ಪುಟ:Kannadigara Karma Kathe.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಕನ್ನಡಿಗರ ಕರ್ಮಕಥೆ

ರಸೈಕ್ಯದ ಆರಂಭವಾದದ್ದನ್ನು ನೋಡಿ ಆಕೆಗೆ ಸಮಾಧಾನವಾಗಲಿಲ್ಲ. ಪ್ರೇಮಬಂಧನದಲ್ಲಿ ಇಷ್ಟು ಆತುರವು ಕೆಲಸದ್ದಲ್ಲವೆಂದು ಆಕೆಗೆ ತೋರಿದ್ದು ಸಹಜವು. ಕುಲೀನ ಮುಸಲ್ಮಾನ ಮನೆತನದ ಮೆಹರ್ಜಾನಳು ತಿರಸ್ಕರಣೀಯವಾದ ಹಿಂದುವನ್ನು ಹೀಗೆ ಪ್ರೀತಿಸಹತ್ತಿದ ಕಾರಣವು ತಿಳಿಯದಾಯಿತು. ಆಕೆಯು ಮೆಹರ್ಜಾನಳನ್ನು ಕುರಿತು-ಬೇಟಾ, ಮೆಹರ್ಜಾನ, ಕಾಫರರೆನಿಸುವ ಹಿಂದೂ ಜನರು ಮುಸಲ್ಮಾನ ಕುಲೀನ ಸ್ತ್ರೀಯರ ಪ್ರೀತಿಗೆ ಪಾತ್ರರಾಗುವ ಕೌತುಕದ ಸಂಗತಿಯನ್ನು ನಾನು ಕೇಳಿರುವೆನು ; ಆದರೆ ಇದು ನಿನಗೆ ನಿಜವಾಗಿ ತೋರುವುದೋ ? ನಮ್ಮೆಲ್ಲರನ್ನು ಅಗಲಿ ನೀನು ಇಲ್ಲಿಗೆ ಹೇಗೆ ಬಂದೆ ? ನಿನ್ನ ಎಲ್ಲ ಪರಿವಾರವನ್ನು ಬಿಟ್ಟು ನನ್ನೊಬ್ಬಳನ್ನೇ ನೀನು ಕರೆಸಿದ ಕಾರಣವೇನು ? ನನಗೆ ಆ ತರುಣ ಹಿಂದುವು ಭೆಟ್ಟಿಯಾದಾಗಿನಿಂದ ಇಲ್ಲಿಯವರೆಗೆ ನಡೆದ ವಿಲಕ್ಷಣ ಸಂಗತಿಗಳ ಮೇಲಿಂದ ನನ್ನ ಮನಸ್ಸಿನಲ್ಲಿ ಇಲ್ಲದ ಕಲ್ಪನೆಗಳು ಬರುತ್ತಿವೆ. ಆದರೆ ಭೇಟಾ ಮೆಹರ್ಜಾನ, ನೀನು ನನಗೆ ಹೊಟ್ಟೆಯ ಮಗಳಿಗಿಂತಲೂ ಪ್ರಿಯಳಾಗಿರುತ್ತೀ. ನಡೆದ ಸಂಗತಿಯನ್ನು ಮರೆಮಾಚದೆ ಹೇಳು. ಎಂದು ನುಡಿಯಲು, ಮೆಹರ್ಜಾನಳು ಮೊದಲಿನಿಂದ ಕಡೆತನಕ ನಡೆದ ಯಾವತ್ತು ಸಂಗತಿಗಳನ್ನು ಮಾರ್ಜಿನೆಯ ಮುಂದೆ ಹೇಳಿದಳು. ಅದನ್ನು ಕೇಳಿ ಮಾರ್ಜಿನೆಯು ರಾಮರಾಜನ ಸದ್ಗುಣ-ಸೌಜನ್ಯಗಳಿಗಾಗಿ ಕೆಲಮಟ್ಟಿಗೆ ಸಮಾಧಾನಪಟ್ಟರೂ, ಆ ತರುಣನು ಪಾಪಪುಣ್ಯದ ಭಯವಿಲ್ಲದೆ, ಹಿಂದೂ ಜನರ ಶೀಲಕ್ಕೆ ವಿರುದ್ದವಾಗಿ ಯವನ ತರುಣಿಯನ್ನು ಬಲಾತ್ಕಾರದಿಂದ ಅಪಹರಿಸಿದ್ದನ್ನು ಸ್ಮರಿಸಿ, ತರುಣನ ಮನಸಿನ ಪವಿತ್ರತೆಯ ವಿಷಯವಾಗಿ ಆಕೆಯು ಶಂಕಿಸಿದಳು ; ಆದರೆ ಹಾಗೆ ತಾನು ಶಂಕಿಸಿದ ಲಕ್ಷಣವನ್ನು ಮಾತ್ರ ಹೊರಗೆ ತೋರಗೊಡದೆ, ಆಕೆಯು ಮೆಹರ್ಜಾಣಳಿಗೆ-ಬೇಟಾ ಮೆಹರ್ಜಾನ, ಸರ್ಮಾಧಾನತಾಳು ನಾನು ರಾಮರಾಜನನ್ನು ಏಕಾಂತದಲ್ಲಿ ಕಂಡು, ಆಮೇಲೆ ನಿನಗೆ ಹೇಳುವೆನು. ಅಲ್ಲಿಯವರೆಗೆ ನಿನ್ನ ಹೃದಯದ ಗಾಂಭೀರ್ಯವನ್ನು ಕಳಕೊಳ್ಳಬೇಡ. ಎಂದು ಹೇಳಿದಳು!

ತರುಣನಾದ ರಾಮರಾಜನು ಮೆಹರ್ಜಾನಳ ಮನಸ್ಸನ್ನು ಒಲಿಸಿಕೊಳ್ಳುವುದಕ್ಕಾಗಿ ಅತ್ಯಂತ ಆತುರನಾಗಿದ್ದನು. ಮಾರ್ಜೀನೆಯನ್ನು ಒಡಂಬಡಿಸಿದರೆ ತನ್ನ ಕಾರ್‍ಯವು ಅನಾಯಾಸವಾಗಿ ಆಗುವುದೆಂದು ತಿಳಿದು ಆತನು ಏಕಾಂತದಲ್ಲಿ ಆಕೆಯನ್ನು ಕರೆಸಿಕೊಂಡನು. ಹೀಗೆ ಅವನು ತನ್ನನ್ನು ಕರೆಸಿಕೊಳ್ಳಬಹುದೆಂದು ಮಾರ್ಜೀನೆಯು ಮೊದಲೇ ತರ್ಕಿಸಿದ್ದಳು. ರಾಮರಾಜನು ತಟ್ಟನೆ