ಪುಟ:Hosa belaku.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೨೭

ದುರ್ಗುಣಗಳೂ ಇರಲಿಲ್ಲ. ತನ್ನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲವಿಧವೆ ವಾಸಂತಿ–"

"ಗರ್‌ರ್, ಗಕ್ಕ”

ಸುಬ್ಬ ಒಮ್ಮೆಲೇ ಸಾವರಿಸಿಕೊಂಡದ್ದನು. ಆಫೀಸಿನ ಹೊರ ಆವಾರದಲ್ಲಿ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ಕಾರು ಬಂದು ನಿಂತ ಸಪ್ಪಳವದು. ಆ ಕಾರಿನ ಸಪ್ಪಳದ ಜತೆಯಲ್ಲಿಯೇ, ಆಫೀಸಿನ ತುಂಬೆಲ್ಲ ರುದ್ರಗಂಭೀರ ಪರಿಸ್ಥಿತಿ ನೆಲಸಿತು. ಟಾಯಿಪಿಸ್ಟರು ಟಾಯಿಪ ಮಾಡುವದರಲ್ಲಿ ತೊಡಗಿದರು. ಜವಾನರು ಕೈಯಲ್ಲಿದ್ದ ಬೀಡಿ ತುಂಡುಗಳನ್ನೆಸೆದು, ಸಾವರಿಸಿಕೊಂಡು ಎದ್ದುನಿಂತರು. ಗುಮಾಸ್ತರೆಲ್ಲ ತಮ್ಮೆದುರಿನ ಕಾಗದದ ರಾಶಿಯಲ್ಲಿ ಕೈ ಹಾಕಿ ತುಂಬುಕೆಲಸದಲ್ಲಿ ತೊಡಗಿದ ಭಾವವನ್ನು ಮುಖದ ಮೇಲೆ ತಂದಿರಿಸಿದರು. ಆಫೀಸಿನ ತುಂಬೆಲ್ಲ ಸ್ಮಶಾನಶಾಂತಿ ವ್ಯಾಪಿಸಿತು. ಬಿರುಗಾಳಿಯ ಪೂರ್ವದಲ್ಲಿಯ ಶಾಂತತೆಯ ನೆನಪನ್ನು ಮಾಡಿಕೊಡುತ್ತಿತ್ತು ಈ ಸ್ಮಶಾನಶಾಂತತೆ.

ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರು ಆಫೀಸಿನು ಮಧ್ಯದಿಂದ ಹಾಯ್ದು ನೇರಾಗಿ ತಮ್ಮ ಕೋಣೆಗೆ ಹೋದರು. ಆ ರುದ್ರಗಂಭೀರ ಮೂರ್ತಿ ಕೋಣೆ ಸೇರುವವರೆಗೂ ಎಲ್ಲ ಕಾರಕೂನರ ಕೈಗಳು ನಡುಗುತ್ತಲೇ ಇದ್ದವು.

"ಟ್ರಿನ್.....ಟ್ರಿನ್.... ಟ್ರಿನ್...." ಗೋಪಾಲಸ್ವಾಮಿಯವರ ಕೋಣೆಯೊಳಗಿಂದ ಕರೆಯುವ ಗಂಟೆಯ ಸಪ್ಪಳವಾಯಿತು. ಕೂಡಲೇ ಆಫೀಸು ಜವಾನ ಕೊಣೆಯನ್ನು ಪ್ರವೇಶಿಸಿದ. ಆಫೀಸಿನಲ್ಲಿದ್ದ ಮೂವತ್ತು ಗುಮಾಸ್ತೆಯರ ಕಣ್ಣು ಜವಾನನು ತಿರುಗಿ ಬರುವದನ್ನು ನಿರೀಕ್ಷಣೆ ಮಾಡತೊಡಗಿದವು. ಆಫೀಸ ಜವಾನ ಒಮ್ಮೆ ಹೊರಗೆ ಬಂದು, ಸುಬ್ಬನ ಬಳಿ ಸಾರಿ "ಸಾಹೇಬರು ತಮ್ಮನ್ನು ಕರೆದಿದ್ದಾರೆ” ಎಂದು ಹೇಳಿದ. ಆದರ ನಿರೀಕ್ಷಣೆಯಲ್ಲಿಯೇ ಇಬ್ಭ ಸುಬ್ಬಣ್ಣ ನಿರ್ವಿಕಾರನಾಗಿಯೇ ಕೋಣೆಯನ್ನು ಪ್ರವೇಶಿಸಿದನು.

ಗುಮಾಸ್ತರ ತಂಡವೆಲ್ಲ ಕಾಲುಸಪ್ಪಳವನ್ನೇನೂ ಮಾಡದೆ ಹಾಗೆಯೇ ಖೋಲಿಯ ಹೊರಬದಿಗೆ ಕೂಡಿತು. ನಡೆಯುವ ಗಲಾಟೆಯ ಬಗ್ಗೆ ಕುತೂ