ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕೊನೆಗಳಿಗೆ This is the way the world ends This is the way the world ends This is the way the world ends Not with a bang but a whimper -ELIOT 0 ಏಳು ಸುತ್ತಿನ ಕೋಟೆ ಯಾವುದೋ ಕಪ್ಪು ಮಡು ಕೈ ಬೀಸಿ ಕರೆಯುತಿದೆ ಒಡಲ ಪಾತಾಳದಾಳದೊಳಿರುವ ಶಾಂತಿಯಾಮಿಷ ನೀಡಿ. ಎರಡು ಆನಂತ್ಯಗಳ ನಡುವೆ ಸೆರೆ ಈ ಜೀವ. ಬೀದಿ ಮಗ್ಗುಲ ಕಲ್ಲು ಏಕಾಕಿ! ನೆರೆದ ನೆಂಟರ ನಡುವೆ ಇದ್ದರೂ ಏಕಾಕಿ! ಇರವಿನರಿವಿನ ದಾಹ ಇರವ ಮರೆವಿನ ಮೋಹ! ಹಿಡಿಯೆದೆಯ ವಿಸ್ತರದಿ ಸೆಳೆತವೆರಡರ ಅಲೆತ. ಸಪ್ತಸಾಗರದಾಚೆಯಿಂದ ಬರುತಿದೆ ಸಪ್ತ ಸ್ವರದ ಮೃದು ಮಧುರ ಕರೆ. ತೊರೆದು ತಿರೆ ನೆರಳ ಮೋಹದ ಕರೆಗೆ ನೆರಳಾಗಿ ಓಗೊಟ್ಟು ನೆರಳ ನೆರಳಿನ ಹಿಂದೆ ಅಡಿಯಿಡುವ ಬಯಕೆ! ಇರುವ ಮನೆ ಸೋರಿದರು ಹಿತ, ಬಳಕೆ, ಬೇರೆ ಮನೆಯೇಕೆ? ಬೇಕೆ?