ಪುಟ:Mrutyunjaya.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಅಪರಾಹ್ನ ಕತ್ತೆಗಳ ಮೇಲೆ ಚೀಲಗಳಲ್ಲಿ'ಧಾನ್ಯ ರಾಜಗೃಹಕ್ಕೆ ಬರತೊಡಗಿತು.

ಕಂದಾಯ ಸಲ್ಲಿಸಿದವರ ಹೆಸರನ್ನೂ ಧಾನ್ಯದ ಅಳತೆಯನ್ನೂ ಇಪ್ಯೂವರ್
ಬರೆದಿಟ್ಟಿ.
   ಒಂದೆಡೆ ಕಂದಾಯ ವಸೂಲಿ, ಇನ್ನೊಂದೆಡೆ ಊರಿಗೆ ನೀರು ಪೂರೈಕೆ
ಯಾಗುವ ನದೀ ದಡದ ಬಾವಿಯಿಂದಲೂ ಕಾಲುವೆಗಳಿಂದಲೂ ಹೊಳೆತ್ತುವ 

ದುಡಿಮೆ. ಅಲ್ಲಿ ಇನ್ನೂರು ಮುನ್ನೂರು ಜನ ದುಡಿದರು. ಬೆಳಗ್ಗೆ ರಾಜ ಗೃಹಕ್ಕೆ ತೆರಳಿ ಇಪ್ಯುಯೂವರ್ ಗೆ ಹೆಸರು ಕೊಟ್ಟು ಕೆಲಸಕ್ಕೆ ಹೋಗುತ್ತಿದ್ದರು.

ಈ ಜನ . ಹದಿನೆಂಟು ಇಪ್ಪತು ಜನರ ತಂಡ. ಸಂಜೆ ರಾಜಗೃಹದಲ್ಲಿ 

ಅವರಿಗೆ ಧಾನ್ಯ, ಎಣ್ಣೆ ವಿತರಣೆ, ಹತ್ತು ದಿನಗಳಿಗೊಮ್ಮೆ ಒಂದು ದಿನ ರಜ್ಯ ಮುಖ್ಯ ಬೀದಿಯ ಪಕ್ಕದಲ್ಲಿ, ಅಡ್ಡ ರಸ್ತೆಗಳ ಮಗ್ಗುಲಲ್ಲಿ, ಮನೆಮನೆಗಳ ಬಿಳಿ ನೀರು ಹರಿಯತೊಡಗಿದಾಗ ಜನರು ಸಂಭ್ರಮವೋ ಸಂಭ್ರಮ.

       ಗ್ರಾಮಾಂತರ ಪ್ರದೆಶಗಳಲ್ಲೂ ಕಂದಾಯ ವಸೂಲಿ ನಡೆಯಿತು. ಅಲ್ಲಿ 

ಕೆಟ್ಟ ಹೋಗಿದ್ದ ರಸ್ತೆಗಳನ್ನು ಸರಿಪಡಿಸುವ ಹೊಸವನ್ನು ನಿರ್ಮಿಸುವ ಕಾರ್ಯವೂ ನೆರವೇರಿತು . ಮೆನೆಪ್ ಟಾನೋಂದಿಗೆ ಅಬ್ಟು ಯಾತ್ರಿಕರಾಗಿದ್ದ ವೆರಿಗೆಲ್ಲ ಎಲ್ಲಿಲ್ಲದ ಆಸಕ್ತಿ.

     ಎಲ್ಲೆದೆಗಳಲ್ಲೂ ಹತರಲ್ಲೊಂದು ಭಾಗ ಕಂದಾಯ ದೋರೆಯಲಿಲ್ಲ.
ಕಾಳಿಲ್ಲದೆ  ಕಷ್ಟಕ್ಕೊ ಳಗಾದವರಿಗೆ ವಿನಾಯಿತಿ ಇತ್ತು.
     “ ನಮಗೆ ನಾವೇ ರಾಜರಾದರೂ ಕಂದಾಯ ತಪ್ಪಲಿಲ್ಲ,” ಎಂದ 

ಕುಚೇಷ್ಟೆಯ ಮಾತು ಆಡಿದವರೂ ಇದ್ದರು. ಆದರೆ ಮೆನೆಪ್ ಟಾನ್ ತನಕ ಒಂದು ದೂರು ಬರಲಿಲ್ಲ.

    ನಾಯಕ ದಿನಂಪ್ರತಿ ಪೂರ್ವಾಹ್ನ ರಾಜಗೃ ಹಕ್ಕೆ  ಹೋಗಿ ಮಧ್ಯಾಹ್ನದ 

ವರೆಗೆ ಅಲ್ಲಿರುತಿದ್ದ. ದಿನಬಿಟ್ಟು ದಿನ ಸ್ನೊಫ಼್ರು ಅಥವ ಸೆಬೆಕ್ಖು ಬರುತಿದ್ದರು. ತಿಂಳಿಗೊಮ್ಮೆ ಹಿರಿಯರ ಸಮಿತಿ ಸೇರುತಿತ್ತು .

   ಹಿರಿಯರು ಪ್ರಾಂತಗಳಲ್ಲಿ ಸಂಚರಿಸಿ ಗ್ರಾಮ ಸಮಿತಿಗಳನ್ನು ರಚಿಸಿ 

ಬಂದರು.

   ತನ್ನ ಪಾಲಿನ ಕಂದಾಯವನ್ನು ಮೆನೆಪ್ ಟಾನೂ ಸಂದಾಯ ಮಾಡಿದ.