ಪುಟ:Epigraphia carnatica - Volume I.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

XXIX ಈ ದತ್ತಿಗೆ ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಅವರಲ್ಲಿ ಮಣಿಯುಗುರದ ನಂದ್ಯಾಲರು ಮತ್ತು ಸಿಂಬಾಲರು ಇತರ ಕೆಲವು ಗಂಗರ ಶಾಸನಗಳಲ್ಲಿಯೂ ಸಾಕ್ಷಿಗಳಾಗಿ ಉಲ್ಲೇಖಿತರಾಗಿದ್ದಾರೆಂಬುದು ಗಮನಾರ್ಹ. ಗಣಿಗನೂರ ತಗಡರು ಸಹ ಉಲ್ಲೇಖಿತರಾದ ಸಾಕ್ಷಿಗಳು, ಗಣಿಗನೂರು ಈಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಗಣಗೂರು ಆಗಿರಬಹುದು. ಇದೊಂದು ಪ್ರಾಚೀನ ಸ್ಥಳವಾಗಿದ್ದು, ಇಲ್ಲಿ ಗಂಗರ ಕಾಲಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ದೊರೆತಿವೆ. ವಿಶ್ವಕರ್ಮನು ಈ ತಾಮ್ರಶಾಸನವನ್ನು ಕಂಡರಿಸಿದನು. ವಿಶ್ವಕರ್ಮ ಎಂಬುದು ಗಂಗರ ಆಸ್ಥಾನ ಲಿಪಿಕಾರನ ಅಧಿಕೃತ ಪದವಿಯಾಗಿತ್ತು. ಈ ಶಾಸನದ ಯಥಾರ್ಥತೆಯ ಬಗ್ಗೆ ತೀವ್ರ ವಿವಾದವಿದೆ. ಸ್ತ್ರೀ ಮತ್ತು ಇತರ ಕೆಲವು ವಿದ್ವಾಂಸರು ಗಂಗರ ತಾಮ್ರಶಾಸನಗಳನ್ನು ನೈಜವೆಂದು ಒಪ್ಪುವುದಿಲ್ಲ. ಆದರೆ, ಬಿ. ಎಲ್. ರೈಸರು ಇವು ವಿಶ್ವಾಸಾರ್ಹವೆಂದು ಸ್ಥಾಪಿಸಲು ಯತ್ನಿಸಿದ್ದಾರೆ. ಈ ನಾದವಿವಾದಗಳ ವಿವರಗಳಿಗೆ ಹೋಗದೆ ಕೆಲವು ಮುಖ್ಯ ಅಂಶಗಳನ್ನು ಮಾತ್ರ ಇಲ್ಲಿ ಗಮನಿಸಬಹುದು. ಈಗ ಅನೇಕ ಗಂಗರ ತಾಮ್ರಶಾಸನಗಳು ಬೆಳಕಿಗೆ ಬಂದಿವೆಇವುಗಳ ತುಲನಾತ್ಮಕ ಅಧ್ಯಯನದಿಂದ ಕೂಟ ಮತ್ತು ನೈಜ ಶಾಸನಗಳನ್ನು ವಿಂಗಡಿಸುವುದು ಈಗ ಸಾಧ್ಯವಾಗಿದೆ. ಪ್ರಸ್ತುತ ಈ ತಾಮ್ರಶಾಸನವು ಕ್ರಿ. ಶ. ೪೬೬ರಲ್ಲಿ ಹುಟ್ಟಿದಂತೆ ಅದರಲ್ಲಿ ಹೇಳಿದೆ. ಆದರೆ, ಈ ತೇದಿಯ ಕಾಲದ ವಿವರಗಳು ಸರಿಯಾಗಿ ಹೊಂದಿಕೆಯಾಗುವುದಿಲ್ಲವೆಂದು ಮೇಲೆ ನಾವು ನೋಡಿದ್ದೇನೆ. ಮೊದಲನೆಯ ಶಿವಮಾರನಿಗಿಂತ ಹಿಂದಿನ ಗಂಗದೊರೆಗಳ ಕಾಲದಲ್ಲಿ ಹುಟ್ಟಿದ, ನೈಜವೆಂದು ಖಚಿತವಾಗಿರುವ, ಶಾಸನಗಳಲ್ಲಿ ಶಕವರ್ಷದ ಉಲ್ಲೇಖವಿಲ್ಲ. ಹರಿವರ್ಮನ ತಗಡೂರು, ತಂಜಾವೂರು ಮತ್ತು ಕೂಡಲೂರು ಶಾಸನಗಳಲ್ಲಿಯೂ ಈ ಶಾಸನ ಗಲ್ಲಿರುವಂತೆಯೇ ಶಕವರ್ಷವನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳು ಕೂಟಶಾಸನಗಳೆಂದು ಸಿದ್ದವಾಗಿವೆ. - ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಡಿಕೇರಿಯ ಈ ತಾಮ್ರಪಟದ ಲಿಪಿಸ್ವರೂಪವು ಶಾಸನವು ತಿಳಿಸುವ ಕಾಲಕ್ಕಿಂತ ಈಚಿನ ದೆಂಬುದು ಕಂಡುಬರುತ್ತದೆ. ಅಕ್ಷರಗಳು ಬೆಳವಣಿಗೆ ಹೊಂದಿ ದುಂಡಗಾಗುವ ಲಕ್ಷಣಗಳನ್ನು ಹೊಂದಿವೆ. ೨೩ನೆಯ ಪಂಕ್ತಿಯ ಲ್ಲಿರುವ ಕಡು ಮತ್ತು ಕಾಗಣಿತಟಾಕ ಎಂಬಲ್ಲಿಯೂ, ೧೧ನೆಯ ಪಂಕ್ತಿಯಲ್ಲಿರುವ ಪರಾಕ್ರನು ಮತ್ತು ರಾಜ್ಯ ಎಂಬಲ್ಲಿಯೂ ಕಂಡುಬರುವ ಕಕಾರ ಮತ್ತು ರಕಾರಗಳ ಉದ್ದ ಕಿರಿದಾಗಿರುವುದಲ್ಲದೆ ದುಂಡಾಗುತ್ತಿರುವುದನ್ನೂ ಗಮನಿಸಬಹುದು. ಲಿಪಿಕೆಗೆ ಹೆಚ್ಚು ಒರಟಾಗಿದೆ. ಪಂಕ್ತಿಗಳು ನೇರವಾಗಿಲ್ಲ. ರಾಜಾಸ್ಥಾನದಲ್ಲಿಯ ನಿಪುಣ ಲಿಪಿಕಾರನಲ್ಲಿ ಈ ದೋಷಗಳಿರಕೂಡದಷ್ಟೆ ? ಕಾಗುಣಿತ ದೋಷಗಳೂ ಹೇರಳವಾಗಿವೆ. ಈ ಶಾಸನದಲ್ಲಿ ಉಪಯೋಗಿಸಲಾಗಿರುವ ಕನ್ನಡ ಭಾಷೆಯು ದೋಷಯುಕ್ತವಾಗಿದ್ದು ಪೂರ್ವದ ಹಳಗನ್ನಡವಾಗಿರದೆ ಅದರ ನಂತರದ ಕಾಲದ ಲಕ್ಷಣವನ್ನು ತೋರುತ್ತದೆ. ಕ್ರಿ.ಶ. ೫ನೆಯ ಶತಮಾನ ಮತ್ತು ಅದಕ್ಕೆ ಹಿಂದಿನ ಇತರ ನೈಜ ತಾಮ್ರಪಟಗಳಿಗೆ ಹೋಲಿಸಿದಲ್ಲಿ, ಈ ಶಾಸನದ ಹಲಗೆಗಳ ಅಗಲ ಹೆಚ್ಚು . ಈ ಶಾಸನ ನಿಜ ವೆಂದು ರೈಸರು ವಾದಿಸಿದರೂ ಮೇಲ್ಕಾಣಿಸಿದ ಅಂಶಗಳು ಇದು ಕೃತಕಶಾಸನವೆಂಬುದನ್ನೇ ಸೂಚಿಸುತ್ತವೆ. ಆದರೂ, ಇದರಲ್ಲಿ ಅವಿನೀತನವರೆಗಿನ ಗಂಗ ವಂಶಾವಳಿಯನ್ನು ಸರಿಯಾಗಿ ತಿಳಿಸಿರುವುದಲ್ಲದೆ ಪ್ರತಿಯೊಬ್ಬ ಗಂಗ ದೊರೆಯ ಬಿರುದುಗಳೂ ಅನೇಕ ನೈಜ ವಾಖಲೆಗಳಲ್ಲಿರುವಂತೆಯೇ ಇವೆ, ಆದ್ದರಿಂದ, ಈ ಶಾಸನವು ಮೂಲಶಾಸನವೊಂದರ ಪ್ರತಿ ಯಾಗಿದ್ದು, ಕ್ರಿ.ಶ. ೯ನೆಯ ಶತಮಾನದ ಸುಮಾರಿಗೆ ಇದು ಹುಟ್ಟಿರಬಹುದೆಂದು ಮಾತ್ರ ಹೇಳಬಹುದು. ಆದರೂ ಇದು ಬಹಳ ಅಶುದ್ಧವಾಗಿ ತಯಾರಾದ ಪ್ರತಿ. ಇದಕ್ಕೆ ಉತ್ತಮ ನಿದರ್ಶನ ಉತ್ತನೂರಿನಲ್ಲಿ ದೊರೆತ ಗಂಗ ದುರ್ವಿನೀತನ ೩೦ನೇ ಆಳ್ವಿಕೆಯ ಶಾಸನ. ಇದು MA R. ೧೯೧೬ರ ಪು. ೪೪ರಲ್ಲಿ ಪ್ರಕಟವಾಗಿದೆ. ಈ ಶಾಸನದ ವಿವರಗಳನ್ನೇ ಒಳಗೊಂಡ ಮತ್ತೊಂದು ತಾಮ್ರಶಾಸನವೂ ದೊರಕಿದೆ. ಇದು ಒರಟಾದ ಕೆತ್ತನೆಯಿಂದ ಕೂಡಿದ್ದು ಕೃತಕ ತಾಮ್ರಶಾಸನದ ಎಲ್ಲ ಗುಣ ಗಳನ್ನೂ ಹೊಂದಿದ್ದರೂ ಮೇಲಿನ ಶಾಸನದ ಪ್ರತಿ ಎನ್ನುವುದು ಸ್ಪಷ್ಟ. ಈ ಶಾಸನವನ್ನು M.A-R. ೧೯೧೭, ಪು. ೩೭ರಲ್ಲಿ ಪ್ರಕಟಿಸಲಾಗಿದೆ. - ಒಟ್ಟಿನಲ್ಲಿ ಮಡಿಕೇರಿಯ ಈ ತಾಮ್ರಶಾಸನ ನೈಜವಲ್ಲವಾದ ಕಾರಣ ಇದರಲ್ಲಿ ಉಕ್ತವಾದ ಆಕಾಳವರ್ಷ ಪೃಥಿವಲ್ಲಭ ಅಥವಾ ಅವನ ಮಂತ್ರಿ ಮತ್ತು ದಾನದ ಇತರ ವಿವರಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕಾಗಿಲ್ಲ. ಇದರ ಅನಂತರ ನಾವು ಈ ಸಂಪುಟದ ೯೬ನೆಯ ಶಾಸನವನ್ನು ಇಲ್ಲಿ ಪರಿಶೀಲಿಸುತ್ತೇವೆ. ಈ ಶಿಲಾಶಾಸನದ ಕಾಲ ಶಕ ವರ್ಷ ೮೦೯ಕ್ಕೆ ಸರಿಹೋಗುವ ಕ್ರಿ.ಶ. ೮೮೮ನೆಯ ಫೆಬ್ರುವರಿ ೨೧ನೆಯ ದಿನ. ಇದೊಂದು ರಾಜಶಾಸನ, ಬಿಳಿಯೂರು ೧೨ ಗ್ರಾಮಗಳನ್ನು ಪೆಣ್ಣೆ ಗಡಂಗದ ಸತ್ಯವಾಕ್ಯಜಿನಾಲಯಕ್ಕಾಗಿ ಜೈನ ಯತಿಗಳಾದ ಶಿವನಂದಿಸಿದ್ದಾಂತ ಭಟಾರರ ಶಿಷ್ಯರಾದ ಸರ್ವ - 1 ಹೆಚ್ಚಿನ ವಿವರಗಳಿಗೆ Ind. Ant, ಸಂಪ್ರಟ [ ಮತ್ತು XII; E.I. III ಮತ್ತು VI: E.C.I, (ರೈಸರಿಂದ ಪರಿಷ್ಕೃತನಾದ ಆವೃತ್ತಿ), IV ಮತ್ತು VI (ರೆ. ಸ್ ಅವರು ಪ್ರಕಟಿಸಿದ ಮೊದಲನೆಯ ಆವೃತಿ) ನೆಯ ಸಂಪುಟಗಳಲ್ಲಿನ ಸೀಠಿಕೆಗಳನ್ನು ನೋಡಿ,