ಈ ಪುಟವನ್ನು ಪ್ರಕಟಿಸಲಾಗಿದೆ
ದಾರಿ ತುಳಿಯುವುದು, ಮೋಸ ವಂಚನೆಯ ಮೂಲಕ, ನೀತಿ ನಿಯಮಗಳನ್ನು ಪಾಲಿಸದೆ, ಸಂಪತ್ತು ಸ್ಥಾನಮಾನಗಳನ್ನು ಪಡೆಯುವುದು, ಇತರರನ್ನು ಉಪೇಕ್ಷಿಸುವುದು, ತಿರಸ್ಕಾರದಿಂದ ನೋಡುವುದು, ಅವಮಾನ ಮಾಡುವುದು, ಹಿಂಸೆ-ಆಕ್ರಮಣ-ಶೀಲತೆ-ನಾಶಮಾಡುವ ಪ್ರವೃತ್ತಿಯನ್ನು ತೋರುವುದು, ಮಾನಸಿಕ ಅನಾರೋಗ್ಯದ ಪ್ರಮುಖ ಲಕ್ಷಣಗಳು.
ಮಾನಸಿಕ ಆರೋಗ್ಯ ಮತ್ತು ಅನಾರೋಗ್ಯವನ್ನು ನಿರ್ಧರಿಸುವ ಅಂಶಗಳು
ವ್ಯಕ್ತಿ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ(ಳೆ)ಯೇ ಅಥವಾ ಅನಾರೋಗ್ಯವಾಗಿದ್ದಾನೆ(ಳೆ)ಯೇ ಎಂಬುದನ್ನು ಹಲವಾರು ಅಂಶಗಳು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ನಿರ್ಧರಿಸುತ್ತವೆ ಎಂಬುದು ಗಮನಾರ್ಹ.
- ಅನುವಂಶೀಯತೆ ನ್ಯೂನತೆಯುಳ್ಳ ವಂಶವಾಹಿನಿಗಳು, ವರ್ಣತಂತುಗಳು.
- ಮಿದುಳಿನ ಬೆಳವಣಿಗೆ-ಮಿದುಳಿಗಾಗುವ ಹಾನಿ, ನ್ಯೂನತೆ ಕೊರತೆಗಳು.
- ತಂದೆತಾಯಿಗಳ ಲಾಲನೆ ಪಾಲನಾ ವಿಧಾನಗಳು
- ಕುಟುಂಬದ ಇತರ ಸದಸ್ಯರ ಮನೋಭಾವ ನಡೆವಳಿಕೆಗಳು.
- ಮನೆಯ ವಾತಾವರಣ.
- ಶಾಲೆ-ಶಿಕ್ಷಕರು-ಸಹಪಾಠಿಗಳು-ಶಿಕ್ಷಣದ ಗುಣಮಟ್ಟ.
- ನೆರೆಹೊರೆ-ಸಮಾಜದ ರೀತಿನೀತಿಗಳು.
- ಮಾಧ್ಯಮಗಳ ಗುಣಮಟ್ಟ ಮತ್ತು ಪ್ರಭಾವ.
- ಹಣಕಾಸು, ಸಂಪನ್ಮೂಲಗಳ ಹೆಚ್ಚಳ ಅಥವಾ ಕೊರತೆ.
- ಪರಿಸರ
- ದೇಹದ ಆರೋಗ್ಯಸ್ಥಿತಿ ಅಥವಾ ಕಾಯಿಲೆಗಳು.
48 / ಖಿನ್ನತೆ: ಬನ್ನಿ ನಿವಾರಿಸೋಣ