26 “ಸ್ವಸ್ಥ ನಿದ್ದೆ ಹೋಗು, ಸಾಯಂಕಾಲದೊಳಗೆ ವಾಸಿಯಾಗುತ್ತೆ,” ಎಂದರು. ನಿದ್ದೆಯೇನೋ ಬಂತು, ಆದರೆ ಸಂಜೆಯ ಹೊತ್ತಿಗೆ ಆದರೆ ಸಂಜೆಯ ಹೊತ್ತಿಗೆ ಜ್ವರ ಇಳಿಯಲಿಲ್ಲ. ತಮಗೆ ಏನು ಬೇಕಾದರೂ “ವಿಜಯಾ” ಎಂದು ಕರೆಯುತ್ತಿದ್ದರು ಆ ತಾಯಿ. ಸುನಂದೆ, “ಬಂದೆ ಅಮ್ಮಾ" ಎಂದು ತಾನೇ ಉತ್ತರಿಸುತ್ತಿದ್ದಳು. ಸಂಜೆ ಒಲೆ ಹಚ್ಚಿ ಸಬ್ಬಕ್ಕಿ ಗಂಜಿಯಷ್ಟು ಬೇಯಿಸಿ ಸುನಂದಾ ತಾಯಿಗೆ ತಮ್ಮ ಹಳೆಯ ಶಾಲು ಹೊದೆದು ಆರಾಮ ಕುರ್ಚಿಯ ಮೇಲೆ ಜಗಲಿಯಲ್ಲಿ ಕುಳಿತಿದ್ದರು ತಂದೆ. ಕೈಯಲ್ಲಿ ನಶ್ಯದ ಡಬ್ಬವಿತ್ತು. ಸರಸ್ವತಿ ತೊಡೆಯ ಮೇಲಿದ್ದಳು. ಸುನಂದಾ ಅವರ ಬಳಿಗೆ ಬಂದು ಹಣೆಯನ್ನು ಮುಟ್ಟಿ ನೋಡಿದಳು. ಕೃಷ್ಣಪ್ಪ ಮುಗುಳು ನಕ್ಕರು. “ಮೈ ಬೆಚ್ಚಗಿದೆಯೇ ಏನೂಂತ ನೋಡಕ್ಕೆ ಬಂದಿಯಾ?” ಮೈ ಬೆಚ್ಚಗಿರಲಿಲ್ಲ. ಆ ಜೀವದಲ್ಲಿ ಜ್ವರದ ಚಿಹ್ನೆ ಇರಲಿಲ್ಲ. “ನಿಮ್ಮಮ್ಮ ಸೀನೋದು ಕೇಳಿದ ತಕ್ಷಣ ನನ್ನ ಜ್ವರ ಓಡೋಯ್ತು. ಇಬ್ಬರ ಕಾಹಿಲೆ ಬೀಳೋದಕ್ಕಾಗುತ್ತೆ? ಎಷ್ಟು ರೋಗಿಗಳ ಆರೈಕೆ ಮಾಡೀಯವಾ ನೀನಾದರೂ?" ಹಾಗೆ ಹೇಳುತ್ತ ಅವರು ನಕ್ಕರು. ನಗುತ್ತಿದ್ದಂತೆ ಕುಣಿದ, ಸ್ವಲ್ಪ ನೀಳವಾಗಿದ್ದ, ಅವರ ಮೂಗನ್ನು ಸರಸ್ವತಿ ಹಿಡಿಯಲೆತ್ನಿಸಿದಳು. • ಮಾರನೆಯ ಬೆಳಗ್ಗೆ ಸುನಂದೆಯ ತಾಯಿಯ ಮೈ ಬೆವತಿತು. ಆ ಮೇಲೆ ಜ್ವರ ಬರಲಿಲ್ಲ. ಆದರೆ ನೆಗಡಿ ಇತ್ತು. ಅದರ ಆಯುಸ್ಸು ಮೂರು ದಿನ, ಜ್ವರ ಬಂದು ತಂದೆ ಹಾಸಿಗೆ ಹಿಡಿಯುವ ಬದಲು ತಾಯಿ ಕಾಹಿಲೆ ಬಿದ್ದುದು ಮೊದಲ ನೋಟಕ್ಕೆ ವಿಚಿತ್ರವೆನಿಸುತ್ತಿತ್ತು. ಆದರೆ ಸುನಂದೆ, ತನ್ನ ತಾಯಿ ಮತ್ತು ತಂದೆಯ ನಡುವೆ ಇದ್ದ ಪ್ರಗಾಢವಾದ ಆತ್ಮೀಯತೆಯನ್ನು ತಿಳಿಯದವಳಲ್ಲ ಮಗ ಳನ್ನು ಗಂಡನ ಮನೆಗೆ ಕಳುಹಿಸಿದ ಮನೋವೇದನೆಯೇ ಒಳ ಸಂಚು ನಡೆಸಿ ತಮ್ಮ ಕೈಹಿಡಿದಾಕೆಯ ಆರೋಗ್ಯದ ಮೇಲೆ ದಾಳಿನಡೆಸಿತ್ತೆಂದು ಕೃಷ್ಣಪ್ಪನವರು ಸುಲಭ ವಾಗಿಯೇ ಊಹಿಸಿದ್ದರು. ಅಂತಹ ದೌರ್ಬಲ್ಯ ತಾವು ತೋರಬಾರದೆಂದು ತಮ್ಮ ದೇಹಾಲಸ್ಯವನ್ನು ಅವರು ಕಡೆಗಣಿಸಿದರು. ನಿಸರ್ಗದ ಕಿರುಕುಳವನ್ನು ಇಚ್ಛಾಶಕ್ತಿ ಜಯಿಸಿತು. ಅವರ ಗೃಹವೈದ್ಯ ಸಂತೈಸುವ ಎರಡು ನುಡಿ, ವಿಜಯಳ ಅ ಸುನಂದೆಯ ಆರೈಕೆ ಸಂಪೂರ್ಣವಾಗಿ ಸೋಲಿಸಿದುವು. ಆಕೆಯ ತಾಯಿಯ ಕಾಹಿಲೆಯನ್ನು ...ಮತ್ತೆ ಏಕಪ್ರಕಾರವಾದ ದಿನಗಳು ಹಗಲು-ಇರುಳು, ಸುನಂದೆಯ ತಾಯಿ ಹೇಳುತ್ತಿದ್ದರು. “ಪೋಸ್ಟಿನೇನು ಬರೋ ಹೊತ್ತಾಯೋ ಏನೋ, ಬೀದಿ ಕಡೆ ಹೋಗಮ್ಮ.”
ಪುಟ:Ekaangini by Nirajana.pdf/೩೦
ಗೋಚರ