ಪುಟ:Kannada-Saahitya.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಹರಿಕರ ಉತ್ತಮವಗಳ" ದ ಕವಿ, 1 ಗಿರಿಜಾ ಕಲ್ಯಾಣ' ಎಂಬ ಚ೦ ಈ ಗ್ರಂಥ, ಸಂಪಾಶತಕ ' ಎಂಬ ಒಂದು ಸೂತ್ರರೂಪನಾದ ಶತಕ, ಅನೇಕ (ನೂರಕ್ಕಿಂತ ಮುಲ್ಪಟ್ಟು) ರಗಳೆಗಳು -- ಇವು ಆತನು ರಚಿಸಿರುವ ಕೃತಿಗಳು. 'ರಗಳೆ' ಎಂಬುದು ಒಂದು ಬಗೆಯ ಅಚ್ಚ ಕನ್ನಡ ಛಂದಸ್ಸು, ಹಿಂದಿನ ಕವಿಗಳು ಅಲ್ಲಿ ಕೆಲವು ಸಾಲುಗಳನ್ನು ಮಾತ್ರ ರಗಳೆಯಲ್ಲಿ ಬರೆಯುತ್ತಿದ್ದರು. ಹರಿಹರ ಪೂರ್ಣಕಾವ್ಯ ಗಳ ಆ ಛಂದಸ್ಸಿನಲ್ಲಿ ಬರೆದನು, ಇದರಿಂದ ಆತನಿಗೆ 1 ರಗಳೆಯ ಕವಿ ? ಎಂದೂ ಒಂದು ಹೆಸರು ಬಂತು, - ಗದ್ಯವನ್ನು ಹರಿಹರ ಮತ್ತೆ ಬಳಕೆಗೆ ತಂದನೆನ್ನ ಬಹುದು, ಕಥಾ ಕಾವ್ಯಕ್ಕೆ ತಕ್ಕಂತ ಮಾತಿನ ಶೈಲಿಯ ಗದ್ಯವನ್ನೆ ಆತ ತನ್ನ ಗ್ರಂಥಗಳಲ್ಲಿ ಬಳಸಿದ್ದಾನೆ, ಹಳ ಗನ್ನಡ ನುಡಿ ಆನೆ ಸಿಂಗಿತ್ತ ಹೊಸಗನ್ನಡದ ಕಡೆಗೆ ತಿರುಗುತ್ತ ಬಂತೆಂದು ಹೇಳ ಬಹುದು, - ಹರಿಹರ ಉತ್ತಮ ಶಿವಭಕ್ತ, ಈತನ ಗ್ರಂಥಗಳಲ್ಲಿ ಭಕ್ತಿಯ ಸಳನು ಎದ್ದು ಕಾಣುತ್ತದೆ. ತಮಿಳು ದೇಶದಲ್ಲಿ ಅರುವತ್ತು ಮೂರು ಮಂದಿ ಶಿವಭಕ್ತರು ಹಿಂದಿನ ಕಾಲದಲ್ಲಿ ಪ್ರಸಿದ್ಧ ಲಾಗಿದ್ದರು. ಅವರನ್ನು 1 ಅರುವತ್ತು ಮೂವರು ಪುರಾತನರು ? ಎಂದು ಕರೆಯುವುದು ರೂಢಿ. ಆವರ ಚರಿತ್ರೆ ತಮಿಳಿನ ಪರಿಯ ಪುರಾಣಂ ಎಂಬ ಗ್ರಂಥದಲ್ಲಿ ದೊಕಿಯುತ್ತದೆ. ಆ ಗ್ರ೦ಥದ ಆಧಾರದಿಂದಲೋ, ಅವರ ವಿಷಯ ವಾಗಿ ದೇಶದಲ್ಲಿ ಪ್ರಚಾರವಾಗಿದ್ದ ಸಂಗತಿಗಳನ್ನು ಸಂಗ್ರಹಿಸಿಯೋ, ಅಥವಾ ಎರ ಡನೂ ಉಪಯೋಗಿಸಿಕೊಂಡ ಹರಿಹರ ಆ ಪುರಾತನರ ಕಥೆಗಳನ್ನೆಲ್ಲ ಕನ್ನಡ ದಲ್ಲಿ ಬರೆದಿದ್ದಾನೆ. ಇವೇ ' ಪುರಾತನರ ರಗಳೆಗಳು.' ತಮಿಳುನಾಡಿನ ಆ ಪುರಾತನ ಭಕ್ತರನ್ನಲ್ಲದೆ ಕನ್ನಡನಾಡಿನಲ್ಲಿ ಬಾಳಿದ ಆನೇಕ ನವೀನ ಭಕ್ತರ ಚರಿತ್ರೆಗಳನ್ನೂ ರಗಳೆಗಳಲ್ಲಿ ರಚಿಸಿದ್ದಾನೆ. ಇವೆಲ್ಲ ಉತ್ತಮ ಕಾವ್ಯಗಳಾಗಿವೆ. ಇಲ್ಲಿ ಕೊಟ್ಟಿರುವ ಕಣ್ಣಪ್ಪನ ಕಥೆ ಆರುವತ್ತು ಮೂವರು ಪುರಾತನರ ರಗಳೆಗಳ ಲೈ೦ದರಿಂದ ಸಂಗ್ರಹಿಸಿದ್ದು, ಕಿನ್ನರ ಬೊಮ್ಮಯ್ಯನ ಕಥೆ ಕನ್ನಡನಾಡಿನ ಧರ್ಮ ವೀರರಲ್ಲೊಬ್ಬರಾದ ಬಸವಣ್ಣ ನವರ ಚರಿತ್ರೆಯಾದ ಬಸವರಾಜ ದೇವರ ರಗಳೆ 'ಯ ಒಂದು ಅಧ್ಯಾಯ, ಬಸವರಾಜ ದೇವರ ರಗಳೆ' ಹರಿಹರನ ಕೃತಿ ಗಳಲ್ಲಿ ಸರ್ವೋತ್ಕೃಷ್ಟ ರತ್ನ ಎನ್ನಬಹುದು. ಹರಿಹರ ಕವಿ ಮುಂದಿನ ಕವಿಗಳೆಲ್ಲರಿಗೂ ಎಷ್ಟೋ ಬಗೆಯಲ್ಲಿ ಮಾರ್ಗದರ್ಶಕ ನಾದನು. ಪ್ರಸಿದ್ದ ಕಪಿ 1 ಭಾಘವಾಂಕ ? ಈತನ ಶಿಷ್ಯ ಮತ್ತು ಸೋದರಳಿಯ. * ಈತನು ಕ್ರಿ. ಶ. ೧೨ನೆಯ ಶತಮಾನದ ಕಡಯಿ ೧೩ನೆಯ ಶತಮಾನದ ಮೊದಲಿನಲ್ಲೂ ಬದುಕಿದ್ದನೆಂದು ವಿಮರ್ಶಕರು ಊಹಿಸುತ್ತಾರೆ. ]