ಪುಟ:Kedage.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

36/ ಕೇದಗೆ

ಹಾಗೆಯೇ ಪದ್ಯವು ಏನನ್ನೂ ಹೇಳದಿರುವುದೂ ಉಂಟು. ಉದಾ :
ಕೇಳಯ್ಯ ಮಾತ ಕೇಳಯ್ಯ | ಪೇಳುವೆ ನಿನ್ನೊಳು ಸಟೆಯಲ್ಲ |
ಕಿವಿಗೊಟ್ಟು ಕೇಳಯ್ಯ | ಪೇಳುವನೀಗ ! ಕೇಳಯ್ಯ
ಇದು ಅರ್ಥಧಾರಿಗೆ ನಿಷ್ಟ್ರಯೋಜಕ ಮಾತ್ರವಲ್ಲ. ಮುಜುಗರಕ್ಕೆ ಕಾರಣ. ವಿಷಯವನ್ನು ಹೇಳಿಯೂ ಹೇಳದಂತಿರಬೇಕು. ಉದಾ :

ಕೃಷ್ಣ ಸಂಧಾನದಲ್ಲಿ ದುಧನನ ಪದ್ಯ :
ಎನಲು ಕೋಪವ ತಾಳುತಾ ಕುರು | ಜನಪ ಗರ್ಜಿಸಿ ನುಡಿದ ಗೋಪರೋ |
ಳೆನಗೆ ಮಾತೇ ನೀಕ್ಷಿಸಿದೆ ನಾ | ಗುಣಗಳೆಲ್ಲ ||
ಇಲ್ಲ ಗೋಪರೊಳೆನಗೆ ಮಾತೇನು, ನೋಡಿದೆ ಗುಣಗಳೆಲ್ಲ ಎಂಬುದು ಸೂಚಕ.

ಅದೇ ಕೃಷ್ಣ ಸಂಧಾನದಲ್ಲಿ ಕೃಷ್ಣನ ಮನೆಗೆ ಕೌರವನು ಬಂದಿರುವಾಗ ಕೃಷ್ಣನ ಪದ್ಯ :
ನೂತನವಿದು ನಮ್ಮ ಹಿರಿಯ ಭಾವಯ್ಯ ನೀ | ವೈತಂದುದಪರೂಪ ಸಾರಿ |
ಸಾತಿಶಯದೊಳಿರ್ದಪರೆ ನಿಮ್ಮವರು ಪಾಂಡು |

ಜಾತರೊಳುಂಟಾಯ್ತಿ ಕರುಣ

ಅಡವಿಗಟ್ಟಿದರೇನು ಸಹಜಾತರಿವರೆಂಬ | ಒಡಲುರಿ ತಾನಡಗುವದೇ ||
ಕಡುಹಿತದಲಿ ನೀವನ್ಯರಾದರೆ ಬಲು | ಬೆಡಗು ರಂಜಿಪುದು ರಾಜ್ಯದಲಿ ||

ಈ ಪದ್ಯಗಳ ಸ್ವಭಾವೋಕ್ತಿ, ಲಾಲಿತ್ಯಗಳು ಕೃಷ್ಣನ ಪಾತ್ರದ ಅರ್ಥಗಾರಿಕೆಗೆ ಇಂಬು ನೀಡುವುದಲ್ಲದೆ 'ಒಡಲುರಿ' ಮುಂತಾದ ಶಬ್ದಗಳು ಶ್ಲೇಷೆಯ ಕಟಕಿಯವೂ ಆಗಿವೆ.

ಕರ್ಣಪರ್ವದಲ್ಲಿ ಅರ್ಜುನನ ಪದ್ಯ :
ಎಲವೋ ಸೂತನ ಮಗನೇ | ನೀ ಕಲಹದೊಳತಿ ಸಹಸಿಗನೆ | ತಲೆಯನು
ನೀಗಲಿಕಹುದು | ಮಾ | ರ್ಮಲೆತರೆ ಕಾಣಲುಬಹುದು ||
ಇಲ್ಲಿ ಪದ್ಯ ಏನನ್ನೂ ವಿವರಿಸುವುದಿಲ್ಲ. ಆದರೆ ನೀನು ಕಲಹ ಸಾಹಸಿಗನೆ ಎಂಬುದನ್ನು ವಿಸ್ತರಿಸಲು ಅನುಕೂಲ ಕಲ್ಪಿಸುತ್ತದೆ.

ಕೆಲವು ಪದ್ಯಗಳ ರಚನೆ ವಿಸ್ತಾರವಾದ ಅರ್ಥಗಾರಿಕೆಗೂ ಹೊಂದುವಂತಿದ್ದು, ಸರಳ ಅನುವಾದವನ್ನೇ ಮಾಡಿ ಅರ್ಥ ಹೇಳಿದರೂ ಪರಿಣಾಮಕಾರಿಯಾಗುವಂತಿವೆ. ಉದಾ : ಕೃಷ್ಣ ಸಂಧಾನದಲ್ಲಿ ಶ್ರೀಕೃಷ್ಣನು ಕೌರವನನ್ನು ಉದ್ದೇಶಿಸಿ ಹೇಳುವ :

ಧರಣಿಗೋಸುಗ ನೀವು ನಿಜ ಸೋ | ದರರು ಹಳಚುವಿರೇಕೆ ಭೂಮಿಯು | ಸ್ಥಿರವಿದಾರಿಗೆ ನೀವು ಪಾಂಡವರೆರಕವಿರೆ ನಾವು | ಹರುಷಗೊಂಬೆವು