ಪುಟ:Kalyaand-asvaami.pdf/90

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ಕಲ್ಯಾಣಸ್ವಾಮಿ

ಸರಿದಿದ್ದ ನುಣುಪಾದ ತಲೆಗೂದಲು, ಹರವಾದ ಹಣೆ, ಕುಡಿಮೀಸೆ, ಗಾಂಭೀರ್ಯವನ್ನು ಸೂಸುತ್ತಿದ್ದ ಗಲ್ಲ, ಯೋಚನೆಯಲ್ಲಿ ಮಗ್ನನಾದಾಗಲೂ ಮೆರೆಯುತ್ತಿದ್ದ ಮಂದಹಾಸ, ವಿಶಾಲವಾದ ಎದೆ.....

ತೀರ್ಮಾನವಾಗದೆ ಉಳಿದಿದ್ದ ಬಹುಮುಖ್ಯವಾದೊಂದು ವಿಷಯವನ್ನು ಪ್ರಸ್ತಾಪಿಸುತ್ತ ನಂಜಯ್ಯನೆಂದ: "ದಿನ ಗೊತ್ತು ಮಾಡೋದು ವಾಸಿ,ಅಲ್ವೆ?" ಆವರೆಗೂ ಮೌನವಾಗಿಯೇ ಕುಳಿತಿದ್ದ ಮಾಚಯ್ಯನೆಂದ: "ಇನ್ನು ಒಂದು ವಾರದೊಳಗೆ ಕೊಯ್ಲು ಶುರುವಾಗ್ತದೇಂತ ಸೋಮಯ್ನೋರು ಆಂದರು." "ನಮ್ಮಲ್ಲಂತೂ ಕೊಯ್ಲಿನ ಕೆಲಸ ಮುಗೀತಾ ಬಂತು," ಎಂದ ರಾಮಗೌಡ. "ಈ ತಿಂಗಳಲ್ಲೇ ಶುರು ಮಾಡೋಣ. ಆಗದೆ ನಂಜಯ್ಯನವರೆ?" "ಆದೀತು." "ಹಾರುವಯ್ಯನೋರಿಗೆ ಹೇಳಿ ಕಳಿಸೋಣವೇ? ದಿನ ನಿಷ್ಕರ್ಷೆ ಮಾಡಲಿ." ಆ ವಿಷಯವಾಗಿ ಆಗಲೆ ಯೋಚಿಸಿದ್ದ ರಾಮಗೌಡನೆಂದ: "ನಿಮಗೆಲ್ಲಾ ಒಪ್ಪಿಗೆಯಾಗೋ ಹಾಗಿದ್ದರೆ ನಾನೊಂದು ಸೂಚನೆ ಮಾಡ್ತೀನಿ." "ಅಗತ್ಯವಾಗಿ ಹೇಳಿ" ಎಂದ ಪುಟ್ಟಬಸವ. "ಕೊಡಗಿನಲ್ಲಿ ತಯಾರಿ ನಡೀತಾನೇ ಇರಲಿ. ಯುಗಾದಿ ದಿವಸ ಸುಳ್ಯದಲ್ಲಿ ಸ್ವಾತಂತ್ರ್ಯ ಜಾಹೀರು ಮಾಡಿ ಮುಂದಕ್ಕೆ ಹೊರಡೋಣ." ಆ ಸೂಚನೆಯನ್ನು ಕುರಿತೇ ಎಲ್ಲರೂ ಯೋಚಿಸಿದರು.ಪುಟ್ಟಬಸವನ ದೃಷ್ಟಿ ತನ್ನೆಡೆಗೆ ಸರಿದುದ್ದನ್ನು ಕಂಡು ಚೆಟ್ಟ ನುಡಿದ: "ಆಗಬೌದೂಂತ ತೋರ್ತೇತೆ." ನಂಜಯ್ಯನೂ ಸಮ್ಮಿತಿ ಸೂಚಕವಾಗಿ ತಲೆಯಾಡಿಸಿದ. ಪುಟ್ಟಬಸವ ನಕ್ಕು ನುಡಿದ: "ಗೌಡರು ಎಲ್ಲಾ ಮೊದಲೇ ತೀರ್ಮಾನಿಸ್ಕೊಂಡು ಬಂದಿರೋ ಹಾಗಿದೆ!"