ಪುಟ:Mrutyunjaya.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ್ರುತ್ಯುಂಜಯ ೧೧೫ "ಗಂಡಸರಿಗೆ ತಿಳಿಸ್ಬಿಡಿ. ನಮಗೆ ಮುಖ್ಯವಾಗಿ ಬೇಕಾದು ನೀರು. ನದೀ ನೀರು ಕಾಲುವೆಗಳಲ್ಲಿ ಸದಾ ಹರಿದು ಬರಬೇಕು. ಹರಿಯೋ ನೀರು ಇದ್ದರೇನೇ ಮನೆ ಹಿತ್ತಿಲು ಚೊಕ್ಕಟವಾಗಿಡೋದು ಸಾಧ್ಯ.”

   “ ನಿಜ, ನಿಜ. ಖಂಡಿತ ಹೇಳೋಣಾ, ತಬು," ಎಂದಳು ನೆಜಮುಟ್.
    ತಬಬುವಾ ನಿದಾನವಾಗಿ ನುಡಿದಳು:

“ ಆ ಖೈಮುಗೆ ಮನೆಯ ಯೋಚನೆಯೇ ಇಲ್ಲ, ಹುಡುಗಿ ಒಬ್ಬಳೇ ಇದ್ದಾಳೆ. ಸಾರಿಸಿ ಆದ್ಮೇಲೆ ಅಲ್ಲಿಗೆ ಹೋಗ್ತೇನೆ. ಅವಳನ್ನೂ ಕರೆದುಕೋಂಡು ರಾಜಗೃಹಕ್ಕೆ ಬಂದರೂ ಬಂದೆ." ರಾಜಗೃಹದತ್ತ ಹೋರಟ ನೆಫಿಸ್, ನೆಜಮುಟರಿಗೆ ಅಚ್ಚರಿ ಕಾದಿತ್ತು. ಬೀದಿಯನ್ನು ಗುಡಿಸಿದ್ದರು, ನೀರು ಚಿಮುಕಿಸಿದ್ದರು. ರಾಜಗೃಹದ ಹೊರಗಿನ ಬಯಲು ಸ್ವಚ್ಛವಾಗಿತ್ತು. ನೀರು ಹನಿಸಿ ಚಾಪೆಗಳನ್ನು ಹಾಸಿದ್ದರು. (" ನಮ್ಮ ಮನೆಗಳನ್ನು ಬಿಟ್ಟು ಬೆರೆ ಎಲ್ಲಾ ಕಡೆಗಳಿಂದ ಚಾಪ ತಂದಿದಾ ರೇಂತ ತೋರ್ತದೆ.”) ರಾಜಗೃಹದ ಸಭಾಂಗಣದ ವೇದಿಕೆಯೂ ಪೀಠಗಳು ಹೊರಗೆ ಬಂದಿದ್ದುವು . ನಗೆಯಲೆಗಳಿದ್ದುವೇ ಹೊರತು ಗದ್ದಲವಿರಲಿಲ್ಲ. ವೇದಿಕೆಯ ವರೆಗೂ ದಾರಿಬಿಟ್ಟಿದ್ದರು. ವೇದಿಕೆಯ ಎಡಬಲಗಳಲ್ಲಿ ಶಿಸ್ತಿನಿಂದ ಕುಳಿತಿದ್ದ ಜನರ ಬಲಮಗ್ಗುಲಲ್ಲಿ ಒಂದಷ್ಟು ಜಾಗ ಸ್ತ್ರೀಯರಿಗೆ ಮಿಸಲಾಸಲಾಗಿತ್ತು. ಮಹಾದ್ವಾರದ ಸ್ಥಳದಲ್ಲಿದ್ದುದು ಬರಿಯ ಚೌಕಟ್ಟು ಮಾತ್ರ ಬಾಗಿಲ ಹಲಗೆಗಳನ್ನು ಕುಟ್ಟಿ ಮುರಿದಿದ್ದ ತಾಳೆಮರದ ದಿಮ್ಮಿಯನ್ನು ವೇದಿಕೆಯ ಹಿಂದೆ ನೆಟ್ಟು ಅದನ್ನು ಮೆಖ್ಮೆಖ್, ಸೀಮು, ಜೇಯಿಟ್ ಹೂಗಳಿಂದ ಅಲಂಕರಿಸಿದ್ದರು. ನೆಫಿಸ್ ನೆಜಮುಟ್ರನ್ನು ಇದಿಗೊ೯ಂಡವನು ಇಪ್ಯುವರ್. ಅರಳಿ ಸ್ಥಿರ ಅಕಾರ ಪಡೆದಿದ್ದ ಒಂದು ನಗೆ, ಆತನ ಮುಖದ ಮೇಲೆ ಇತ್ತು., ಆತ ನೆಫಿಸಳ ಬಳಿ ಸಾರಿ ಹೇಳಿದ : "ಫೀಠಗಳಿವೆ. ಬನ್ನಿ ಕೂತ್ಕೋಳ್ಳಿ.” ನೆಜಮುಟ್ ಪೀಠಗಳ ಕಡೆಗೊಮ್ಮೆ ನೋಡಿ ಅಂದಳು: ನೆಜಮುಟ್ ಪೀಠಗಳ ಕಡೆಗೊಮ್ಮೆ ನೋಡಿ ಅಂದಳು ;