ಪುಟ:Elu Suthina Kote.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾಯಿ-ಮಗ.


'ಕೊಡು ಮೂರು ಕಾಸ; ಮಡಗು ಬಡವನ ಮೇಲೆ ಈಟಿಸ್ವಾಸ” ನುಡಿಯೆ ಬಾಯ್ದೆರೆದರೂ ಉಸಿರು ಹೊರಬರಲಿಲ್ಲ. ಕಂಪಿನುರಲಿಗೆ ಸಿಕ್ಕ ಕೊರಳು ಕೈ ಕೊಟ್ಟಿತು; ಮೂಕ ಮುಖ ಬೇಡಿತು. ಕಣ್ಣು ಕೇಳಿತು ನನ್ನ; “ಏನು ಪರಿಚಯ ಸಿಗದೆ? ಎಂಥ ಮರೆವಿದು ನಿನಗೆ ನಾನೇನು ಅಷ್ಟು ಬದಲಾಯಿಸಿದ್ದೀನಿ ಎನುವೆಯ? ಏನಯ್ಯ, ಮರೆತೆಯ, ನಾವಿಬ್ಬರೂ ಒಂದೆ ಪಾಠಶಾಲೆಗೆ ಹೋಗುತ್ತಿರಲಿಲ್ಲವೆ? ನಮ್ಮಿಬ್ಬರದು ಅಲ್ಲಿ ಒಂದೆ ಬೆಂಚು! ವಾರ್ಷಿಕೋತ್ಸವದಲ್ಲಿ ನಮದೆಂಥ ಉತ್ಸಾಹ ಅಹಹ ಹಹ್ನಹ ಹಹ.... ಹಹಹ' ಮುಖದಲ್ಲಿ ಹೈಇನ ನಗು; ಕಾರಿರುಳ ಕರಗಿಸುವ ಮಿಂಚ ಗೊಂಚಲ ಮಿನುಗು! 2 ತಾಯೊಗವ ಈ ಮಗುವ ಮುಖದಲ್ಲಿ ಕಂಡೆ, ಎಂದೆ ನಾ ಬಲು ನೋಂದೆ. ಅವರಿವರ ಕಾಮದಾಟಕ್ಕೆ ಮೈಯೊಡ್ಡಿ ಬಲು ನೊಂದವಳು ನೆಲದಾಯಿ ವರುಷ ವರುಷಕು ಹಡೆದು ಬಾಳ ಸಂಜೆಯೊಳಿಂದು ಬಂಜೆಯಾಗಿಹಳಯ್ಯ “ಓ ತಾಯಿ, ಕಾಯಿ. ನೋಡು, ಕಣ್ಣಿಡು.