ಒರೆಸಿಕೊಂಡನು ; ಆದರೆ ಅವು ಸತತವಾಗಿ ಧಾರೆಯಿಟ್ಟು ಸುರಿಯಹತ್ತಲು, ಆತನು ಮೋರೆಯ ಮೇಲೆ ಸೆರಗನ್ನು ಹಾಕಿಕೊಂಡು, ಸುಮ್ಮನೆ ಮಲಗಿಬಿಟ್ಟನು. ಅತ್ತು ಅತ್ತು ಆತನ ದುಃಖವೇಗವು ಕಡಿಮೆಯಾಗಹತ್ತಿತು. ಕಡೆಗೆ ಆತನು ಎದ್ದು ಕುಳಿತು ಕಣ್ಣೀರು ಒರೆಸಿಕೊಂಡ; ಮನಸ್ಸಿನಲ್ಲಿ ಎನೋ ನಿಶ್ಚಯಿಸಿ, ಸೇವಕನನ್ನು ಗಟ್ಟಿಯಾಗಿ ಒದರಿದನು. ಆಗ ಸೇವಕನು ಬಂದು ಕೈ ಜೋಡಿಸಿ ನಿಂತುಕೊಳ್ಳಲು ರಾಮರಾಜನು - ಹೋಗು, ನನ್ನ ಕುದುಯರೆಯನ್ನೂ, ಬೇಟೆಯ ಯಾವತ್ತೂ ಎಂದು ಈ ಮೇರೆಗೆ ರಾಮರಾಜನು ಬಡಬಡ ಮಾತಾಡಿದ್ದನ್ನು ಕೇಳಿ ತಿರುಮಲರಾಯ ವಿಚಾರಮಗ್ನನಾದನು. ತಿರುಮಲರಾಯನು ರಾಮರಾಜನ ಅಣ್ಣನಾಗಿದ್ದರೂ, ಅವರಿಬ್ಬರ ವಯಸ್ಸಿನಲ್ಲಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಅಂತರವಿದ್ದಿಲ್ಲ. ಇದಲ್ಲದೆ, ರಾಮರಾಜನ ವರ್ಚಸ್ಸಿನ ಮುಂದೆ, ತಿರುಮಲರಾಯನ ಮತಿಯು ಕುಂಠಿತವಾಗುತ್ತಿತ್ತು. ಚಿಕ್ಕಂದಿನಿಂದಲೂ ಅಣ್ಣನ ಮೇಲೆ ರಾಮರಾಜನ ವರ್ಚಸು ಬಹಳ, ರಾಮರಾಜನು ಆಜ್ಞಾಪಿಸಬೇಕು. ತಿರುಮಲರಾಯನು ಅದರಂತೆ ನಡೆಯಬೇಕು. ಈ ಕ್ರಮವು ಚಿಕ್ಕಂದಿನಿಂದ ಆ ಬಂಧುಗಳಲ್ಲಿ ನಡೆಯುತ್ತ ಬಂದಿತ್ತು. ಆದ್ದರಿಂದ ತಿರುಮಲರಾಯನು ರಾಮರಾಜನ ವಿರುದ್ದ ಮಾತಾಡಲಾರದೆ, ಸೌಮ್ಯದಿಂದ-ಸರಿ, ನೀನು ಹೇಳುವ ಮಾತು ಆಯೋಗ್ಯವೆಂದು ನಾನು ಹೇಳುವದಿಲ್ಲ. ವೈರಿಗಳ ವಿಷಯವಾಗಿ ನಾವು ಜಾಗರೂಕರಾಗಿರುವದೇ ನೆಟ್ಟಗೆ; ಆದರೆ ಪ್ರತ್ಯಕ್ಷ ಕೃಷ್ಣದೇವರಾಯರೇ ಕರೆದಿರಲು. ನೀನು ಬಾರದಿದ್ದರೆ ವ್ಯತ್ಯಾಸ ವಾಗಲಿಕ್ಕಿಲ್ಲವೇ? ಮೂರು-ನಾಲ್ಕು ದಿನಗಳಲ್ಲಿಯೇ ಲಗ್ನ ಮುಹೂರ್ತವನ್ನಿಟ್ಟರೆ ಹ್ಯಾಗೆ? ನೀನು ಮಹಾರಾಜರನ್ನು ಕಂಡು ಅವರ ಒಪ್ಪಿಗೆಯನ್ನೇ ಪಡೆದು ಹೋಗುವದು ನೆಟ್ಟಗೆ ಕಾಣುತ್ತದೆ, ಅನ್ನಲು ರಾಮರಾಜನು ಆತುರದಿಂದ-ಅಷ್ಟಕ್ಕಷ್ಟಕ್ಕೆ ಮಹಾರಾಜರನ್ನು ಕೇಳುತ್ತ ಕುಳಿತುಕೊಳ್ಳುವದರಲ್ಲಿ ಅರ್ಥವೇನು ? ರಾಜಕಾರ್ಯದ ಸಲುವಾಗಿಯೇ ನಾನು ಹೋಗುವದರಿಂದ, ಅವರಿಗೆ ವ್ಯತ್ಯಾಸವಾಗದೆ, ನನ್ನ ಕರ್ತವ್ಯ ತತ್ಪರತೆಗಾಗಿ ಅವರು ಸಂತೋಷ ಪಡಬಹುದು. ರಾಜಪುತ್ರಿಯ ವಿವಾಹ ಮುಹೂರ್ತವನ್ನು ಎಲ್ಲಿಯಾದರೂ ಮೂರು-ನಾಲ್ಕು ದಿನಗಳಲ್ಲಿ ನಿರ್ಧರಿಸುವ ಸಂಭವವುಂಟೆ ? ಸುಮ್ಮನೆ ಇಲ್ಲದ ಸಂಶಯಕ್ಕೆ ಗುರಿಯಾಗಿ, ಕಾಲಹರಣಮಾಡುವದು ಸರಿಯಲ್ಲ. ತಾವು ಮಹಾರಾಜರ ಬಳಿಗೆ ಹೋಗಿ ಲಗ್ನಮುಹೂರ್ತವನ್ನು ನಿರ್ಧರಿಸಿರಿ. ಹಿರಿಯರಿದ್ದ ಬಳಿಕ ನನ್ನ ಅವಶ್ಯವೇನಿದೆ ? ನಾನು ಬೇಗನೆ ಬರುವೆನು. ಒಂದು ಪಕ್ಷದಲ್ಲಿ ಮುಹೂರ್ತವು ಒತ್ತರಿಸಿದರೆ ನಾನೇನು ದೂರ ಹೋಗುವುದಿಲ್ಲ ; ಕರೆಕಳುಹಿದರೆ ಕೂಡಲೆ
ಪುಟ:Kannadigara Karma Kathe.pdf/೭೨
ಗೋಚರ