ಪುಟ:Elu Suthina Kote.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾಯಿ-ಮಗ. 6 ಕರಿ ಬಸ್ಸ ಕಳುಹಿಸೋ, ಕಾರುಣ್ಯಸಿಂಧು ನೀನೇ ಅನಾಥ ಬಂಧು!” a ಅದೂ ಬಸ್ಸು, ಕರಿ ಬಸ್ಸು! (ಕರುಣೆಕುಡಿ ಕಾಲನೆದೆ ಕಲ್ಲಲ್ಲು ಚಿಗುರಿತು) ಅದೊ ಬಂತು, ಬಂತು! ಕೊರಳೆತ್ತಿ ಕೈಯೆತ್ತಿ ಕೂಗು: ಹೋಲ್ಡಾನು! (ನಡುನೀರಿನೊಳಗೆನ್ನ ಕೈಯ ಬಿಡುವನೆ ಕೃಷ್ಣ?) ಹೋಲ್ಡಾನು, ಹೋಲ್ಡಾನು! ಬಂತು. ಅಯ್ಯೋ ಹೋಯ್ತು! ತೆರವಿದ್ದರೂ ಬಸ್ಸು ನಿಲದೆ ಉರುಳಲು ಮುಂದೆ ಕನಸ ಗೋಪುರದಂತೆ ಎಲುಬು ಕೈ ಕುಸಿಯಿತು. ಒಲ್ಲದಿನ್ನೊಬ್ಬ ನರ ನಡೆದಿರಲು ಬಸ್ಸಿವನ ಹಿಮಗಿರಿಯ ಕಂದರಕೆ ಕರೆದೊಯ್ದಿತು.! 'ಧರುಮರೇ ತಾಯಿತಂದೆ ಕೋಡು ಮೂರು ಕಾಸ; ಮಡಗು ಬಡವನ ಮೇಲೆ ಈಟಿಸ್ವಾಸ' ಕೈ ಕೊಡವಿ ನಡೆದವನ ಬೀಡ ಕೆಂಪಿನ ಬಾಯಿ ಹೊಗೆಸುರುಳಿಯುಗುಳಿತು. ಹಾವು ಹೊಗೆ ನಕ್ಕು ಕಿಲಕಿಲ ಮೈಯ ಕುಣಿಕುಣಿಸಿ ಗಾಳಿಯೊಳು ಕರಗಿತು. ನಡೆ ಬೇಗ ಗಂಟೆ ಆರಾಯ್ತು; ಪುರಭವನ ಬಲು ದೂರ. ಕ್ಷಾಮ ಪರಿಹರ ನಿಧಿಗೆಂದೆ ಇದೆ ಇಂದು ವೈಜಯಂತಿಯ ನೃತ್ಯ