ಪುಟ:Kannadigara Karma Kathe.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಉತ್ಕರ್ಷ

೯೭

ಹಂಚಿಕೊಳ್ಳೋಣವೆಂದು ಆಲೋಚಿಸುವದು ಎರಡನೆಯ ತಂತ್ರವು. ಬಾದಶಹನು ಹಲವು ಉಪಾಯಗಳಿಂದ ಮುಸಲ್ಮಾನ ಬಾದಶಹರಲ್ಲಿ ಒಕ್ಕಟ್ಟು ಬೆಳೆಸುವದಕ್ಕಾಗಿ ೧೫೬೪ರಲ್ಲಿ ಕಿಷ್ಬರಖಾನನನ್ನು ನಿಯಮಿಸಿ ಆತನಿಗೆ ಸಂಪೂರ್ಣ ಅಧಿಕಾರ ಕೊಟ್ಟು ಕಳಿಸಿದನು.

ಇತ್ತ ರಾಮರಾಜನ ಕಡೆಗೆ ಅಲೀ ಆದಿಲಶಹನು ಒಬ್ಬ ವಕೀಲನನ್ನು ಕಳಿಸಿ, ನಾವಿಬ್ಬರೂ ಒಂದಾಗಿ ಉಳಿದ ಮುಸಲ್ಮಾನ ರಾಜ್ಯಗಳನ್ನು ನಷ್ಟಪಡಿಸೋಣ, ಈ ಕೆಲಸವು ಪೂರ್ಣವಾಗುವವರೆಗೆ ನಮ್ಮ ಒಬ್ಬ ವಕೀಲನನ್ನು ನೀವು ನಿಮ್ಮ ರಾಜಧಾನಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿ ಕಳಿಸಿದನು. ಅದಕ್ಕೆ ರಾಮರಾಜನು ಸಂತೋಷದಿಂದ ಒಪ್ಪಿಕೊಂಡು, ವಕೀಲನಿಗೆ ಇರಲಿಕ್ಕೆ ಈ ಸಾರೆ ತಾನಾಗಿಯೇ ಕುಂಜವನವನ್ನು ಕೊಟ್ಟನು. ಆ ವಕೀಲನು ಬಂದು ಕುಂಜವನದಲ್ಲಿ ಇರಹತ್ತಿದನಂತರ ಕೆಲವು ದಿನಗಳ ಮೇಲೆ ರಾಮರಾಜನು ದರ್ಬಾರದ ನೆರೆಸುವ ದಿವಸವು ಬಂದಿತು. ಅಂದಿನ ದರ್ಬಾರಕ್ಕೆ ವಿಜಾಪುರದ ಹೊಸವಕೀಲನೂ ಬಂದಿದ್ದನು. ರಾಮರಾಜನು ಆ ವಕೀಲನ ಸುಂದರ ರೂಪವನ್ನೂ ತೇಜಸ್ಸನ್ನೂ, ತಾರುಣ್ಯವನ್ನೂ ನೋಡಿ ಸಮಾಧಾನಪಟ್ಟನು. ದರ್ಬಾರದ ಕೆಲಸಕ್ಕೆ ಆರಂಭವಾಗಲು, ಎಲ್ಲರೂ ಅತ್ಯಂತ ವಿನಯದಿಂದ ನಡೆಕೊಂಡರು; ವಿಜಾಪುರದ ತರುಣ ವಕೀಲನು ಮಾತ್ರ ಹಾಗೆ ನಡೆಯಲಿಲ್ಲ. ಆತನ ಸೊಕ್ಕಿನ ನಡತೆಯನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಇದಕ್ಕಾಗಿ ರಾಮರಾಜನಿಗೂ ಸಿಟ್ಟುಬಂದಿತು. ಆ ತರುಣ ಸರದಾರನ ವಿಷಯವಾಗಿ ರಾಮರಾಜನ ಮನಸ್ಸಿನಲ್ಲಿ ಆರಂಭಕ್ಕೆ ಉತ್ಪನ್ನವಾಗಿದ್ದ ಆದರವು ನಷ್ಟವಾಗಿ, ತಿರಸ್ಕಾರವು ಉತ್ಪನ್ನವಾಯಿತು. ಅದೇ ಕಾಲಕ್ಕೆ ಆ ತರುಣ ವಕೀಲನನ್ನು ಆತನ ಉದ್ಧಟತನದಿಂದ ಸಲುವಾಗಿ ಎಚ್ಚರಗೊಳಿಸಬೇಕೆಂದು ರಾಮರಾಜನು ಮಾಡಿದ್ದನು; ಆದರೆ ಇನ್ನೂ ತರುಣನಾಗಿದ್ದರಿಂದ ಇವನಿಗೆ ದರ್ಬಾರದ ನಡತೆಗಳು ಗೊತ್ತಿರಲಿಕ್ಕಿಲ್ಲೆಂತಲೂ ; ಇಂಥ ತರುಣನನ್ನು ವಕೀಲನನ್ನಾಗಿ ಕಳಿಸಿದ್ದರಲ್ಲಿ ಬಾದಶಹನದೇ ತಪ್ಪೆಂತಲೂ ತಿಳಿದು, ಈ ಸಂಬಂಧವಾಗಿ ಬಾದಶಹನನ್ನೇ ಬರೆದು ಕೇಳೋಣವೆಂದು ಆತನು ಸುಮ್ಮನಾದನು. ದರ್ಬಾರದ ಕಾರ್ಯವು ಮುಗಿದು, ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೊರಟುಹೋದರು. ವಿಜಾಪುರದ ತರುಣ ವಕೀಲನು ತನ್ನ ಕುಂಜವನಕ್ಕೆ ಹೋದನು, ಆತನ ದರ್ಬಾರದಲ್ಲಿ ಔದ್ಧತ್ಯದಿಂದ ನಡಕೊಂಡಿದ್ದಕ್ಕಾಗಿ ಆತನ ಜನರು ಆತನನ್ನು ಬಹಳವಾಗಿ ಶ್ಲಾಘಿಸಿದರು. ಅವರಲ್ಲಿ ಒಬ್ಬ ಸರದಾರನು ಆ ವಕೀಲನನ್ನು, ಅಂದರೆ