ಪುಟ:Khinnate banni nivarisoona.pdf/೧೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

ಮಕ್ಕಳಲ್ಲಿ ಖಿನ್ನತೆ ಕಾಯಿಲೆ

ಮಕ್ಕಳು ಖಿನ್ನತೆ ಕಾಯಿಲೆಗೆ ಒಳಗಾಗುತ್ತಾರೆ. ತಂದೆ ತಾಯಿಯ ಅಗಲಿಕೆ, ಪ್ರೀತಿ, ಆರೈಕೆಗಳಲ್ಲಿ ಲೋಪಗಳು, ಪಕ್ಷಪಾತ, ತಿರಸ್ಕಾರ, ನಿರ್ಲಕ್ಷಗಳು, ಸಹೋದರ ಮಾತ್ಸಲ್ಯ, ಶಾಲೆ-ಶಿಕ್ಷಣದ ಸಮಸ್ಯೆಗಳು, ಕಲಿಕೆಯಲ್ಲಿ ಹಿಂದುಳಿಯುವಿಕೆ, ಪರೀಕ್ಷೆ-ಸ್ಪರ್ಧೆಯಲ್ಲಿ ವಿಫಲತೆ, ಸಹಪಾಠಿಗಳ ನಿರ್ಲಕ್ಷ ವಿವಿಧ ರೀತಿಯ ಶೋಷಣೆ, ದೌರ್ಜನ್ಯಗಳು, ಲೈಂಗಿಕ ಅಪಚಾರ ಖಿನ್ನತೆ ಕಾಯಿಲೆಗೆ ಕಾರಣವಾಗಬಹುದು.

ಲಕ್ಷಣಗಳು

  1. ಮಂಕುತನ, ಒಂಟಿಯಾಗಿರುವುದು, ಇತರ ಮಕ್ಕಳೊಂದಿಗೆ ಬೆರೆಯದಿರುವುದು, ಜನರಿಂದ ದೂರವಿರುವುದು, ಆಟಪಾಠಗಳಲ್ಲಿ ಭಾಗವಹಿಸದಿರುವುದು.
  2. ಆಹಾರ ಸೇವನೆ ಮಾಡದಿರುವುದು, ತಿನ್ನಬಾರದ ವಸ್ತುಗಳನ್ನು ತಿನ್ನುವುದು.
  3. ನಿದ್ರಾಹೀನತೆ, ಕೆಟ್ಟ ಕನಸುಗಳು ಬಿದ್ದು ಎಚ್ಚರವಾಗುವುದು, ನಿದ್ರಾ ತೊಂದರೆಗಳು/ ನಿದ್ರೆಯಲ್ಲಿ ಮಾತನಾಡುವುದು, ಭಾವೋದ್ರೇಕವನ್ನು ಪ್ರಕಟಿಸುವುದು, ನಿದ್ರೆಯಲ್ಲಿ ಮೂತ್ರ ವಿಸರ್ಜಿಸುವುದು (ಹಾಸಿಗೆ ಬಟ್ಟೆ ಒದ್ದೆಯಾಗುತ್ತದೆ) ನಿದ್ರಾ ನಡಿಗೆ, ಹಲ್ಲು ಮಸೆಯುವುದು ಇತ್ಯಾದಿ.
  4. ಕಲಿಕೆಯಲ್ಲಿ ಹಿಂದುಳಿಯುವುದು, ಕಲಿತದ್ದನ್ನು ಮರೆಯುವುದು, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದೆ ಕಡಿಮೆ ಅಂಕಗಳನ್ನು ಪಡೆಯುವುದು, ಫೇಲಾಗುವುದು, ಶಾಲೆಗೆ ಹೋಗಲು ನಿರಾಕರಿಸುವುದು.14 / ಖಿನ್ನತೆ: ಬನ್ನಿ ನಿವಾರಿಸೋಣ