ಪುಟ:Khinnate banni nivarisoona.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇತರರಿಗೆ ನೋವು, ನಿರಾಶೆ, ದುರಾಸೆಯ ನಿಮ್ಮನ್ನು ಎಲ್ಲರೂ ಇಷ್ಟಪಡದೆ ಗೌರವಿಸದೆ ದ್ವೇಷಿಸುತ್ತಾರೆ. ನಿಮಗೆ ಕೆಡುಕಾಗಲಿ ಎಂದೇ ಹಾರೈಸುತ್ತಾರೆ. ನೀವು ಕೆಟ್ಟರೆ ಸಂತೋಷಪಡುತ್ತಾರೆ!

ಆಹಾರವಿರಲಿ, ವಸ್ತ್ರ, ವಸತಿಯಿರಲಿ, ಅಲಂಕಾರದ ಒಡವೆ ವಸ್ತುಗಳಿರಲಿ, ಕೀರ್ತಿ ಕಾಮನೆಗಳಿರಲಿ ಮೆಚ್ಚುಗೆ ಪುರಸ್ಕಾರಗಳಿರಲಿ ಅವುಗಳಲ್ಲಿ ಗಳಿಸಿ ಸುಖಿಸುವ ಆಸೆಗೆ ಮಿತಿಯಿರಲಿ, ನಿಮ್ಮ ಆದಾಯ, ಯೋಗ್ಯತೆ, ಶಕ್ತಿ, ಸಾಮರ್ಥ್ಯಕ್ಕೆ ಅದು ಅನುಗುಣವಾಗಿರಲಿ, ಎಷ್ಟು ಲಭ್ಯವೋ ಅಷ್ಟರಲ್ಲಿ ಸಂತೋಷ, ತೃಪ್ತಿಯಿರಲಿ, ಹೆಚ್ಚುವರಿ ಆಹಾರ ಧನ ಧಾನ್ಯ ಸಿರಿಯನ್ನು ಹಂಚಿಬಿಡಿ, ದಾನ ಧರ್ಮ ಮಾಡಿ, ಇಲ್ಲದವರಿಗೆ ಕೊಟ್ಟು ಸಂತೋಷಪಡಿ, ಈ ಕ್ರಿಯೆಯಿಂದ ಬರುವ ನೆಮ್ಮದಿ ತೃಪ್ತಿ ಅನುಪಮ/ ಅದ್ವಿತೀಯವಾದದ್ದು, ಕೊಟ್ಟು ಸುಖಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ.

2. ನಿರೀಕ್ಷೆ ಕಡಿಮೆಯಿರಲಿ

ನಿಮ್ಮಿಂದ ನೀವು ಏನು ಮತ್ತು ನಿರೀಕ್ಷೆ ಮಾಡುತ್ತೀರಿ? ಯಾವ ಸಾಧನೆ, ಎಷ್ಟು ಸಾಧನೆ ಮಾಡಬೇಕೆಂದಿದ್ದೀರಿ? ಎಷ್ಟು ಎತ್ತರದ ಮಟ್ಟವನ್ನು ತಲುಪಬೇಕೆಂದಿದ್ದೀರಿ? ನಿಮ್ಮ ಗುರಿಯೇನು? ಎಷ್ಟು ಬೇಗ ಮುಟ್ಟಬೇಕು? ವಿದ್ಯಾಭ್ಯಾಸದಲ್ಲಿ, ಉದ್ಯೋಗದಲ್ಲಿ, ಕುಟುಂಬದಲ್ಲಿ ಸಮಾಜದಲ್ಲಿ ನಿಮ್ಮ ಗಳಿಕೆ ಸಾಧನೆ ಎಷ್ಟಿರಬೇಕು? ಯಾವ ಎತ್ತರಕ್ಕೇರಬೇಕು? ನಿಮ್ಮ ಬುದ್ಧಿಮಟ್ಟ ನಿಮಗಿರುವ ಛಲ, ಬದ್ಧತೆ, ದೈಹಿಕ ಮಾನಸಿಕ ಶಕ್ತಿ ಸಾಮರ್ಥ್ಯಗಳು ಅವುಗಳಲ್ಲಿರುವ ನ್ಯೂನತೆ ಕೊರತೆಗಳು, ನಿಮ್ಮ ಪ್ರತಿಸ್ಪರ್ಧಿಗಳು ಯಾರು, ಎಷ್ಟು ಜನರಿದ್ದಾರೆ, ಅವರ ಬಲಾಬಲಗಳೇನು, ನಿಮ್ಮ ಸಮಾಜದ ನಿಮ್ಮ ನಿರೀಕ್ಷೆಗಳನ್ನು ರೂಪಿಸಿಕೊಳ್ಳಿ, ವಾಸ್ತವಿಕತೆಯ ಅರಿವಿರಲಿ, ಅವಾಸ್ತವಿಕ ನಿರೀಕ್ಷೆಯಿಂದ ವಿಫಲತೆ, ವಿಫಲತೆಯಿಂದ ಖಿನ್ನತೆ.

ನಿಮ್ಮ ತಂದೆ ತಾಯಿ ಸೋದರ ಸೋದರಿಯರು, ನಿಮ್ಮ ಜೀವನ ಸಂಗಾತಿ, ನಿಮ್ಮ ಮಕ್ಕಳು, ಸಹೋದ್ಯೋಗಿಗಳಿಂದ ಏನು ಮತ್ತು ಎಷ್ಟನ್ನು


40 / ಖಿನ್ನತೆ: ಬನ್ನಿ ನಿವಾರಿಸೋಣ