ಪುಟ:Hosa belaku.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ಹೊಗೆಯಿಂದ ಹೊರಗೆ

"ಅಧೇಗೆ?
"ಮನೆಗೆ ಬರೋ ಮಹಾಲಕ್ಷ್ಮೀನ್ನ ಸ್ವಾಗತ ಮಾಡಲಿಕ್ಕೂ ಬರೋದಿಲ್ಲಾ? "
"ಯಾವ ಮಹಾಲಕ್ಷ್ಮಿ"
"ರಾತ್ರಿಯಿಂದ ಬೆಳಗಿನವರೆಗೆ ರಾಮಾಯಣ ಕೇಳಿ, ರಾಮ ಸೀತಾಳಿಗೆ ಏನಾಗಬೇಕು ಎಂದು ಕೇಳಿದ ಹಾಗೆ ಪ್ರಶ್ನೆ ಮಾಡುತ್ತೀಯಲ್ಲಪ್ಪಾ."
"ನಿಮ್ಮ ಮಾತಿನ ಅರ್ಥವೇ ನನಗಾಗೋದಿಲ್ಲ."

"ನೀನು ಒಳ್ಳೆ ಚುರುಕಾಗಿ ಕಂಡುಬಿಟ್ಟರೆ ಡಾಯರೆಕ್ಟರು ನಿನ್ನನ್ನೇ ದತ್ತಕ ತೆಗೆದುಕೊಳ್ಳಲಿಕ್ಕಿಲ್ಲವೇ? ದತ್ತಕ ತೆಗೆದುಕೊಂಡ ಮೇಲೆ, ಈ ಹಾಳು ಜೀವನದಿಂದ ನೀನು ಮುಕ್ತನಾಗುವದಿಲ್ಲವೇ? "ಈ ಮಾತನ್ನು ಕೇಳಿ ಜಸವಂತಸಿಂಗ ಗಹಿಗಹಿಸಿ ನಕ್ಕುಬಿಟ್ಟ. ಆ ನಗೆಯಲ್ಲಿ ನಿರಾಶೆ ತುಂಬಿ ತುಳುಕುತ್ತಿತ್ತು. ನಗುವಿನ ಕೊನೆಯಲ್ಲಿ ಜಸವಂತ ಸಿಂಗ ಹೇಳಿದ:

"ನೀವು ನನಗೆ ಹೇಳುವ ಮಾತು ಕೇಳಿ ನನಗೊಬ್ಬರಾದರೂ ಹಿತಚಿಂತಕರು ಸಿಕ್ಕರಲ್ಲವೆಂದು ಆನಂದವಾಯಿತು. ಆದರೆ ಜಗತ್ತಿನಲ್ಲಿ ನಾಲ್ಕುದಿನ ಬಾಳಬೇಕೆನ್ನುವವರಿಗೆ ಹಿತಚಿಂತಕರ ಅವಶ್ಯಕತೆ. ದಿನಗಳನ್ನು ಎಣಿಕೆ ಹಾಕುತ್ತಿದ್ದವನಿಗೆ ಅದರ ಆವಶ್ಯಕತೆ ಎಲ್ಲಿ?"

ಭರ್ತಿ ಯೌವನದ ವಯಸ್ಸಿನಲ್ಲಿದ್ದ ಜಸವಂತಸಿಂಗನ ಮರಣದ ಮಾತುಗಳನ್ನಾಡುವದನ್ನು ನೋಡಿ ದಯಾಲಸಿಂಗನಿಗೆ ಆಶ್ಚರ್ಯವಾಯಿತು. ಯುವಕರು ಮರಣದ ಮಾತನ್ನಾಡುವದು ಪಾಪವೆಂದೇ ದಯಾಲನ ಅಭಿಪ್ರಾಯವಾಗಿತ್ತು. ಮೇಲಾಗಿ ತಾವು ಶೀಖರಜಾತಿಯಲ್ಲಿ ಹುಟ್ಟಿದ್ದೇವೆ. ಸಿ೦ಹರಿದ್ದಂಥ ತಾವು ಸುಲಭವಾಗಿ ಸಾಯತಕ್ಕದ್ದಲ್ಲ. ಜಸವಂತನ ಇಂಥ ಮಾತು ಕೇಳಿ, ನಿಜಕ್ಕೂ ದಯಾಲನಿಗೆ ಕರುಣೆಯಾಯಿತು. ನಿರ್ವಾಸಿತ ಕ್ಯಾಂಪಿನಲ್ಲಿ ಬಂದ ಎಲ್ಲರೂ ತಮ್ಮ ದುಃಖಾಂತ ಕತೆಗಳನ್ನು ದಯಾಲನ ಮುಂದೆ ಹೇಳಿದ್ದರು. ಆದರೆ ಜಸವಂತಸಿಂಗ ಯಾವಾಗಲೂ ಬಾಯನ್ನೇ ಬಿಡುತ್ತಿರಲಿಲ್ಲ. ಯಾವಾಗಲೂ ಉದಾಸೀನನಾಗಿಯೇ ಇರುತ್ತಿದ್ದ. ಆತನ ಉದಾಸೀನತೆಯ ಹಿಂದೆ ಯಾವದೋ ದುಃಖವಿರಲೇಬೇಕು ಎಂದು ದಯಾಲ ತಿಳಿದುಕೊಂಡ. ಅದಕೆ