ಪುಟ:Hosa belaku.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

೧೫

ನಾನು ಗರತಿ, ಹಾಡುವ ಬೀದಿಯ ಹೆಣ್ಣಲ್ಲ; ನಾನು ಹುಟ್ಟುಗುರುಡಿಯಲ್ಲ !” ಎಂದು ಉತ್ತರಿಸಿ, ಹುಡುಗನ ಆಧಾರದಿಂದ ಕೋಣೆಬಿಟ್ಟು ಹೊರಟು ನಡೆದಳು.

ಕುರುಡಿಯ ಉತ್ತರ ಕೇಳಿ ಲೀಲಾಬಾಯಿಯವರು ಒಂದುಸಲ ನಕ್ಕುಬಿಟ್ಟರು. 'ಕುರುಡಿಗೂ ಕೈತುಂಬ ಸಂಬಳ ತರುವ ಗಂಡನಿದ್ದಾನೆಯೇ ? ಹಾಗಾದರೆ ಅವನು ಇವಳಿಗಿಂತಲೂ ಹೆಚ್ಚು ಕುರೂಪಿಯಾಗಿರಲಿಕ್ಕೆ ಸಾಕು !?' ಎಂದೆಂದುಕೊಂಡರು.


ರೇಡಿಯೋ ಕಾರ್ಯಕ್ರಮ ಮುಗಿಸಿ ಲೀಲಾಬಾಯಿಯವರು ಹೊರಗೆ ಬಂದರು. "ಇನ್ನೆಲ್ಲಿ ?" ಎಂದು ಅವರ ಮನಸ್ಸು ಕೇಳಿತು. "ಖಂಡಿತವಾಗಿ ಈಗಲೇ ಮನೆಗೆ ಹೋಗುವುದು ಬೇಡ !” ಎಂದುಕೊಂಡರು ಕೂಡಲೇ ಮುಜುಮ್‌ದಾರರ ನೆನಪು ಬಂದಿತು ಸದಾಶಿವನಿಗೆ ಅದೇ––

ಒಂದು ಸಲ ಲೀಲಾಬಾಯಿಯವರ ಕಣ್ಣೆದುರಿನಲ್ಲಿ ಆ ಕುರುಡಿಯ ಚಿತ್ರ ಸುಳಿಯಿತು. ಅವಳ ಆ ತುಂಬು ಗರ್ಭಿಣಿಯ ಚಿನ್ಹೆ, ಆ ಚಿತ್ರ ಮರೆಯಾದಂತೆ ಅವರ ಸುಪ್ತ ಕಾಮ ಕೆರಳಿತು. ಕುರುಡಿಯ ಕೂಡ ತನ್ನ ಹಸಿವನ್ನು––

ಮುಜುಮ್‌ದಾರರ ಪತ್ನಿ, ಅಂದೇ ತವರುಮನೆಗೆ ಹೋಗುತ್ತಾರೆಂಬ ಮಾತು ಅವರಿಗೆ ಗೊತ್ತಿತ್ತು. ಅವರು ಹೇಳಿದ ಪ್ರಕಾರ, ಈ ಹೊತ್ತಿಗೆ ಮುಜುಮ್‌ದಾರರು ಮನೆಯಲ್ಲಿ ಏಕಾಕಿ, ತಮ್ಮ ಮನಸ್ಸಿನಲ್ಲಿಯ ನಿರ್ಧಾರವನ್ನು ಜ್ಞಾಪಿಸಿಕೊಂಡರು, ಆ ನಿರ್ಧಾರಕ್ಕೂ ಮುಜುಮ್‌ದಾರರ ಪತ್ನಿಯು ತವರುಮನೆಯ ಪ್ರಯಾಣಕ್ಕೂ ಸರಿಹೋದದ್ದನ್ನೂ ಜ್ಞಾಪಿಸಿಕೊಂಡು, ಸಂತೋಷಪಟ್ಟರು. 'ಕೆಲಸಗಳು ಪೂರ್ತಿಯಾಗುವಂತಿದ್ದರೆ ಈ ರೀತಿ ಶುಭಶಕುನಗಳು ಜರಗುತ್ತವೆ !' ಎಂದು ಸಂತಸಬಟ್ಟರು. ಲೀಲಾಬಾಯಿಯವರು ಈಗ ಮನೆಯ ಕಡೆ ಹೊರಟಿರಲಿಲ್ಲ. ಅವರ ಕಾಲುಗಳು ಮುಜುಮದಾರರ ಮನೆಯತ್ತ ಸಾಗಿದ್ದುವು. ನಡೆಯುತ್ತಿದ್ದಂತೆಯೇ ಒಂದು ಸಲ ಲೀಲಾಬಾಯಿಯವರು, ತಮ್ಮ ಪರ್ಸನ್ನು ತೆಗೆದು, ಒಳಗನ್ನಡಿಯಲ್ಲಿ ತಮ್ಮ 'ಮುಖ