ಪುಟ:Kannada-Saahitya.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರ:ಇಳು ವಾಮರಥನ ವಲಸರುಷನಾದ ಪದ್ಮರಥಗೆ ಕಿಚಂದ್ರನ ಮೆಟ್ಟಿ ಕೊಟ್ಟಿದ್ದ ಸರ್ವರುಜಾಪಹಾರವೆಂಬ ಒಂದು ಸಂ.ಕ್ರಮ ದಿಂದ ವಾಮರಥನಿಗೆ ಬಂದಿತ್ತು, ಅದನ್ನು ಆತನು ಒತವಸದ ಎಳೆದು ಅಂತಸ್ತಿನಲ್ಲಿ ತನ್ನ ಮಲಗುವ ಕೋಣೆಯಲ್ಲಿ ಒಂದು ಪೆಟ್ಟಿಗೆಯಲ್ಲಿರುವನು. ಎಲ್ಲ ಕಾಲದಲ್ಲೂ ಗಂಧ ಪುಷ್ಪ ದೀಪ ಧೂಪ ಅಕ್ಷತಗಳಿಂದ ಪೂಜಿಸಿ ನವ ಸ್ಕಾರ ಮಾಡುತ್ತಿರ.ವನು. ವಿದ್ಯುಜ್ಯೋಬನು ಕಣ್ಣಿಗೆ ಅ೦ಜನ ಎತ್ತಿಕೊಂಡು ಯಾರೂ ತನ್ನನ್ನು ಕಾಣದಂತಾಗಿರಲು ಅರಮನೆಯನ್ನು ಹೊಕ್ಕು ದೊರೆಯ ಮಲಗುವ ಕೋಣೆಗೆ ನುಗ್ಗಿ, ತಲೆದೆಸೆಯಲ್ಲಿ ಪೂಜೆ ಮಾಡಿದ್ದ ಇಟ್ಟಿಗೆಯನ್ನು ತೆರೆದು ಆ ಹಾರವನ್ನು ತೆಗೆದುಕೊಂಡು ಅರಮನೆಯಿಂದ ಹೊರ ಬಿದ್ದು ಹೊ ಊರ ಹೊರಗಿನ ಗುಹೆಯಲ್ಲಿ ಹೂಳಿಟ್ಟ, ಪಟ್ಟಣಕ್ಕೆ ಬಂದು ಮೊದಲಿ ನಂತೆಯೆ ತೊನ್ನು ರೂಪು ಮಾಡಿಕೊಂಡಿದ್ದನು. ಇತ್ತ ಅರಸನು ನಸರು ಮಡಿವಾಗ ಹಾರವನ್ನು ಕಣಜಿ, ಆಸ್ವಾನ ಮಂಟಪದಲ್ಲಿ ಸಿಂಹಾಸದನ ಮೇಲೆ ಕೂತು ತಳ: ರನದ ಯಮದಂಡನಿಗೆ ಹೇಳಿಕಳಿಸಿ ಕರಸಿದನು. ಕರಸಿ, " ಎಲವೋ ಯಮದಂಡಾ, ಪಟ್ಟಣದ ಹಾರುವರ, ಹರದರ, ಸೂಳೆಯರ, ಒಕ್ಕಲಮಕ್ಕಳ ಒಡವೆಯನ್ನೆಲ್ಲ ಕದ್ದರೂ ವಿಚಾರಿಸದೆ ಸುಮ್ಮನಿದ್ದಿದೆ. ಅಲ್ಲದೆ ನಮ್ಮ ಸಚ್ಚೆಮಯ ಕಳ್ಳನು ಹೋಕು ಪೆಟಕಿ ತೆರೆದು ಒಚ್ಚು ತೇ೦ದ್ರ ಕುಲಭವಾದ ಮಾಗ್ರವನ್ನು $ಗೆದ ಕೊಂಡು ಹೋವನು, ಬೇಗ ಕಳ್ಳನನ್ನು ಗೋವ: ಸಾರವನ್ನು ತೆಗೆದ ಕೊಂಡು ಬಾ ತಾಗೆ ತರದಿದ್ದರೆ ಕಳ್ಳನಿಗೆ ತಕ್ಕ ಸಿಗ್ರಹವನ್ನು ನಿನಗೆ ಮಾಡುವೆನು ?? ಎಂದನು. ಕೇಳಿ ತಳರನು, “ ದೇವಾ ನನಗೆ ಏಳು ದಿನ ಅವಕಾಶ ಕೊಡಬೇಕು, ಏಳು ದಿವಸದೊಳಗೆ ಕಳ್ಳನನ್ನು ಕಂಡುಹಿಡಿಯದೆ ಹೋದೆನ:ದರೆ, ದೇವರು ನನ್ನನ್ನು ಮೆಚ್ಚಿದಂತೆ ಮಾಡಬಹುದು ” ಎಂದನು. ದೊರೆ ಆದಕೊಪ್ಪಿದನು. - ತಳಾರನು ಪಟ್ಟಣದಲ್ಲಿ ಸೂಳೆಗೇರಿಗಳಲ್ಲೂ ಅಂಗಡಿಗಳಲ್ಲ ಬಸದಿ ಗಳಲ್ಲೂ ವಿಹಾರಗಳಲ್ಲೂ ಕೇಶಿರ್ಕೆರಿಗಳಲ್ಲಿ ಆರಾಮಗಳಲ್ಲಿ ದೇವಾ ಲಯಗಳ ಪಟ್ಟಣದ ಹೊರಗೂ ಒಳಗೂ, ಅಕ್ಕಪಕ್ಕದ ಪಟ್ಟಣಗಳ ಸ್ಥಿರ.