ಪುಟ:Elu Suthina Kote.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗಾಷ್ಟಮಿ-ವಿಜಯದಶಮಿ 92 ಇಳೆಗಿಳಿದು ಬಾ ಚೆಲುವು ಬೊಂಬೆಗೆ ಪ್ರಾಣ ತುಂಬು ಬಾರೆ! ಅದೋ ನೋಡು, ಮಣ್ಣು ಮಾಟವದೀಗ ಜನನಿಯನು ನಮಿಸುತಿವೆ ತಲೆಬಾಗಿ ನಿಂತು! ಥಕಥಕಿಟ ಧೈಫೈ. ಚಂದನದ ಕೈ ಮೈ ಕುಣಿಯತೊಡಗಿವೆ ಪ್ರಾಣವಾಂತು!” ಮಣ್ಣೆ ಪ್ರಾಣವ ಕರೆದ ಪಾಂಚಾಲಿ, ಧೀರೆ ಬಾ ಬಾರೆ ಬಾರೆ. ನಿಸ್ತೇಜ ಜನಕುಲವು ಬೊಂಬೆಯಾಗಿದೆ ಇಂದು ನುಡಿಯ ಚಾವುಟಿ ಬೀಸಿ ಹುರಿದುಂಬಿಸೆ! ಉತ್ತರನ ನೆತ್ತರೂ ಕುದಿವಂತೆ ಮೈಯಲ್ಲಿ ನಿನ್ನ ಪೌರುಷವನ್ನು ಪ್ರತಿಬಿಂಬಿಸೆ! 'ನುಗ್ಗು ಮುಂದೆ ನಡೆ, ನಡೆ. ಕುರುಸೇನೆಯು ಪುಡಿಯಾಗದೆ ನಿನ್ನ ರಥದ ರಭಸಕೆ? ನಡೆ ನಡೆ ಮುನ್ನಡೆ. ಗೋವು ಕರುವ ನೋವು ಕರೆಯು ಎದ್ದು ಆಕಾಶಕೆ ನಿನ್ನ ನೆರವ ಬೇಡುತಿದೆ. ಹೆದೆಯೇರಿಸು ಉತ್ತರ. ಕರ್ಣ ದ್ರೋಣ ಶಲ್ಯ ಭೀಷ್ಮ ಕೃಪಾಶ್ವತ್ಥಾಮರ ಸದೆಬಡಿಯುವ; ಕೀರ್ತಿ ನಿಲ್ಲದೇನು ಮುಗಿಲ ಎತ್ತರ!' 'ತಡೆ, ತಡೆ ಬೃಹನ್ನಡೆ. ತನು ಒಲ್ಲದು ಮನ ಬಲ್ಲದು