ಪುಟ:Elu Suthina Kote.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳು ಸುತ್ತಿನ ಕೋಟೆ ಅರಸಿ ಬಂದಿಹೆನಮ್ಮ, ನಾನೆ ನೀ ಹಡೆದ ಮಗು, ಒಮ್ಮೆ ನಗು. ಹರಸು ತಾಯೆ, ಸುತರ ಕಾಯೆ, ಜನ್ಮದಾತೆಯೆ. ಈ ಅನಾದರ ದೂಡು; ಮೈ ತಡವು, ಮಾತಾಡು!” 'ದೂರವಿರು ದಮ್ಮಯ್ಯ ನೀ ನನ್ನ ಮಗುವಲ್ಲ. ಹಣೆದೊಡಲು ಬಂಜೆಯಾಯ್ತು; ಬಾಳೊದಲೆ ಸಂಜೆಯಾಯ್ತು ಎನ್ನಳಲು ಕೇಳದೇನೋ: ಕೊಡು ದೇವ ಬಿಡುಗಡೆ ಬಾ ಬಂಧು! ಬಂದು ಉದ್ಧರಿಸು ಬಾರ, ಅಣುಬಾಂಬಿನವತಾರ ತಳೆದು ಬಾರ! ಅಂತವಿರದಾನಂದವಿರುವ ಅ ಮಂದಿರಕೆ ಹಿಮಗಿರಿಯ ಕಂದರಕೆ ಕರೆದೊಯ್ಯ ಬಾರ? S ದೋಸೆಯನು ಅವನ ಮಡಿಲೊಳು ತುರುಕಿದವನೆ ನಾ ಮನೆಗೆ ನಡೆದೆ. ಕೊಡು ಮೂರು ಕಾಸ, ಕೊಡು ಮೂರು ಕಾಸ! ಹಿಂಬಾಲಿಸಿತು ನನ್ನ ಮನೆವರೆಗು ಬಿಡದೆ!