ಪುಟ:Kannada-Saahitya.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಸುಟ್ಟು ಹೋಯಿತು. ಹುಟ್ಟು ಸಾವಿನ ಚಕ್ರಕ್ಕೆ ಆತನನ್ನು ಬಿಗಿದಿದ್ದ ಬಂಧನ ವೆಲ್ಲ ಬಿಚ್ಚಿ ಹೋಗಿ ಆತ್ಮ ಮುಕ್ತವಾಯಿತು. ಆ ಮುಕ್ತಾತ್ಮನಿಗೆ ಕೇವಲ ಜ್ಞಾನವೆಂಬ ಸರ್ವೋತ್ಕೃಷ್ಟವಾದ ಜ್ಞಾನ ಉಂಟಾಯಿತು, ಋಷಭಯೋಗಿ ಜಿನನಾದನು, ತೀರ್ಥ೦ಕರನಾದನು. ಕೇವಲ ಜ್ಞಾನೋತ್ಪತ್ತಿಯಾದಾಗ ದೇವತೆಗಳು ಬಂದು ಆನಂದ ನೃತ್ಯ ಮಾಡಿ ಉತ್ಸವವನ್ನಾಚರಿಸಿದರು. ಇಂದ್ರನ ಆಜ್ಞೆಯಂತೆ ಕುಬೇರನು ಜಿನನ ಧರ್ಮಬೋಧೆಗೆ ಅನುಕೂಲಿಸುವ ಸಮವಸರಣ ಮಂಟಪವನ್ನು ನಿರ್ಮಿಸಿದನು. ಅದರಲ್ಲಿ ದೇವಾಸುರನರರು ಮಾತ್ರವೇ ಅಲ್ಲ, ಪಶು ಪಕ್ಷಿ ಮೊದಲಾದ ಸಮಸ್ಯೆ ಪ್ರಾಣಿಗಳಿಗೂ ಎಡೆಯುಂಟು. ಅದು ಆಕಾಶಗಾಮಿ ಯಾಗಿ ಜಿನನ ಮನಸ್ಸನ್ನನುಸರಿಸಿ ಎಲ್ಲೆಂದರಲ್ಲಿ ಸಂಚರಿಸುವುದು, ಆ ಮಂಟಪದಲ್ಲಿ ತೀರ್ಥ೦ಕರನ ಬೋಧಾಮೃತವನ್ನು ಸವಿಯಲು ಸಮಸ್ತ ಜೀವ ರಾಶಿಗಳೂ ಬಂದು ನೆರೆದವು. ಪುರಿಮತಾಳಪುರದರಸು ಭರತನೊತ್ತಿನ ತನ್ನ ವೃಷಭಸೇನನೆಂಬ ವನು ಆದಿ ತೀರ್ಥ೦ಕರನನ್ನಾ ರಾಧಿಸಲು ಮಂಗಳದ್ರವ್ಯ ಸಮೇತನಾಗಿ ಬಂದನು. ಬಂದು ವೃಷಭಸ್ವಾಮಿಯ ಮಂಗಳಮುಖವನ್ನು ಕಂಡನೋ ಇಲ್ಲವೋ, ಆತನಿಗೆ ಪರಮ ವೈರಾಗ್ಯ ತಲೆದೋರಿತು. ಅರ್ಹತ್ಪರಮೇಶ್ವರನ ಸಮಕ್ಷದಲ್ಲಿ ದೀಕ್ಷೆಯಾ೦ತು ಆತನ ಮೊದಲನೆಯ ಗಣಧರನಾದನು. ಚಕ್ರರತ್ಯೋತ್ಪತ್ತಿ ಇತ್ತ ಆಯೋಧ್ಯೆಯಲ್ಲಿ ಭರತರಾಜನು ಆಸ್ಸಾನಮಂಟಪದಲ್ಲಿದ್ದಾಗ ಪುರೋಹಿತನು ಬಂದು ಆದಿನಾಥನಿಗೆ ಕೇವಲಜ್ಞಾನವುಂಟಾದ ಸುದ್ದಿಯನ್ನು ತಿಳಿಸಿದನು. ಆಯುಧಾಗಾರದಲ್ಲಿ ಸೂಯ್ಯನಂತೆ ಕಳೆಯೆರಚುವ ಚಕ್ರರತ್ನ ನುದ್ಭವಿಸಿತೆಂದು ಆಯುಧಾಧ್ಯಕ್ಷನು ಬಿನ್ನವಿಸಿದನು. ಅಂತಃಪುರದಲ್ಲಿ ಪಟ್ಟದ ರಾಣಿ ಸುಕುಮಾರನನ್ನು ಹೆತ್ತಳೆಂದು ಕಂಚುಕಿ ವಿಜ್ಞಾಪಿಸಿಕೊಂಡನು. ಏಕ ಕಾಲದಲ್ಲಿ ಬಂದ ಈ ಮೂರು ಶುಭ ಸಮಾಚಾರಗಳನ್ನೂ ಕೇಳಿ ಭರತನು ಪರಮಾನಂದಭರಿತನಾದನು.