ಪುಟ:Elu Suthina Kote.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲೆಗಾರ-ಕನಸು ಕೊಟಡಿ ಕಿಟಕಿಯೆಡೆಗೆ ಹರಿಯಿತವನ ಕಣ್ಣ ನೋಟ: ಹೆಣ್ಣು ನಾಯಿ ಮುಂದೆ; ಹಿಂದೆ ಗಂಡು ನಾಯಿ ಮಂದೆಯೋಟ. ಅತ್ತ ಉತ್ತ ಹೊಲದ ತೊಡೆಗಳೋಣಿಯಲ್ಲಿ ಬಿತ್ತನೆ! ಆಗ ಬಂದು ಫಕ್ಕನೆ ಎದುರು ನಿಂತು ಒಂದೆ ಗಳಿಗೆ. ಮನೆ ಮಾಡಿದೆ ಹೃದಯದೊಳಗೆ. ರೇತಸ್ಸಿನ ಅಣು ಪಡೆಯಿತು ಅಂಡಾಶಯದಾಶ್ರಯ a ವಸುಂದರೆಗೆ ತನುವು ಭಾರ; ಹೊಸ ಜೀವದ ಸ್ಪಂದನ ಲತೆಗೆ ಹೊತ್ತ ಕುಸುಮ ಭಾರ ಮೊಗ್ಗಿಗೆ ಪರಿಮಳದ ಭಾರ ಆಷಾಡದ ಕರಿ ಮೋಡಕೆ ಹೊತ್ತು ನಿಂತ ನೀರು ಭಾರ ಬಸುರಿ ಹೆಣ್ಣ ಮೊಲೆಯ ತುಂಬ ಸುರಿಯದೊಂದು ಸೊದೆಯ ದೂರ ಹೃದಯಗರ್ಭದಾಳದಲ್ಲಿ ಭಾವಾಂಡದ ವಿಕಸನ ಮಕ್ಕಳಿರದರಮನೆಗೆ ಮಗು ಬಂತು, ನಗು ಬಂತು! ಗೊಂಬೆಯೋಳು ಮೂಲೋಕವನು ಕಾಂಬ ಮಗುವಂತೆ ಮಗುವಿನೊಳು ಮುದಿ ದೊರೆಯು ತಿರೆಯ ಮರೆತ. ಮೈಯ ಮುಪ್ಪನ್ನು ದೊರೆ ಅರಿವೆಯೊಲು ಕಳಚಿಟ್ಟು ಮಗುವಿನೊಡಮಗುವಾಗಿ ಅಂಬೆಗಾಲಿಟ್ಟು ಬೆಳದವರ ಮಾತುಕತೆ ಉಳಿದವರ ನಲವು, ವೆತೆ ಯುಗಯುಗಾಂತರದ ಕತೆ, ಬೇಡ, ಬೇಡ! ಎಳೆ ಮಗುವ ತೊದಲು ನುಡಿ ಮೊದಲ ನಡೆಗಳಲಿಹುದು ದೇವಸಾಕ್ಷಾತ್ಕಾರ ನೋಡ, ಮೂಢ!