ಪುಟ:Hosa belaku.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಲ ಮಹಿಮೆ

೧೧೧

ಆಕ್ರಮಿಸ ತೊಡಗಿದರು. ಅವರ ಮನಸ್ಸಿನ ಮುಂದೆ ಕುಣಿಯುತ್ತಿದ್ದುದು ಅವರ ಮಗಳು ಶೀಲೆಯ ಮದುವೆಯ ಸಮಸ್ಯೆ.

ಹಾಗೆ ನೋಡಿದರೆ ಕೇಶವರಾಯರಿಗೆ ತಮ್ಮ ಮಗಳ ಲಗ್ನದ ಚಿಂತೆಯೇ ಇರಲಿಲ್ಲ. ಶೀಲೆ ಮತ್ತು ವಸಂತನ ಪ್ರೇಮ ಬೆಳೆದು ಬಂದುದು ಅವರಿಗೆ ಗೊತ್ತಿತ್ತು ಅವರಿಬ್ಬರು ಈ ಮೊದಲೇ ಪರಸ್ಪರರು ವಚನದದ್ಧರಾದುದೂ ಅವರಿಗೆ ಗೊತ್ತಿತ್ತು. ವಸಂತ ಕೇಶವರಾಯರಿಗೆ ಅಪರಿಚಿತನಲ್ಲ, ದೂರಿನವನೂ ಅಲ್ಲ, ವಸಂತ ಅವರ ಸೋದರಳಿಯ. ತಾಯಿಯನ್ನು ಕಳೆದುಕೊಂಡ ನಂತರ ವಸಂತ ಸ್ವಲ್ಪ ದೂರಿನವನಾಗಿದ್ದ. ಆದರೂ ವಸಂತನ ತಂದೆ ಮಾಧವರಾಯರು, ಕೇಶವರಾಯರಿಗೆ ಸ್ನೇಹಿತರಾಗಿಯೇ ಉಳಿದಿದ್ದರು. ನಡುವಿನ ಸೇತುವೆ ಮುರಿದಷ್ಟಕ್ಕೆ ಸಂಬಂಧ ಬಿಡಬಾರದೆಂದು, ಮಾಧವರಾಯರು ತಮ್ಮ ಹೆಂಡತಿ ತೀರಿದ ನಂತರ ತಮ್ಮ ಮಗ ವಸಂತನಿಗೆ, ಕೇಶವರಾಯನ ಮಗಳು ಶೀಲೆಯನ್ನು ತೆಗೆದುಕೊಂಡು, ಮುರಿದುಹೋದ ಸಂಬಂಧವನ್ನು ಭದ್ರಪಡಿಸಬೇಕೆಂದು ನಿಶ್ಚಯಿಸಿದ್ದರು. ಅವರ ಈ ಇಚ್ಛೆಯಿಂದ ಕೇಶವರಾಯರ ತಲೆಯ ಮೇಲಿನ ದೊಡ್ಡ ಭಾರ ಇಳಿದಂತಾಗಿತ್ತು.

ಇದೆಲ್ಲಕ್ಕೂ ಕಾರಣವೆಂದರೆ, ಕೇಶವರಾಯರ ಮತ್ತು ಮಾಧವರಾಯರ ಅನ್ಯೋನ್ಯ ಸ್ನೇಹ ಸಂಬಂಧ. ಮೇಲಾಗಿ ಇಬ್ಬರೂ ಸಮದುಃಖಿಗಳು. ಇಬ್ಬರೂ ಅಷ್ಟು ಶಿರಿವಂತರಾಗಿರಲಿಲ್ಲ. ಅವರಿಬ್ಬರೂ ಅದೇ ಊರಲ್ಲಿ ಬೇರೆ ಬೇರೆ ಕಚೇರಿಯಲ್ಲಿ ಕಾರಕೂನರಾಗಿದ್ದರು, ಈ ಮೊದಲು ಇಬ್ಬರೂ ಒಂದೇ ಓಣಿಯಲ್ಲಿ ಅಕ್ಕ ಪಕ್ಕದವರಾಗಿಯೇ ಇರುತ್ತಿದ್ದರು. ಆಗಿನಿಂದಲೇ ವಸಂತ ಮತ್ತು ಶೀಲೆಯರಲ್ಲಿ ಹೆಚ್ಚು ಸ್ನೇಹ ಬೆಳೆದು ಬಂದಿತ್ತು. ಮೇಲಾಗಿ ತಮ್ಮಿಬ್ಬರ ಮದುವೆಯಾಗುವದೇ ಖಂಡಿತ ಎಂಬುದು ಇಬ್ಬರಿಗೂ ಗೊತ್ತಾಗಿದ್ದರಿಂದ, ಅವರ ಸ್ನೇಹ, ಪರಿಚಯ, ಪ್ರೇಮಕ್ಕೆ ಯಾವ ಬಂಧನವೂ ಇರಲಿಲ್ಲ. ಇದೆಲ್ಲ ೫ ವರುಷಗಳ ಹಿಂದಿನವರೆಗೆ ಸುಸೂತ್ರವಾಗಿ ಸಾಗಿತ್ತು. ಮುಂದೆ ಮಾತ್ರ ಜಗತ್ತಿನಲ್ಲಿ ಮಹಾಯುದ್ಧ ಪ್ರಾರಂಭವಾಯಿತು. ಮಧ್ಯಮ ವರ್ಗದ ಜನ ಚಡಪಡಿಸಲಾರಂಭಿಸಿದರು. ಬಂದ ಪಗಾರವನ್ನು ಹೊಟ್ಟೆಗಾಗಿ ವೆಚ್ಚ ಮಾಡಿದರೆ, ಬಟ್ಟೆಗೆ ಕೊರತೆ ಬಿದ್ದು ಬತ್ತಲೇ ಇರುವ ಪ್ರಸಂಗ, ಬಟ್ಟೆಗೆ ವೆಚ್ಚ ಮಾಡಿದರೆ ಬರೀ ಹೊಟ್ಟೆಯಿಂದಿರಬೇಕಾದ ಪ್ರಸಂಗ ಅವರಿಗೆ ಬರ