ಪುಟ:Mrutyunjaya.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೧೧೩. ಒಲಿಸಿಕೊಲಳ್ಳುವ ದ್ವನಿಯಲ್ಲಿ ಮೆನೆಪ್ಟಾ ನುಡಿದ  :

  • ಇದು ದೈವವಿರೋಧಿ ಕೆಲಸವಂತೂ ಅಲ್ಲ ಹಾಗೆ ನೋಡಿದರೆ ಪೆರೋಗೆ ಇದಿರಾಗಿಯೂ ನಾವೇನೂ ಮಾಡ್ತಾ ಇಲ್ಲ, ತನ್ನ ಮಕ್ಕಳು ನಾಯನಿಷ್ಟರಾಗಿದ್ದರೆ ತಂದೆ ಪೆರೋ ಸಂತೋಷ ಪಡಲೇಬೇಕು ಅಲ್ಲವಾ ?”

ಮತ್ತೂ ಸ್ವಲ್ಪ ಹೊತ್ತು ಯೋಚಿಸಿ ಸೆಮ ಉತ್ತರಿಸಿದ :

  • ಈ ಪ್ರಾಂತದ ನಾವೆಲ್ಲ ಒಂದೇ ಬುಡಕಟ್ಟಿನವರು. ನಮ್ಮದು ಒಂದೇ ಪ್ರತೀಕ ನೀರಾನೆ ಏಕರೀತಿಯ ನಡಾವಳಿ.. ಈಗ, ಅಪೂರ್ವ ವಾದದ್ದನ್ನು ನಮ್ಮ ಜನ ಮಾಡಿದಾರೆ. ಆಗಲಿ ಎಲ್ಲರೂ ಒಟ್ಟಿಗೇ ಈಸೋಣ ಮುಳುಗಿದರೆ ಒಟ್ಟಿಗೇ ಮುಳುಗೊಣ."

ಇಂಥ ಮಾತು ತನಗೆ ಇಷ್ಟವಿಲ್ಲವೆಂದು ಹೇಳಲು ಹೋರಟ ಖ್ನಮ್ ಹೊಟಿಪ್ ಪದಗಳನ್ನು ಗಂಟಲಿನ ಆಳಕ್ಕೆ ತಳ್ಳಿದ. ಅಸಹನೆಯಿಂದ ಅವನ ಭುಜ ‌‌ಚಿಮ್ಮಿತ್ತು. - ಸ್ನೊಫ್ರುನೆಂದ . “ ಹಾಗೇ ಆಗಲಿ ಸೆಮ. ಹೆಜ್ಜೆ ಮುಂದಿಟ್ಟಿದ್ದೇನೆ. ಇನ್ನು ಹಿಂದಕ್ಕೆ ಸರಿಯೋ ಮಾತೇ ಇಲ್ಲ.”

  • ಸಭೆಯ ಏಪಾ೯ಟಿಗಾಗಿ ನಾನು ರಾಜಗೃಹಕ್ಕೆ ಹೋಗ್ಟೇನೆ," ಎಂದು ಖೈಮ್ ಹೊಟೆಪ್, ಪ್ರತಿಕ್ರಿಯೆಗಾಗಿ ಕಾಯದೆ, ವಂದಿಸಿ ಹೊರಬಿದ್ದ.

...ರಾಮೆರಿಪ್ ಟಾ ತಾಯಿಯನ್ನು ಕಾಡಿದ:

  • ಅಮ್ಮ, ನಾನು ಹೋಗ್ಲೇಬೇಕು. ನೀನೂ ಬಾ.”

ನೆಜಮುಟ್ ಅಂದಳು : "ಏನಮ್ಮ ನೆಫಿಸ್-ನಾವೇ ಹೋಗ್ದೆ ಇದ್ದರೆ ಹ್ಯಾಗೆ ?" ನೆಫಿಸ್ ಗಂಡಸರಿಗೆ ಕೇಳಿಸುವಂತೆ ಅಂದಳು : ... ರಾಜಗೃಹಕ್ಕೆ ನಾವೊ ಬರೋಣವೋ ?” ಮೌನವಾಗಿದ್ದ ಮಿತ್ರರನ್ನು ಕಂಡು, ಮೆನೆಪ್ಟಾ ಅಂದ ;

  • ಬೇಡ ಅನ್ನೋದಕ್ಕೆ ನಾವು ಯಾರು ? ನೀರಾನೆ ಪ್ರಾಂತದಲ್ಲಿ ಎಲ್ಲರೂ ಸ್ವತಂತ್ರರು.”

පණ්