ದೀಪಾವಳಿ ಕಾಣ ಬಯಸಿದೆ ಕಡಲ ಒಡಲಿನಲ್ಲಿ. ಮಾಮರದ ಪಂಚಮಕೆ ಮನಸೋತು ಕನಸುತಿದೆ ಒಲವು ಹುಲ್ಲಿನ ಗರಿಕೆ ಮಡಿಲಿನಲ್ಲಿ. ಬಸುರಿ ತೆನೆಭತ್ತವನು ಕಂಡ ಸಂಪಿಗೆ ಕನ್ನೆ ನಗಲು ದನಿಗೂಡಿಸಿವೆ ಸ್ಪಟಿಕ ಡೇರ. ಮೂಡಲಿನ ಬಂಗಾರದೊಳು ಮಿಂದ ಕಿತ್ತಿಲೆಯ ನೋಡಿ ಬೆತ್ತಲೆ ನಿಂತ ಕನಕಾಂಬರ, ಪಡುವಣವು ದಾಳಿಂಬೆ; ರಾಬಿನ್ನು ರೆಡ್‌ಬ್ರೆಸ್ಟ್ ಎದೆಯೊಳರಳಿಸಿ ಕಾಡ ಬೆಂಕಿಯನ್ನು ದೂರದೆಲ್ಲೋ ಇರುವ ಕಾದಲೆಗೆ ಹಾಡುತಿದೆ: My love is like a red, red rose! ಬೆಳುದಿಂಗಳಿನ ಲೀಲೆ ಹರಿವ ಹೊನಲೆದೆ ಮೇಲೆ ಮಗ್ಗುಲಿಗೆ ಸುಂದರದ ಮೊಲ್ಲೆಮಾಡ. ಏಸು ಗೌತಮ ಗಾಂಧಿ ಮಾತ ಕೊಕ್ಕಿಗೆ ಸಿಕ್ಕಿ ಇಳೆಯಂಚ ಹುಡುಕುತಿದೆ ಪಾರಿವಾಳ 2 22 ತಾಯಿ ಸಂಪ್ರೀತೆ ಕಂಡ ಕನಸೇ ಮಹಾಶ್ವೇತೆ ಬೆಳಕ ಬೆನ್ನೇರಿ ನೇರ! ಗುರಿ ಚಿಕ್ಕೆ ಮಿನುಗು: ನಗು ದೂರ ದೂರ. ಹೊರಟಿತೋ ಅದರ ಪಂಥ ಢಿಕ್ಕಿ ಹೊಡೆಯೆ ನಡು ರಸ್ತೆಯಲ್ಲಿ ಮೇಲಿಂದ ಬಂದಂಧ ಶಾಪ ಏಳು ಹೋಳಾಯಿತೇ ಚಂದ್ರಲೋಕದೊಂದಿಂದ್ರಚಾಪ! ದೈತ್ಯ ಕನ್ನಿಕೆಯರೇಳು ಮಂದಿ ಬಂದಾರ ನೋವ ತಂದು ನೆಲದೊಲವ ನಲವ ನುಂಗಲೆಂದು! ಹೂವೊಳಗೆ ಕೀಟ, ಹುಲ್ಲೊಳಗೆ ಹಾವು ಬಸಿರೆ ಹಾಲಾಹಲ. ಮುಸಲೋನಿ ಹಿಟ್ಲರ್ ಕಂಸ ನರಕಾಸುರ ರಣಕಾಳಿ ಕುಣಿತ ಹಳದಿ ಮುಖ ನೀಲಿ, ಬೆಂಕಿಹೊಳೆ ಕಣ್ಣು, ಬರಿ ಕೀವು ರಕ್ತಮಾಂಸ!
ಪುಟ:Elu Suthina Kote.pdf/೬೧
ಗೋಚರ