________________
222 ಕೆಳದಿನೃಪವಿಜಯಂ ಭಾವಿಸಬರ್ಪಾ ನಾಮದ ಚಾವಡಿಗೈತಂದು ನಿಂದು ಕರದೊಯೊಲವಿಂ | ದಾವಿಲಸಿತವಹ ಬಣದ ಚಾವಡಿಯೊಳ್ಗೊಂಡು ಪರಮೋತ್ಸವದಿಂ || ನೆರೆಯುಚಿತವಾದ ಮಿಗಿಲಡು ಗೊರೆಗಳನಿತ್ತವರನೈದೆ ಸನ್ಮಾನಿಸಿಯಾ | * ದರಿಸಿ ಬೀಳ್ಕೊಟ್ಟು ಬಳಿಕಂ ವರವೃಷವನದೆಡೆಯನೈದೆ ಶೃಂಗರಿಸುತ್ತುಂ | ನೆರೆ ರಮ್ಯವಾಗಿ ಸತತಂ ಮಿರುವ ಸ್ಥಳಕಾ ಯತೀಂದ್ರನಂ ಕರೆದೊಯ್ಯಾ | ದರದಿಂ ಭಿಕ್ಕವನಾಗಿಸಿ ಪಿರಿದೆನೆ ಸಂತುವಡಿಸಿ ಕಳುಸಿ ಬಳಿಕ್ಕಂ || ಪುರದೊಳೆ ಪ್ರತಿದಿನಗಳೊಳಂ ಗುರಿಕಾರರಿನೆಸೆವ ಪರದರಿಂದ ಹೆಚ್ಚೇ ! ಬರಿನುರುಭಿಕ್ಷವನಾಗಿಸಿ ನೆರೆ ಸಂತಸವಡಿಸಿದಳ್ಳಲಾ ಯತಿವರನಂ || ಮತ್ತವುದಲ್ಲದಾ ತರುವಾಯಿಯೊಳಾ ಸ್ವಾಮಿಗಳ ತ್ಯ೦ತದಿವ್ಯ ಮಾದ ಸ್ಪಟಿಕಲಿಂಗಮುಮಂ ಅನರ್ಘರತ್ನ ಖಚಿತಗೊಪಾಲಕೃಷ್ಣ ಮೂರ್ತಿಯವುಂ ಪದಕತಾಳಿಸರಪಣೆಸಹಿತಂ ಶಿವಾರ್ಪಿತವಾಗಿ ಧಾರೆಯ ನೆರೆದು ಮತ್ತಮಾದೇವರ್ಗೆಪ್ಪತ್ತನಾಲ್ಕು ವರಹದ ಭೂಸ್ವಾಸ್ಯೆಯಂ ನಿರಪಮಂ ಬರೆಸಿತ್ತು ಮತ್ತಮಂತುಮಲ್ಲದೆ, ಶೃಂಗಪುರದ ಮಠ ಸುಗಂ ತನ್ನ ಭಕ್ತಿಯಿಂ ಬೇರೆ ಮುನ್ನೂರರಹದ ಭೂ ಸ್ವಯಂ ಶಿವಾರ್ಪಿತವಾಗಿ ಉತ್ತಾರಮಂ ಮಾಡಿಸಿ, 1 ಅಕಾಲಚಕ್ರದೊಳೆ ಕೊಳುತ್ತಿರ್ದುತಾರ ಪಗುದಿಯಂ 'ಬಿಡಿಸಿ, ಆ ಮಠದ ರುಣಭಾರಕ್ಕಲ ಅರಮನೆಗೆ ತೆಗೆದುಕೊಳ್ಳುವ ವುತ್ತಾರ ಸಗುಡಿಯಂ ಬಿಡಿಸಿ (ಕ) F