ಪುಟ:Hosa belaku.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ಕಾಲ ಮಹಿಮೆ


ಶೀಲೆ, ತಂದೆಯ ಹಾದಿಯನ್ನೇ ಕಾಯುತ್ತ ಕುಳಿತಿದ್ದಳು. ಕೇಶವರಾಯರು ಮನೆಗೆ ಬಂದು ಮಗಳಿಗೆ ನಡೆದ ಕತೆಯನ್ನು ಹೇಳಿದರು. ಸುದ್ದಿಯಿಂದ ಶೀಲೆ ಹತಾಶಳಾಗಿ ಹಾಸಿಗೆಯನ್ನೇ ಹಿಡಿದಳು. ತನ್ನ ಹಿಂದಿನ ದಿನಗಳನ್ನು ಜ್ಞಾಪಿಪಿಸಿಕೊಂಡು ಕಣ್ಣೀರನ್ನು ಕೋಡಿಯಾಗಿ ಹರಿಸಿದಳು. ತನ್ನ ಮತ್ತು ವಸಂತನಲ್ಲಿ ನಡೆದ ಪ್ರೇಮದ ಮಾತುಗಳನ್ನು ಜ್ಞಾಪಿಸಿ ಮತ್ತೆ ಮತ್ತೆ ಅಳುವದು ಅವಳಿಗೆ ಅಭ್ಯಾಸವಾಯಿತು. ನಡುನಡುವೆ ಕೇಶವರಾಯರು "ಬೇರೆ ಚಲೋ ವರ ನೋಡಿ ಮದುವೀ ಮಾಡಿ ಕೊಡ್ತೀನಿ, ವರಗಳಿಗೇನು ಕಡಿಮೆ" ಎಂದು ಮಗಳನ್ನು ಸಾಂತ್ವನಗೊಳಿಸುತ್ತಿದ್ದರು



ಮಾಸಗಳುರುಳುತ್ತಿದ್ದವು. ಹಾಗೆಯೇ ಒಂದು ವರ್ಷ ಕಳೆಯಿತು. ಒಂದು ದಿನ ಅಕಸ್ಮಾತ್ತಾಗಿ, ಶೀಲೆಯ ಹೆಸರಿನ ಪಾಕೀಟೊಂದನ್ನು ಪೋಸ್ಟಮನ್ ಕೇಶವರಾಯರ ಕೈಗಿರಿಸಿ ಹೋದ. ಕೇಶವರಾಯರು ಆಶ್ಚರ್ಯಚಕಿತರಾಗಿ ಪೋಸ್ಟಿನ ಮುದ್ರೆಯನ್ನು ನೋಡಿದರು. ಅದು ಪರದೇಶದ ಮುದ್ರೆಯಾಗಿತ್ತು. "ಶೀಲಾ" ಎಂದು ಕೇಶವರಾಯರು ಮಗಳನ್ನು ಕೂಗಿದರು.

ಮನೆಗೆಲಸದಲ್ಲಿ ತೊಡಗಿದ ಶೀಲಾ ಒಮ್ಮೆಲೇ ಧಾವಿಸಿ ತಂದೆಯ ಬಳಿಗೆ ಬಂದಳು. ಕೇಶವರಾಯರು ಪಾಕೀಟನ್ನು ಮಗಳ ಕೈಗಿರಿಸುತ್ತ "ನೋಡು, ನಿನ್ನ ಹೆಸರ್ಲೆ ಪಾಕೀಟು ಬ೦ದದ. ಒಡದು ಓದು. ಯಾರದದ ನೋಡು. ಬಹುಶಃ ವಸಂತ೦ದು ಅ೦ತ ಕಾಣಸ್ತದ. ಶೀಲಾ ಮರುಮಾತಾಡದೇ ಪತ್ರವನ್ನು ನಡುಗುವ ಕೈಗಳಿಂದಲೇ ಒಡೆದು ಓದತೊಡಗಿದಳು.

ಬರ್ಲಿನ (ಜರ್ಮನಿ)

ಪ್ರಿಯ ಶೀಲೆಗೆ––

ನಿನ್ನ ವಸಂತನ ಪ್ರೇಮಪೂರ್ವಕ ಆಶೀರ್ವಾದಗಳು. ತರುವಾಯ, ನೀನು ಮತ್ತು ಮಾವಾ ಇಬ್ಬರೂ ನನ್ನ ಮೇಲೆ ಕೋಪಿಸಿಕೊಂಡಿರಬಹುದು. ಆದರೆ, ನೀವು ಕೋಪಿಸಿಕೊಳ್ಳಬೇಡಿ. ನಾನು ಅಂದು ಐಶ್ವರ್ಯದ ಮದದಲ್ಲಿ