ಪುಟ:Kannada-Saahitya.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

2] ಭರತ-ಬಾಹುಬಲಿ ೧೭

ವನ್ನು ಮಾಡಿ ತೋರಿಸಿ ಆನಂದ ನೃತ್ಯವನ್ನಾಡಿದರು.  ಜಿನ ಶಿಶುವಿಗೆ ಒಡ
ನಾಡಿಗಳಾಗಿರಲು  ಕೆಲವರ  ದೇವಕುಮಾರರನ್ನು  ಅಲ್ಲಿ  ಬಿಟ್ಟು  ಸ್ವರ್ಗಕ್ಕೆ
ಪ್ರಯಾಣಮಡಿದರು.
    ಋಷಭದೇವನು ದೇವತೆಗಳ ಒಡನಾಟದಲ್ಲಿ  ಬೆಳೆಯುತ್ತ  ಬಲ್ಯವನ್ನು
ಕಳೆದು ಯೌವನದಲ್ಲಿ ಅಡಿಯಿಟ್ಟನು. ಆಗ ಅವನ ರೂಪು ಅದ್ಬುತವಾಗಿತ್ತು;
ಸಮಸ್ತರನ್ನೂ ಮುಗ್ಧಮಾಡುತ್ತಿತ್ತು.  ಆದರೂ ಅವನಿಗೆ ಮುಕ್ತಿಸಾಧನೆಯೇ
ಗುರಿಯಾಗಿ ಸಂಸಾರದಲ್ಲಿ ಅನಾದರವುಂಟಾಯಿತು.  ನಾಭಿರಾಜನು ಮಗನ
ಅತಿಶಯವಾದ ಈ  ರೂಪವೈಭವವನ್ನು  ಕಂಡು ಅವನಿಗೆ ಮದುವೆ ಮಾಡ
ಬಯಸಿದನು.  ಅವನ  ಮನಃಸ್ಥಿತಿಯನ್ನರಿತು, 'ಏನೆನ್ನುವನೋ'  ಎಂದು 
ಅಳುಕಿದನು.  ಅಂಜುತ್ತಂಜುತ್ತಲೆ ತನ್ನ ಆಸೆಯನ್ನು  ಮಗನಿಗೆ ತಿಳಿಸಿದನು.
ಋಷಭನು   ತಂದೆತಾಯಿಗಳ   ಸಂತೋಷಕ್ಕಾಗಿಯೂ    ಲೋಕಾನುಗ್ರಹ
ಕ್ಕಾಗಿಯೂ ಮದುವೆಗೆ ಒಡಂಬಟ್ಟನು.  ಯಶಸ್ವತಿ, ಸುನಂದೆ ಎಂಬ ಇಬ್ಬರು
ಕನ್ಯೆಯರನ್ನು  ಆತನಿಗೆ  ಮದುವೆ  ಮಾಡಿದರು.   ಸರ್ವಪ್ರಕಾರದಿಂದಲೂ
ಅವರು ಆತನಿಗೆ ತಕ್ಕವರು.  ತಮ್ಮ ಗುಣಶೀಲಗಳಿಂದ ಆ ಪರಮನು ಮನ
ಸ್ಸನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು; ತಮ್ಮ ಸರ್ವಪ್ರೆಮವನ್ನೂ  ಆ ಪರ
ಮೇಶ್ವರನಿಗೆ ಅರ್ಪಿಸಿದರು.  ಆದರ್ಷ ದಂಪತಿಗಳಾಗಿ ಅವರು ಕಾಲ ಕಳೆಯು
ತ್ತಿದ್ದರು.
                    ಭರತನ ಜನನ
    ಸಂಸಾರ ಸುಖದ ಸಾರವನ್ನು ಸವಿಯುತ್ತಿದ್ದ ಆ ದಂಪತಿಗಳಿಗೆ  ಕಾಲ
ಕಳೆದದ್ದೇ ಗೊತ್ತಾಗಲಿಲ್ಲ.  ಅನೇಕ ವರ್ಷಗಳು ಕಳೆದ ಬಳಿಕ ಒಂದು ದಿನ
ಹಿರಿಯ ರಾಣಿ ಯಶಸ್ವತಿ  ನಿದ್ರಿಸುತ್ತಿದ್ದಾಗ  ಸೂರ್ಯ,  ಚಂದ್ರ,  ಮೇರು
ಪರ್ವತ,  ಸಮುದ್ರ,  ಪದ್ಮದಲ್ಲಿ  ಉದ್ಭವಿಸಿ ಎದ್ದು ಬರುತ್ತಿದ್ದ ಲಕ್ಷ್ಮಿ, ಕಲ್ಪ
ವೃಕ್ಷ-ಇವನ್ನು  ಕನಸಿನಲ್ಲಿ ಕಂಡಳು.   ಆ ಕನಸನ್ನು ಆದಿನಾಥನಿಗೆ  ತಿಳಿ
ಸಲು ಆತನು,"ಈ ಭರತ ಭೂಮಿಯನ್ನೆಲ್ಲ ಆಳುವ ಚಕ್ರವರ್ತಿ ನಿನ್ನ ಹೊಟ್ಟಿ
ಯಲ್ಲಿ ಹುಟ್ಟುವನು.  ಪುಣ್ಯಾತ್ಮರಾದ ಇನ್ನೂ ಹಲವರು ಮಕ್ಕಳು ನಿನಗಾಗು
ವರು" ಎಂದನು.