ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧ನೆಯ ಪ್ರಕರಣ

ರಣಮಸ್ತನ ಐಂದ್ರಜಾಲವು

ಈ ಮೇರೆಗೆ ಕುಂಜವನದಲ್ಲಿ ಆ ದೈವಹೀನ ಪ್ರಾಣಿಗಳು ಕಷ್ಟದಿಂದ ಕಾಲಹರಣ ಮಾಡುತ್ತಿರಲು, ಇತ್ತ ರಾಮರಾಜನ ವೈರಿಗಳ ಕಡೆಯ ಸುದ್ದಿಯನ್ನು ಹೇಳಬಂದ ರಣಮಸ್ತಖಾನನ ಮುಂದೆ, ನೂರಜಹಾನಳು ಅಕಸ್ಮಾತ್ತಾಗಿ ತನ್ನ ಕೈಗೆ ಸಿಕ್ಕ ಸುದ್ದಿಯನ್ನು ಹೇಳಿದನು. ನೂರಜಹಾನಳ ಹೆಸರು ಕೇಳಿದ ಕೂಡಲೇ ರಣಮಸ್ತನು ಕಕ್ಕಾಬಿಕ್ಕಿಯಾದನು. ಈ ಪ್ರಸಂಗದಲ್ಲಿ ನೂರಜಹಾನಳು ರಾಮರಾಜನ ಕೈಗೆ ಹ್ಯಾಗೆ ಸಿಕ್ಕಿರಬಹುದೆಂದು ಆತನು ಆಲೋಚಿಸಹತ್ತಿದು. ಅಷ್ಟರಲ್ಲಿ ರಾಮರಾಜನು ರಣಮಸ್ತನನ್ನು ಕುರಿತು-ರಣಮಸ್ತ, ನಿನ್ನ ಅರಗಿಳಿಯು ಸಿಕ್ಕಿತೆಂದು ಉಬ್ಬಬೇಡ, ಆದನ್ನು ನಾನು ಎಲ್ಲಿ ಇಟ್ಟಿರುವೆನೆಂಬದನ್ನು ಈ ಯುದ್ಧವು ಮುಗಿಯುವವರೆಗೆ ನಿನ್ನ ಮುಂದೆ ಹೇಳುವದಿಲ್ಲ. ಯುದ್ದವು ಮುಗಿದ ಕೂಡಲೇ ನೂರಜಹಾನಳೊಡನೆ ನಿನ್ನ ಲಗ್ನವನ್ನು ಮಾಡುವೆನು, ಈಗಲೇ ನೀನು ನೂರಜಹಾನಳ ಮೋಹದಲ್ಲಿ ಸಿಕ್ಕರೆ, ನಿನ್ನ ಯುದ್ಧದ ಔತ್ಸುಕ್ಯವು ಕಡಿಮೆಯಾಗಬಹುದು ಅನ್ನಲು, ಅದನ್ನು ಕೇಳಿ ರಣಮಸ್ತನಿಗೆ ವಿಲಕ್ಷಣ ಸಂತಾಪವಾಯಿತು. ರಾಮರಾಜನು ನೂರಜಹಾನಳನ್ನು ತನ್ನ ರಾಣೀವಾಸದಲ್ಲಿ ಸೇರಿಸಿಕೊಂಡಿರಬಹುದೆಂದು ಕಲ್ಪಿಸಿ ಆತನು ಕ್ರೋಧಪರವಶನಾಗಿ ಕೆಂಪಡರಿದ ಕಣ್ಣುಗಳಿಂದ ರಾಮರಾಜನನ್ನು ನೋಡಹತ್ತಿದನು.

ರಣಮಸ್ತನ ಈ ಮನೋಭಾವವನ್ನರಿತ ರಾಮರಾಜನು ಕೂಡಲೇ ಆತನನ್ನು ಕುರಿತು-ರಣಮಸ್ತ, ಶಾಂತನಾಗು. ನಿನ್ನ ಅರಗಿಳಿಯು ಪರಪುರಷರ ಕಣ್ಣಿಗೆ ಸಹ ಬೀಳದಂತೆ ಯೋಗ್ಯವ್ಯವಸ್ತೆ ಮಾಡಿರುವೆನು. ನೂರಜಹಾನಳು ಇನ್ನು ಸರ್ವಥಾ ನಿನ್ನವಳೇ ಇರುತ್ತಾಳೆಂದು ತಿಳಿದುಕೊ. ಆಯಿತು, ಇನ್ನು ನಾನುಹೆಚ್ಚಿಗೆ ಮಾತಾಡುವದಿಲ್ಲ. ಈಗ ನೀನು ಯುದ್ಧದ ಯಾವಸುದ್ದಿಯನ್ನು ತರುತ್ತೀಯೆಂಬದನ್ನು ಹೇಳು, ಶತ್ರುಗಳ ಕಡೆಯ ಸುದ್ದಿಯೇನು? ಕೃಷ್ಣೆಯನ್ನು ದಾಟಿ ತಾಳೀಕೋಟೆಯ ಹತ್ತರ ಎಲ್ಲರೂ ಬಂದು ಕುಳಿತು ಒಬ್ಬರೊಬ್ಬರ ಆದರ ಸತ್ಕಾರ ಮಾಡುವಲ್ಲಿ