ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- ಪಾವಿತ್ರ್ಯ ಎಂದರೇನು? ಅದರ ಅರ್ಥವೇನು?
ಅದಕ್ಕೊಂದು ಧಾರ್ಮಿಕ ಮಹತ್ವ ಇದೆಯೆಂದು ಯಾರೋ ಹೇಳಿದರು. ಹಿಂದೂ ವಿವಾಹವು ಧಾರ್ಮಿಕ ಸಮಾರಂಭ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಅಂದ ಮಾತ್ರಕ್ಕೆ ಇಬ್ಬರನ್ನು ಬಿಗಿಯಾಗಿ ಕಟ್ಟುವುದು, ಒಬ್ಬರನ್ನೊಬ್ಬರು ಕಚ್ಚುವುದು, ದ್ವೇಷಿಸುವುದು ಒಬ್ಬರ ಬದುಕನ್ನು ಇನ್ನೊಬ್ಬರು ಸರಕಸಮಾನವಾಗಿ ಮಾಡುವುದು ಎಂದರ್ಥವ -ಹಿಂದೂ ವಿವಾಹ ಶಾಸನಕ್ಕೆ ಬೆಂಬಲವಾಗಿ ಲೋಕ ಸಭೆಯಲ್ಲಿ ಜವಾಹರಲಾಲ್ ನೆಹರೂರವರು ಮಾಡಿದ ಭಾಷಣದಿಂದ, [ಮೇ 5, 1955]