ಪುಟ:Hosa belaku.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಲ ಮಹಿಮೆ

೧೧೩

ಬಟ್ಟೆಗೆ ಎಲ್ಲ ಸಂಬಳ, ಮುಗಿದು ಹೋಗುತ್ತಿತ್ತು. ಪ್ರತಿ ತಿಂಗಳು ಮನೆಯ ಬಾಡಿಗೆಯನ್ನು ಕೊಡುವದು ಅವರಿಗೆ ದುಸ್ತರವಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಮಾಧವರಾಯರ ಹಾಗೆ ತಾವೂ ಮನೆ ಕೊಳ್ಳುವ ಮಾತು ಅವರಾಡುವದು ಸಾಧ್ಯವಿರಲಿಲ್ಲ. ಒಂದು ವೇಳೆ ಅವರು ಆಡಬೇಕೆಂದಿದ್ದರೆ, ಅವರನ್ನು ಜನ ಹುಚ್ಚರಲ್ಲಿ ಎಣಿಸುತ್ತಿದ್ದರೆಂಬುದಕ್ಕೆ ಸಂದೇಹವೇ ಇಲ್ಲ.

ಆದರೂ ಕೇಶವರಾಯರಿಗೆ ಒಂದು ಸಮಾಧಾನವಾಗಿತ್ತು. ತಾವು ಸಿರಿವಂತರಾಗಲಿಲ್ಲವಾದರೂ ತನ್ನ ಅಳಿಯನಾದರೂ ಆ ಮಟ್ಟವನ್ನು ಮುಟ್ಟಿದನಲ್ಲಾ ಎಂದು ಶೀಲೆಯ ಸುಂದರ ಭವಿತವ್ಯದ ಸ್ವಪ್ನ ಅವರಿಗೆ ಅಂಥ ಬಡತನದಲ್ಲಿಯೂ ಆನಂದ ತಂದು ಕೊಡುತ್ತಿತ್ತು.

ಆ ಕನಸು ಇಂದು ನನಸಾಗುವದರಲ್ಲಿದೆ. ವಸಂತ ಇಂದು ೫ ವರುಷಗಳ ನಂತರ ಇಟಲಿ ರಣರಂಗದಿಂದ, ರಜೆಯನ್ನು ಪಡೆದುಕೊಂಡು ಮನೆಗೆ ಬಂದ ಸುದ್ದಿ ಕೇಳಿ ಕೇಶವರಾಯರು ಮಾಧವರಾಯರ ಮನೆಯತ್ತ ಶೀಲೆಯ ಮದುವೆಯ ಮಾತನ್ನಾಡುವದಕ್ಕೆ ನಡೆದಿದ್ದರು. ಈ ಐಯ್ದು ವರುಷಗಳ ಅವಧಿಯಲ್ಲಿ ಕೇಶವರಾಯರಿಗೆ ಮಾಧವರಾಯರು ಎರಡು ಮೂರು ಸಲ ಭೆಟ್ಟಿಯಾಗಿದ್ದರು. "ಮನೆ ದೂರಾಗಿದೆ" ಎಂಬ ನೆವ ಹೇಳಿ ತಮ್ಮ ಅಪರೂಪತೆಯನ್ನು ಮಾಧವರಾಯರು ಮರೆಮಾಡಿಕೊಳ್ಳತ್ತಿದ್ದರು.

ದಾರಿಯುದ್ದಕ್ಕೂ ನಡೆದಂತೆ ಕೇಶವರಾಯರ ಮನಸ್ಸಿನ ಮುಂದೆ ಹಿಂದಿನ ಈ ಕಥೆಯಲ್ಲ, ಚಲಚ್ಚಿತ್ರದಂತೆ ನುಸುಳಿ ಮಾಯವಾಯಿತು. ಈ ವೇಳೆಗಾಗಲೇ ಅವರು ಮಾಧವರಾಯರ ಬಂಗಲೆಯ ಗೇಟಿಗೆ ಬಂದಿದ್ದರು. ಮಾಧವರಾಯರ ಮನೆಯ ಬಾಗಿಲು ವಾಡಿಕೆಯಂತೆ ಮುಚ್ಚಿತ್ತು. ಅದೂ ಒ೦ದು ಕೇಶವರಾಯರಿಗೆ ಅಪಶಕುನವಾಗಿ ತೋರಿತು. ಆದರೂ ಬಾಗಿಲಿನಲ್ಲಿಯೇ ಇದ್ದ ಕಾಲ್ ಬೆಲ್ (ಕರೆಯುವ ಗಂಟೆ) ಕಂಡು ಧೈರ್ಯ ತಂದುಕೊಂಡ. ಅದರ ಬಿರಡೆಯನ್ನು ಅದುಮಿದರು. ಬಿರಡೆಯನ್ನು ಅದಮುವಾಗ ತಮ್ಮ ಕೈಗಳು ನಡುಗುತ್ತಿರುವುದು ಅವರ ಲಕ್ಷಕ್ಕೆ ಬಂದಿತು. ಎಷ್ಟಂದರೂ ತಾನು ಹೆಣ್ಣಿನ ತಂದೆಯಲ್ಲವೇ ಎಂದು ಸಮಾಧಾನ ತಂದುಕೊಂಡರು.

ಮರುಕ್ಷಣ ಬಾಗಿಲು ತೆರೆಯಿತು. ಬಾಗಿಲು ತೆಗೆದವನು ಬೇರೆ ಯಾರು