ಪುಟ:Keladinrupa Vijayam.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪೋದ್ಘಾತ.

  • ಕೆಳದಿನೃಪವಿಜಯ ” ದಲ್ಲಿ ಕೆಳದಿಯ ಅರಸರ ಚರಿತ್ರೆಯು ಹೇಳಿದೆ. ಈ ಅರಸರು ಕೆಳದಿಯನ್ನು ಬಿಟ್ಟು ಮೊದಲು ಇಕ್ರಿ ಯಲ್ಲಿಯ ಆಮೇಲೆ ಬಿದುರರಿನಲ್ಲಿಯೂ ಅಧಿಕಾರ ಮಾಡುತ್ತಿದ್ದುದ ರಿಂದ ಇವರಿಗೆ ಇಕ್ಕೇರಿಯ ಅರಸರು ಅಥವಾ ನಾಯಕರು, ಬಿದುರೂರಿನ ಅರಸರು ಎಂಬ ಹೆಸರೂ ಉಂಟು, 1

ಈ ಗ್ರಂಥಕ್ಕೆ ಪೀಠಿಕೆ ಇಲ್ಲದಿರುವುದರಿಂದ ಇದನ್ನು ಬರೆದ ಕವಿಯ ಹೆಸರು ಮುಂತಾದುವುಗಳ ವಿಚಾರವಾಗಿ ಈ ಕಾವ್ಯದಿಂದ ಎನೂ ಗೊತ್ತಾಗುವುದಿಲ್ಲ. ಕವಿಚರಿತ್ರಕಾರರೂ ವಿಲ್ಬ‌ಸಾಹೇಬರೂ 8 (ಕೆಳದಿಅರಸರ ಪೂರ್ವೋತ್ತರಂ” ಎಂಬ ಗ್ರಂಥವನ್ನು ಚಿನ್ನ ಭಂಡಾರದ ನಾರಣಪ್ಪನು ಬರೆದನೆಂದು ಹೇಳುತ್ತಾರೆ. ಆದರೆ ಇವರು ಹೇಳು ವುದು ಈ ಚಂಪೂಗ್ರಂಥವಾಗಿ ತೋರುವುದಿಲ್ಲ. 4 ಗದ್ಯಗ್ರಂಥವಾಗಲಿ ಚಂಪೂಗ್ರಂಥವಾಗಲಿ, ಅದನ್ನು ಚಿನ್ನ ಭಂಡಾರದ ಪುರುಷೋತ್ತಮನ 1 ಕೆಳದಿ, ಇಕ್ಕೇರಿ, ಬಿದುರೂರು ಇವು ಶಿವಮೊಗ್ಗಾ ಡಿಸ್ಟಿಕ್ಕಿನಲ್ಲಿರುವ ಗ್ರಾಮಗಳು, ಬಿದುರೂರಿಗೆ ವೇಣುಪುರವೆಂಬ (ಸಂಸ್ಕೃತ) ಹೆಸರೂ ಈ ಗ್ರಂಥ ದಲ್ಲಿ ಉಪಯೋಗಿಸಲ್ಪಟ್ಟಿದೆ, ಹೈದರನು ೧೭೩ ರಲ್ಲಿ ಈ ಪಟ್ಟಣವನ್ನು ಜಯಿಸಿ ಅದಕ್ಕೆ ಹೈದರನಗರ ' ಎಂಬ ಹೆಸರಿಟ್ಟನು. ಅಲ್ಲಿಂದ ಅದಕ್ಕೆ ನಗರವೆಂಬ ಹೆಸರು ಬಳಕೆಯಲ್ಲಿದೆ. 2 ಕರ್ಣಾಟಕ ಕವಿಚರಿತ್ರೆ, ಪುಢವಸಂಪುಟ ; ಅನುಬಂಧ, ಪುಟ ೨೦, 3 A descriptive catalogue of the Oriental Manusüripts etc., collected by Col., Mackenzie-by H. H. Wilson; p. 332. 4 ಇದರಂತೆ ಕೆಳದಿ ಅರಸರ ವಂಶಾವಳಿ ? ಆಕ್ಕೇರಿಅರಸರ ವಂಶಾವಳಿ ? * ಇಕ್ಕೇರಿ ಅರಸರ ಪೀಳಿಗೆ' ಮುಂತಾದ ಕೆಲವು ಗದ್ಯಗ್ರಂಥಗಳಿವೆ. ಇವುಗಳಲ್ಲಿರು ಛದೆಲ್ಲಾ ಸ್ವಲ್ಪ ಹೆಚ್ಚು ಕಡಮೆ ಬಂದೇವಿಷಯ : ಈ ಗ್ರಂಥಗಳನ್ನು ಯಾರುಖರೆದ