ಈ ಪುಟವನ್ನು ಪ್ರಕಟಿಸಲಾಗಿದೆ
ಬಾಪೂಜಿ!... ಬಾಪೂ!... 3
“ನನಗೆ ಪ್ರಣಾಮ ಮಾಡಲು ಅರ್ಹತೆಯಿಲ್ಲ ನಿನಗೆ!” ಎಂದು ಆ ರುಂಡ ಮೆಲ್ಲನೆ ಮಾತಾಡಿತು:
"ನನ್ನನು ನೀನು ವಂಚಿಸಿದ್ದೀಯ."
ಸೇಠ್ ಜಿ ಕುಸಿಕುಳಿತರು.
ರುಂಡ ಮಾತಾಡಿತು ನಿಧಾನವಾಗಿ:
“ಸತ್ಯ..ಅಹಿಂಸೆ..ಗ್ರಾಮಗಳ ಉದಾರ...ಆ..ಆ...”
ಕಂಬನಿ ತಟಕುತಟಕಾಗಿ ಆ ರುಂಡದ ಗುಳಿಗಳಲ್ಲಿ ಅಡಗಿದ್ದ ಕಣ್ಣುಗಳಿಂದ ಕೆಳಗೆ ಹರಿದು ಉರುಳಿತು..
... ಸೇಠ್ ಜಿಗೆ ಪುನಃ ನಿದ್ರೆ ಬಂದಿತು...
...ಸತ್ಯ? ಅಹಿಂಸೆ? ಗ್ರಾಮೋದ್ಧಾರ ?
ಚಹಾಪಾನ ಮಾಡುತ್ತಿದ್ದ ಸೇಠ್ ಜಿ ಮುಗುಳ್ನಕ್ಕರು.
ಸತ್ಯ? ರಾಜಕಾರಣದಲ್ಲಿ ಸತ್ಯಕ್ಕೆ ಸ್ಥಾನವೆಲ್ಲಿ? ಒಬ್ಬರು ಮತೊಬ್ಬರನ್ನು ವಂಚಿಸುವ, ಸೋಲಿಸುವ,
ನಾಶಮಾಡುವ ತಂಡ ರಾಜಕಾರಣಜ್ಞರದು.
ಅಹಿಂಸೆ? ಈ ಮಾತಿಗೆ ಅರ್ಥವಿಲ್ಲ. ಕೂಲಿಗಾರರಿಗೆ ಹಿಂಸೆ ಕೊಡದೆ ಹೋದರೆ ಅವರು
ದುಡಿಯುವರೆ? ಹಿಂಸೆ ಇಲ್ಲದೆ ಸ್ವತಂತ್ರ ಭಾರತದ ರಕ್ಷಣೆ ಯಾಗುವುದೆ?
ಹುಂ!?
ಗ್ರಾಮೋದ್ಧಾರ? ಜಮೀನ್ದಾರರು ಆ ಭಾರ ಹೊತ್ತಿರುವರಲ್ಲ! ಇಷ್ಟ ರಿಂದ ಬಾಪೂಜಿ
ಸಂತುಷ್ಟರಾಗಲೇಬೇಕಲ್ಲ?
* * *
“ನನ್ನ ಸರ್ವಸ್ವವೇ!” ಎಂದು ಹೋರಿಗಳನ್ನು ಪ್ರೀತಿಯಿಂದ ಮೈದಡವುವ ರೈತನಿಲ್ಲ-ತನ್ನ ಹೊಲ
ಇದೆಂದು ಮಣ್ಣನ್ನು ಆತ ಮುದ್ದಿಸುವ ಹಾಗಿಲ್ಲ...
ಹಗಲು ಹೊಲದಲ್ಲಿ ದುಡಿದು ಹೊತ್ತು ತಿರುಗಿದಾಗ, ಹೆಂಡತಿ ತರುವ ಬುತ್ತಿಯನ್ನು ತಿಂದು ತೇಗುವ,
ತನ್ನ ದುಡಿತದ ಫಲವೆಂದು ತೆನೆ ಬಿಟ್ಟು ಜೂಲಾಡುವ ಭತ್ತದ ಸಸಿಗಳನ್ನು ಕಂಡು ತಲೆದೂಗುವ-
ಬೋರೇಗೌಡನಿಲ್ಲ!
ಓ!..ಅದೆಷ್ಟು ಜನ ನಿರುದ್ಯೋಗಿಗಳು!
* * *
ಸರ್ರ್ ಸರ್ರ್‍ರ್...
ಚರಕದ ಸದ್ದು! ಹ್ಹಾ!
ಅಲ್ಲೊಬ್ಬ ಮುದುಕ ನೂಲೆಳೆಯುತ್ತಿದ್ದಾನೆ-ಎಣ್ಣೆಯಾರುತ್ತಲಿರುವ