ಪುಟ:Mrutyunjaya.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೦

ಮೃತ್ಯುಂಜಯ

"ಹೌದು, ನಾವು ಶ್ರಮಪಟ್ಟು ಪ್ರಾಮಾಣಿಕವಾಗಿ ದುಡೀತಿದ್ದೇವೆ.
ಅಧಿಕಾರಿಗಳು ನ್ಯಾಯವಾಗಿ ವರ್ತಿಸ್ತಿದ್ದಾರಾ ಹೇಳಿ!"
ಕೆಲವು ಗಂಟಲುಗಳಿಂದ ಆ ಪದವೇ ಕೇಳಿಸಿತು:
"ಹೇಳಿ! ಹೇಳಿ!"
"ಏನೋ ತಪ್ಪು ಗ್ರಹಿಕೆಯಿಂದ ಮನಸ್ತಾಪವುಂಟಾಗಿದೆ. ಇದು
ಮಾಟ್ ಗೆ ಅನುಗುಣವಾಗಿ ಇತ್ಯರ್ಥವಾಗ್ಬೇಕು. ಅಧಿಕಾರಿ ಮಹಾಶಯರು
ನ್ಯಾಯ ರೀತಿಯಿಂದ ವರ್ತಿಸ್ತಾರೆ ಅನ್ನೋದರಲ್ಲಿ ನನಗೆ ಸಂದೇಹ ಇಲ್ಲ."
ಗಟ್ಟಿ ಗಂಟಲು ಕೇಳಿಸಿತು:
"ನ್ಯಾಯವಾಗಿ ವರ್ತಿಸ್ಲಿ. ಮೆನೆಪ್‍ಟಾನನ್ನು ಬಿಡ್ಲಿ. ಈಗಲೇ!
ಈಗಲೇ!"
ಮಾರ್ದನಿ ಕೇಳಿಸಿತು:
"ಈಗಲೇ ! ಈಗಲೇ !"
ಅಪೆಟ್ ನ ಗಂಟಲೊಣಗಿತ್ತು. ಆತ ಆಶೀರ್ವದಿಸುವುದಕ್ಕೋಸ್ಕರ
ಬಲ ತೋಳನ್ನೆತ್ತಿದ. ಅದನ್ನು ಕಾಣುತ್ತಲೇ, ಜನ ಯಾಂತ್ರಿಕವಾಗಿ ಬಾಗಿ
ನಮಿಸಿದರು. ತಕ್ಷಣವೇ ತಲೆ ಎತ್ತಿ ಅಂದರು:
"ಓ ಮೆನೆಪ್‍ಟಾ! ಓ ಮೆನೆಪ್‍ಟಾ!"
ಅಪೆಟ್ ಬಕಿಲನ ಮುಖ ನೋಡಿದ. ಬಕಿಲ ಅರ್ಚಕನನ್ನು ಪ್ರವೇಶ
ದ್ವಾರದ ಕಿಂಡಿಯ ಮೂಲಕ ಒಳಕ್ಕೆ ತಳ್ಳಿದ.
ರಾಮೆರಿಪ್‍ಟಾ ಹುಟ್ಟಿದಾಗ ಮಗು ಅತ್ತ ಸದ್ದು ಕೇಳಿ, ಹೊರಗೆ
ಗೋಡೆಗೊರಗಿ ನಿಂತು, ಆನಂದದ ಉದ್ವೇಗವನ್ನು ಮೆನೆಪ್‍ಟಾ ತಡೆಯಲೆತ್ನಿ
ಸಿದ್ದ, ಕಣ್ಣುಗಳನ್ನು ಮುಚ್ಚಿಕೊಂಡು ಈಗಲೂ ಅದೇ ಅನುಭವ; ಅದೇ
ಪ್ರಯತ್ನ.
ಇಪ್ಯುವರ್ ನಿಗೆ ಪ್ರಕಟಗೊಳಿಸಲಾರದ ದರ್ಪ. ಆತ ಅಪೆಟ್ ನತ್ತ
ನಡೆದ. ಗೌರವ ಸೂಚಕವಾಗಿ ತುಸು ದೂರದಲ್ಲಿ ನಿಂತು ಮುಗುಳುನಕ್ಕ.
ಅಪೆಟ್ ನ ಕಣ್ಣುಗಳು ಹನಿಯಾಡಿದಂತೆ ಕಂಡಿತು. ಕಣ್ಣುಗಳನ್ನು ಗಟ್ಟಿಯಾಗಿ
ಮುಚ್ಚಿ ತೆರೆದು, ಉಗುಳು ನುಂಗಿ, ಆತ ಇಪ್ಯುವರ್ ನತ್ತ ನೋಡಿ ಕೇಳಿದ :‌‌‌‌‌‌‌‌‌‌‌‌‌‌‌‌‌‌