ಪುಟ:Hosa belaku.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೈರಾಗ್ಯ-ವೈಯಾರ

೭೯

ಹೋಗಿಬಿಡುತ್ತಿದ್ದಳು. ಇದು ದಿನದ ರೂಢಿಯಾಗಿ ಹೋಗಿತ್ತು. ಅವನು ಹೇಳುತ್ತಿರುವ ವೈರಾಗ್ಯದ ಕತೆಗಳನ್ನು ಕೇಳಿ ನಾನು ಒಂದು ಸಲ--

"ನಿಂದು ಮದಿವಿ ಆಗೈತೇನು ಗುಡದಪ್ಪ" ಎಂದು ಕೇಳಿದ್ದೆ. ಅದಕ್ಕೆ ಪ್ರತಿಯಾಗಿ ಗುಡದಪ್ಪ "ನಮ್ದೇನೈತ್ರಿ" ಎಂದು ಉದಾಸೀನತೆಯಿಂದ ಹೇಳಿಬಿಟ್ಟಿದ್ದ.

ನಿಜವಾದ ವಿರಕ್ತ ವೇದಾಂತಿ ಎಂದು ಮನದಲ್ಲಿಯೇ ಅಂದುಕೊಂಡು ಅವನನ್ನು ಬೀಳ್ಕೊಟ್ಟೆ. ಆಗ ಗುಡುದಪ್ಪನ ಕಣ್ಣಲ್ಲಿ ಎರಡು ಹನಿಗಳು ಮೂಡಿದ್ದು ನನಗೆ ಕಂಡಿತ್ತು. ಈ ಮದುವೆಯ ಮಾತು ಕೇಳಿದ ಮುದುಕಿ ಅವನ ತಾಯಿ ನಿರಾಶೆಯ ಧ್ವನಿಯಲ್ಲಿ ಉತ್ತರಿಸಿದ್ದಳು.

"ಅಂವ ಏನು ಮನಿ ಮಾಡಾಕ ಹುಟ್ಟ್ಯಾನೇನ್ರಿ? ಸನ್ಯಾಸಿ ಆಗಿ ಸಾಯಲಾಕ ಹುಟ್ಟೈತಿ ಬೇಬರ್ಸಿ."



ಒಮ್ಮೆ ಆ ಊರಲ್ಲಿ ಪ್ಲೇಗು ಹಾವಳಿ ಹಬ್ಬುವದರಲ್ಲಿತ್ತು. ಆಗ ಊರಲ್ಲಿ ಪ್ಲೇಗ ವ್ಯಾಕ್ಸಿನೇಟರು ಬಂದಿದ್ದರು. ಸಾಲೆಯ ಹುಡುಗರಿಗೆ ಅಂದು ಜಾತ್ರೆಯಾದಂತೇ ಆಗಿತ್ತು. ಪ್ಲೇಗಿನ ಇಂಜೆಕ್ಷನ್ ಚುಚ್ಚಿಸಿಕೊಳ್ಳುವದಕ್ಕೆ ನಮಗೆಲ್ಲರಿಗೂ ಚಾವಡಿಗೆ ಹೋಗಬೇಕಾಯಿತು. ನಾನಾಗ ಬಲು ಅಂಜುಬುರುಕ. ಎಲ್ಲರೂ ಚುಚ್ಚಿಸಿಕೊಳ್ಳುವವರೆಗೆ ವ್ಯಾಕ್ಸಿನೇಟರರ ಕಣ್ಣ ಮರೆಯಾಗಿಯೇ ಉಳಿದೆ. ಆದರೇನು ನನ್ನ ಸರತಿ ಬರುವ ಹಾಗೆ ಬಂದೂಬಿಟ್ಟಿತು. ವ್ಯಾಕ್ಸಿನೇಟರರ ಕೈಯಲ್ಲಿ ಕೈಗೊಟ್ಟು, ಕಣ್ಣು ಮುಚ್ಚಿ ನಿಂತುಬಿಟ್ಟೆ. ನಿಮಿಷದಲ್ಲಿ ಚುಚ್ಚುವದೂ ಮುಗಿಯಿತು. ಹುಡುಗರೆಲ್ಲರ ಸರತಿ ಮುಗಿದ ನಂತರ, ಊರ ಹೆಂಗಸರೆಲ್ಲ ವ್ಯಾಕ್ಸಿನೇಶನ್ನಿಗಾಗಿ ಬಂದರು. ಅವರು ಒಬ್ಬೊಬ್ಬರಾಗಿಯೇ ಬಂದಿರಲಿಲ್ಲ, ಚಿಕ್ಕ ಮಕ್ಕಳೂ ಅವರನ್ನು ಹಿಂಬಾಲಿಸಿದ್ದವು. ವ್ಯಾಕ್ಸಿನೇಟರರು ಒಬ್ಬೊಬ್ಬರಿಗೆ ಮದ್ದನ್ನು ಚುಚ್ಚಿ, ಅವರ ಹೆಸರನ್ನೂ ಅವರ ಗಂಡಂದಿರ ಹೆಸರನ್ನೂ ಪದ್ಧತಿಯಂತೆ ರಜಿಸ್ಟರದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕೊನೆಯವನಾಗಿ ಬಂದ ತಪ್ಪಿಗೇನೋ ಅವರು ಬರೆಯುವ ಕೆಲಸವನ್ನು ನನ