್ರೇಮ... ಸಿಹಿ ಎನ್ನು ವಂತಹ ನೆನಪುಗಳು ಕೆಲವಿದ್ದುವು. ಆದರೆ, ಕಹಿಯ ಅಂಶವೇ ಹೆಚ್ಚು. ಸಿಹಿ ಮಕ್ಕಳಾಟವ ಮಣ್ಣುಗುಡ್ಡೆಯಾದರೆ, ಕಹಿ ಮಹಾ ಮೇರುವಿನಷ್ಟು..... ಸುನಂದಾ ನಡುಮನೆಗೆ ಬಂದು, ಗೋಡೆಯನ್ನೇ ಚಿತ್ರವಿಚಿತ್ರವಾಗಿ ಅಲಂಕರಿ ಸಿದ್ದ ದೇವದೇವತೆಯರ ರಾಮಸೀತೆಯರ ಖಷಿಮಹರ್ಷಿಗಳ ವರ್ಣಚಿತ್ರಗಳನ್ನು ನೋಡಿದಳು. ಕಲಾವಿದನ ಕಲ್ಪನಾ ಶಕ್ತಿಗೊಂದು ಮಿತಿಯೇ?....ಅಲ್ಲೇ ಬಾಗಿಲ ಮೇಲ್ಗಡೆ ದೊಡ್ಡದಾದ ಭಾವಚಿತ್ರವಿತ್ತು. ಕುರ್ಚಿಯ ಮೇಲೆ ಕುಳಿತಿದ್ದ ತಂದೆ: ಆತನ ಹಿಂಬದಿಯಲ್ಲಿ ವಿನೀತಳಾಗಿ ನಿಂತಿದ್ದ ತಾಯಿ, ಎಷ್ಟೋ ವರ್ಷಗಳಿಗೆ ಹಿಂದಿನ ಚಿತ್ರ. ಹೆತ್ತವಳು ತನ್ನನ್ನು ರಮಿಸುತ್ತಿಲ್ಲವೆಂದು ಅಸಹನೆ ತೋರತೊಡಗಿದ್ದ ಸರಸ್ವತಿಗೆ ಆ ಭಾವಚಿತ್ರವನ್ನು ತೋರಿಸುತ್ತಾ ಸುನಂದಾ ಅಂದಳು: "308, 62 C..." 92 ಸರಸ್ವತಿಗೇನೂ ಗುರುತು ಸಿಗಲಿಲ್ಲ, ಆದರೂ ತನ್ನ ತಾಯಿಯ ಅಭಿಪ್ರಾಯ
ಪುಟ:Ekaangini by Nirajana.pdf/೨೧
ಗೋಚರ