ಪುಟ:Kannadigara Karma Kathe.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ಕನ್ನಡಿಗರ ಕರ್ಮಕಥೆ

ಮಾತು ಬೇರೆಯಾಗಿತ್ತು. ಆ ಪ್ರಸಂಗದಲ್ಲಿ ಸ್ವಾಮಿದ್ರೋಹವೆಂಬ ನಿಮ್ಮ ಮಾತಿಗೆ ನಾನು ಒಪ್ಪಿಕೊಳ್ಳುತ್ತಿದ್ದೆನು ; ಆದರೆ ಈಗ ನಾನು ನಿಮಗೆ ಹಾಗೆ ಹೇಳುವದಿಲ್ಲ. ಬಾದಶಹನಿಗೆ ನೀವು- “ನಿಮ್ಮ ಚಾಕರಿಯನ್ನು ನಾನು ಮಾಡುವದಿಲ್ಲೆಂದು ಸ್ಪಷ್ಟವಾಗಿ ತಿಳಿಸಿ, ನೀವು ನಮ್ಮ ಕಡೆಗೆ ಬರಬೇಕೆಂದು ನಿಮಗೆ ಹೇಳುತ್ತೇನೆ. ಹೀಗೆ ಹೇಳಲಿಕ್ಕೆ ನಿಮಗೆ ಪ್ರತಿಬಂಧವೇನು? ನನಗಂತು ಯಾವ ಪ್ರತಿಬಂಧವಿದ್ದಂತೆಯೂ ತೋರುವದಿಲ್ಲ.

ರಣಮಸ್ತಖಾನ-(ಸ್ವಲ್ಪ ಸಿಟ್ಟಿನಿಂದ) ತಮ್ಮ ಎಲ್ಲ ಮಾತುಗಳನ್ನು ನಾನು ಈವರೆಗೆ ಲಕ್ಷ್ಯಪೂರ್ವಕವಾಗಿ ಕೇಳಿಕೊಂಡನು. ಇನ್ನು ಯಾವ ಮಾತು ಹೇಳುವ ಅವಶ್ಯಕತೆಯೂ ಉಳಿದಿರುವದಿಲ್ಲ: ಆದರೆ ನನ್ನಷಕ್ಕೆ ನಾನು ವಿಚಾರಮಾಡುವದನ್ನು ಮಾಡುವೆನು. ತಿರುಗಿ ತಾವು ಈ ಸಂಬಂಧದಲ್ಲಿ ನನ್ನನ್ನು ಏನೂ ಕೇಳಬಾರದು.

ರಾಮರಾಜ-ನನ್ನ ಮಾತಿನಿಂದ ತಮಗೆ ಸ್ವಲ್ಪ ಸಿಟ್ಟು ಬಂದಂತೆ ತೋರುತ್ತದೆ. ಆದರೆ ನಿಜವಾಗಿ ಸಿಟ್ಟು ಬರಲಿಕ್ಕೆ ಕಾರಣವಿಲ್ಲ. ನೀವು ಬಾದಶಹರ ಚಾಕರಿಗೆ ಬೇಸತ್ತಿರುವದರಿಂದ, ನಿಮ್ಮ ಪರಾಕ್ರಮವನ್ನು ಪ್ರಕಟಿಸಲಿಕ್ಕೆ ಮಾರ್ಗ ದೊರೆಯಬೇಕೆಂದು ಸೂಚಿಸಿದೆನಷ್ಟೇ. ನಮಗೆ ನಮ್ಮ ಸೈನ್ಯವಿರುತ್ತದೆ. ಸೇನಾಪತಿಗಳಿರುತ್ತಾರೆ. ಎಲ್ಲ ತರದ ಅನಕೂಲತೆಗಳೂ ಇರುತ್ತವೆ. ಆದರೂ ಬಾದಶಹನ ಸೈನ್ಯದ ಸ್ಥಿತಿಯನ್ನು ಬಲ್ಲ ಶೂರ ವೀರನೊಬ್ಬನ ಆವಶ್ಯಕತೆಯು ನಮಗಿರುತ್ತದೆ. ಅಂತೇ ನಾನು ನಿಮ್ಮನ್ನು ಕೇಳಿದೆನು. ನೀವು ಒಪ್ಪಿಕೊಳ್ಳದಿದ್ದರೆ ಮತ್ತೆ ಯಾರಾದರೂ ಒಪ್ಪಿಕೊಂಡಾರು, ಇದರೊಳಗೇನು? ಆದಿರಲಿ ಬಿಡಿರಿ. ನಿಮಗೆ ಬೇಡಾಗಿದ್ದರೆ ಆ ಮಾತನ್ನೇ ಬಿಟ್ಟುಬಿಡೋಣ.

ಈ ಮೇರೆಗೆ ನುಡಿದು, ರಾಮರಾಜನು ಸುಮ್ಮನಾಗಿ ಕುಂಜವನವನ್ನು ನೋಡುತ್ತ ಸಾಗಿದನು. ರಣಮಸ್ತಖಾನನೂ ಸುಮ್ಮನೆ ಆತನ ಬೆನ್ನುಹತ್ತಿ ನಡೆದಿದ್ದನು. ರಾಮರಾಜನು ಯಾವತ್ತು ಕುಂಜವನವನ್ನು ತಿರುವಿ ಹಾಕಿದನು. ಪುಷ್ಕರಣಿಯನ್ನಂತು ಎರಡು ಸಾರೆ ಆತನು ಸುತ್ತಿ ಬಂದನು. ಕೆಲವು ಹೊತ್ತಿನ ಮೇಲೆ ರಣಮಸ್ತಖಾನನನ್ನು ಕುರಿತು “ಆಗಲೇ ನೀವು ಪ್ರಶ್ನೆಮಾಡಿದಿರಲ್ಲ ? ಆದಕ್ಕೆ ಉತ್ತರವನ್ನು ನಾನು ಈಗ ಕೊಡುತ್ತೇನೆ; ಆದರೆ ಇಲ್ಲಿ ಬೇಡ ನಮ್ಮ ಬಂಗಲೆಯಲ್ಲಿ ನಡೆಯಿರಿ” ಎಂದು ಹೇಳಲು, ರಾಮರಾಜನು ಉತ್ಸುಕತೆಯಿಂದ ರಣಮಸ್ತನ ಮುಖವನ್ನು ನೋಡಿ ಸಂತೋಷಪಟ್ಟು-ಆಗಲಿ, ಬಂಗಲೆಯಲ್ಲಿಯೇ ಹೇಳಿರಿ, ಎಂದು ಬಂಗಲೆಯ ಕಡೆಗೆ ನಡೆದನು. ಬಂಗಲೆಗೆ ಹೋದ ಬಳಿಕ ರಣಮಸ್ತಖಾನನು ರಾಮರಾಜನನ್ನು ಉಚ್ಚಾಸನದಲ್ಲಿ ಕುಳ್ಳಿರಿಸಿ, ಆತನನ್ನು ಕುರಿತು