ಪುಟ:Kannadigara Karma Kathe.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೯

೧೨ನೆಯ ಪ್ರಕರಣ

ಶಾಪಪ್ರದಾನ

ನಿಜವಾಗಿ ನೋಡಿದರೆ ಪತ್ರದಲ್ಲಿ ಅಯೋಗ್ಯವೇನೂ ಬರೆದಿದ್ದಿಲ್ಲ ; ಬರೆಯತಕ್ಕದ್ದನ್ನು ಸ್ಪಷ್ಟವಾಗಿ ಹ್ಯಾಗೆ ಬರೆಯಬೇಕೋ, ಹಾಗೆಯೇ ಬರೆದಿತ್ತು; ಆದರೆ ರಣಮಸ್ತಖಾನನಿಗೆ ಮಾತ್ರ ಅದು ಸೇರಲಿಲ್ಲ. ಆ ಪತ್ರವು ಅತನಿಗೆ ಮುತ್ಸದ್ದಿತನದ್ದಾಗಿಯೂ, ಕಾರಸ್ಥಾನದ್ದಾಗಿಯೂ ಮೋಸದ್ದಾಗಿಯೂ ತೋರಿತು. ಕೂಡಲೆ ಅವನು ಸಿಟ್ಟಿಗೆದ್ದು ಆ ದರ್ಬಾರಿ ಗೃಹಸ್ಥನನ್ನು ಕುರಿತು ಸಂತಾಪದಿಂದ “ನಡೆಯಿರಿ, ಈ ನರನನ್ನು ಕರಕೊಂಡು ರಾಮರಾಜನ ಕಡೆಗೇ ನಡೆಯಿರಿ. ಇವರನ್ನು ಬಿಡಿಸಿದ ಹೊರತು ನಾನು ಅನ್ನಗ್ರಹಣ-ಮಾಡಲಿಕ್ಕಿಲ್ಲೆಂದು ನಿಶ್ಚಯಿಸಿದ್ದೇನೆ. ಈ ಹೆಂಗಸರನ್ನು ನನ್ನ ಬಿಡಾರಕ್ಕೆ ಒಯ್ದ ಬಳಿಕ ಆಮೇಲೆ ಅನ್ನ-ನೀರಿನ ವಿಚಾರವು” ಅನ್ನಲು, ಆ ಗೃಹಸ್ಥನು-ಅವರು ರಾಮರಾಜರ ಕಡೆಗೇ ಹೋಗುತ್ತಿದ್ದರು. ನಡುವೆ ನೀವು ಗೊಂದಲ ಹಾಕದಿದ್ದರೆ ಇಷ್ಟು ಹೊತ್ತಿಗೆ ಅವರು ಬಿಡುಗಡೆ ಹೊಂದಿ ಸಹ ಬರುತ್ತಿದ್ದರು, ಎಂದು ಹೇಳಿದನು. ಅದಕ್ಕೆ ರಣಮಸ್ತಖಾನನು ಏನೂ ಮಾತಾಡಲಿಲ್ಲ. ರಾಮರಾಜನ ಕಡೆಗೆ ಹೋಗುವದಕ್ಕಾಗಿ ಮಾತ್ರ ಜನರಿಗೆ ಅವಸರ ಮಾಡಹತ್ತಿದನು. ಅವರೆಲ್ಲರೂ ರಾಮರಾಜನ ಮಂದಿರದ ಕಡೆಗೆ ನಡೆದರು. ಮಂದಿರದ ಬಳಿಗೆ ಹೋದಕೂಡಲೆ, ರಣಮಸ್ತಖಾನನು ತಾನು ಬಂಧ ವರ್ತಮಾನವನ್ನು ರಮರಾಜನಿಗೆ ತಿಳಿಸಿದನು. ಆಗ ರಾಮರಾಜನ ಸಿರಸ್ತೆದಾರನು ರಣಮಸ್ತಖಾನನನ್ನು ಕರಕೊಂಡು ಹೋಗುವದಕ್ಕಾಗಿ ಎದುರಿಗೆ ಬಂದನು. ಅದನ್ನು ನೋಡಿ ತರುಣ ರಣಮಸ್ತಖಾನನಿಗೆ ಸಮಾಧಾನವಾಗಲಿಲ್ಲ; ಅವನು ರೇಗಿಗೆದ್ದನು ರಾಮರಾಜನೇ ತನ್ನನ್ನು ಕರಕೊಂಡು ಹೋಗತಕ್ಕದೆಂದು ಆತನು ಭಾವಿಸಿದನು; ಆದರೆ ಜಗಳ ತೆಗೆಯಲಿಕ್ಕೆ ಇದು ಸಮಯವಲ್ಲೆಂದು ತಿಳಿದು ಆತನು ಸಿರಸ್ತೆದಾರರ ಸಂಗಡ ಹೋದನು. ರಾಮರಾಜನು ಆಗ ತನ್ನ ವಾಡೆಯೊಳಗಿನ ಕಚೇರಿಯಲ್ಲಿ ಕೆಲಸಮಾಡುತ್ತ ಕುಳಿತಿದ್ದನು. ಆತನ ಮುಂದೆ ಸಣ್ಣ ದರ್ಬಾರವೇ ನೆರೆದಂತೆ ಆಗಿತ್ತು. ರಣಮಸ್ತಖಾನನು ಅಲ್ಲಿಗೆ ಹೋದ