ಪುಟ:Kannada-Saahitya.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹು ಆಶೀರ್ವಾದ ಮಾಡುತ್ತ ಅಕ್ಷತೆಯೆರಚಿದರು. ನಂದಿಗಳು ಗಂಭೀರ ಧ್ವನಿ ಯಿಂದ ರಾಜನ ಗುಣಗಾನ ಮಾಡತೊಡಗಿದರು. ಈ ಮಂಗಳ ಧ್ವನಿಗಳ ನಡುವೆ ಚಕ್ರವರ್ತಿಯ ರಥವನ್ನೇರಿ ವಿಜಯ ಪ್ರಯಾಣ ಬೆಳಸಿದನು. ಅಂದು ಅಯೋಧ್ಯಾ ಪಟ್ಟಣದ ಹತ್ತಿರವೇ ಸಿದ್ಧಪಡಿಸಿದ್ದ 'ವಿಜಯ ಪ್ರಸ್ಥಾನ ಶಿಬಿರ' ದಲ್ಲಿ ತಂಗಿದನು, ಪೂರ್ವ ದಿಗ್ವಿಜಯ ಮರುದಿನ ಚಕ್ರವರ್ತಿಯ ಸೇನೆ ಪೂರ್ವಾಭಿಮುಖವಾಗಿ ಪ್ರಯಾಣ ಮಾಡಿತು. ನೆಲ, ಆಕಾಶ, ದಿಕ್ಕುಗಳನ್ನೆಲ್ಲ ಬೆಳಗಿ ಸೂರ್ಯನಂತೆ ಪ್ರಜ್ವಲಿ ಸುತ ಚಕರ ಮುಂದೆ ನಡೆಯಿತು. ಅದರ ಜೊತೆಯಲಿ ಪಡೆಗೆ ಅಡ ಬಂದ ಬೆಟ್ಟಗುಡ್ಡಗಳನ್ನು ಕಡಿದು ದಾರಿ ಬಿಡಿಸಿ ಮಟ್ಟ ಮಾಡುತ್ತ ದಂಡರತ್ನ ನಡೆಯಿತು. ದಂಡ ರತ್ನದ ಹಿಂದೆ ಆನೆ, ಕುದುರೆ, ತೇರು, ಕಲಾಳೆಂಬ ನಾಲ್ಕು ಬಗೆಯ ಸೈನ್ಯವೂ ಸದವಳನ ಸನ್ನೆಯಲ್ಲಿ ಶಿಸ್ತಿನಿಂದ ಮುಂದುವರಿ ಋತು, ಚಕ್ರವರ್ತಿಯ ಚತುರಂಗ ಸೈನ್ಯದ ಜೊತೆಗೆ ದಿವಿಜ ಖೇಚರ ಸೈನ್ಯಗಳೂ ಸೇರಿದವು ಈ ಷಡಂಗಬಲ ಭೂಮ್ಯಾಕಾಶಗಳನ್ನೆಲ್ಲ ತುಂಬಿತು.

  • ಆ ದೊಡ್ಡ ಪಡೆ ಗಂಗಾನದಿಯ ದಡದಲ್ಲಿ ಎರಡನೆಯ ಗಂಗೆ ಯೆಂಬಂತೆ ನಡೆಯುತ್ತಿರಲು ಗಡಿನಾಡಗಳ ರಾಜರೂ ಹೊರನಾಡುಗಳ ದೊರೆಗಳೂ ಕಪ್ಪ ಕಾಣಿಕೆಗಳನ್ನು ತಂದೊಪ್ಪಿಸಿದರು. ಮಹಾ ಪರಾಕ್ರಮಿ ಗಳೆಂದು ಹೆಸರು ಹೊಂದಿದ ವಿಕ್ರಮಶಾಲಿಗಳೆಲ್ಲ ದಂಡಕ್ಕೆ ಭಯ ಪಟ್ಟು ಚಕ ವರ್ತಿಗೆ ತಲೆ ಬಾಗಿಸಿದರು. ಆ ವಿಚಯ ಸೈನ್ಯಕ್ಕೆ ಎದುರಿಲ್ಲವಾಯಿತು. ನಿರಾತಂಕವಾಗಿ ಮುಂದುವರಿಯುತ್ತ ಪೂರ್ವ ಸಮುದ್ರದ ತೀರವನ್ನು ಸೇರಿ ಪಡೆ ಗಂಗಾ ದ್ವಾರದಲ್ಲಿ ಬೀಡುಬಿಟ್ಟಿತು,

ಸಮುದ್ರತೀರದ ದೇಶಾಧಿಪತಿಗಳೆಲ್ಲ ಭರತ ಚಕ್ರವರ್ತಿಯ ಬರವನ್ನು ಕೇಳಿ ಭಯಭ್ರಾಂತರಾದರು. ತಮ್ಮ ಬಲದರ್ಪವನ್ನು ಬಿಟ್ಟುಡುಗಿ ಶರಣ? ಗತರಾದರು. ಚಕ್ರವರ್ತಿ ಅವರನ್ನೆಲ್ಲ ಅನುಗ್ರಹಿಸಿ ಉಚಿತ ರೀತಿಯಲ್ಲಿ ನನ್ನಿಸಿದನು. - ಮಾಗಧ ಗರ್ವಭಂಗ ಪೂರ್ವ ಸಮುದ್ರ ಮಧ್ಯದಲ್ಲಿ ಮಾಗಧನೆಂಬೊಬ್ಬ ವ್ಯ೦ತರದೇವತೆ