ಪುಟ:Mrutyunjaya.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಸ್ನೋಫ್ರು ಸೆಬಕ್ಖು ಬರಲಿ. ಹಿರಿಯರ ಸಮತಿಯೂ ಸರಿಯಾಲೋಚಿಸ್ಲಿ. ಆಮೇಲೆ____"

      "ಆಗಲಿ, ಆಗಲಿ. ಸಂಜೆಯೊಳಗೆ ಹೇಳಿ,"
      ಕ್ಷಮಿಸ್ಬೇಕು. ಆಗಲೆ ತಡವಾಗಿದೆ. ರಾಜಧಾನಿಯಲ್ಲಿ ವರ್ತಕರು ನನ್ನ ದಾರಿ ನೋಡ್ತಿರ್ತಾರೆ. ಮೂಂದಿನ ಹೀರಿ ತುಂಬಿಕೋಂಡು ಬಂದಾಗ ನೀವು ಹೇಳಿದಂತೆ ಕೇಳ್ತೀನಿ."
 ನಿಮ್ಮಿಷ್ಟ. ಇವತ್ತು ಸಂಜೆಯ ಅತಿಥ್ಯಾವನ್ನಾದರೂ ಸ್ವೀಕರಿಸಿ ಹೊರಡಿ."
     "ಕೆಫ್ಛು ಇದನ್ನು ನಿರೀಕ್ಷಿಸಿದ. ಅವನ ಸಮಸ್ಯೆ, ನಾವೆಯ ನೌಕರರು. ಹೊರಗೆ ಬಿಟ್ಟರೆ ಸಾಕು. ಅವರ ಮೂಗು ಸೂಳೆಗೇರಿಯತ್ತ ನೀರವಾಗಿ ಸಾಗುತಿತ್ತು. ನೀರನೆ ಪ್ರಾಂತದೋಡನೆ ನ್ಥಾಸಿಸಬೇಕಾದ ವಣಿಜ್ಯ ಸಂಬಂಧದ ಸೂಕ್ಷ್ಮ ಘಟ್ಟ ಅದು. ಯಾವುದೆ ಬಗೆಯ ಅಭಾಸಕ್ಕೆ ಎಡೆಗೊಡದೆ ಅಲ್ಲಿಂದ ಹೊರದುವುದು ಶ್ರೇಯಸ್ಕರ. ದೋಣಿ ಲಂಗರು ಬಿಟ್ಟ ಕಡೆ  ಹೆಣ್ಣುಗಳು ಬೇಕು, ನೌಕರರಿಗೂ ತನಗೂ. ನೆಘೆರುರಾ ಬಗೆಗೆ ಕೆಫ್ಛು ಕೇಳಿದ್ದ. ಅವಳು ನತಿರ್ ಸುವುದನ್ನು ನೋಡುವ ಆಸೆ ಅವನಿಗಿಲ್ಲವೆ? ಆದರೆ ಆತ್ಮಸಂಯಮ ಆವನ ವರ್ತ್ತಿಯ ಮೂಖ್ಯ ಲಕ್ಷಣ. ನಿರೀಕ್ಷಿಸಿದ್ದ ಪ್ರಶ್ನೆಗೆ ಉತ್ತರವನ್ನೂ ಅವನು ಸಿದ್ಧಿಗೊಳಿಸಿದ್ಧ.
     "ಅನ್ಯಥಾ ಭಾವಿಸಬಾರದು. ಮುಚ್ಚಂಜೆಯ ಹೊತ್ತಿಗೆ ಹೊರಟರೆ ಆರನೆಯ ಬೆಳಗ್ಗೆ ಮೆಫಿಸ್ ಸೀರ್ತೇನೆ. ಬಿಸಿಲೇರಿದ ಮೇಲೆ ರಾಜಧಾನಿ ತಲಪಿದರೆ ಆ ದಿವಸ ಏನು ಕೆಲಸವೂ ಆಗೋದಿಲ್ಲ."
      ಮನೆಪ್ಛಾ ಪರೀಕ್ಷಕ್ಕೆ ನೋಟದಿಂದ ಕೆಪ್ಛುವಿನ ಮುಖವನ್ನು ದಿಟ್ಟಿಸಿದ. ವಿನಮ್ರತೆಯ ಹೊರತಾಗ ಬೀರೆ ಯಾವ ಭಾವನೆಯೂ ಅಲ್ಲಿರಲಿಲ್ಲ.
      ಕೆಫ್ಛು ಮತ್ತು ಮನೆಪ್ಛಾ ಹೂಗಿಡಗಳನ್ನು ನೋಡುತ್ತಿದ್ದಂತೆ, ಸ್ನೋಫ್ರು ಮತ್ತು ಸೆಬೆಕ್ಖುರನ್ನು ಕರೆದುಕೊಂಡು ಖ್ನೆಮ್ಹೋಟಿಪ್ ಅಲ್ಲಿಗೆ ಬಂದ. ವಾಣಿಜ್ಯ ಸಂಭಂಧದ ವಿವರಗಳನ್ನು ಖ್ನೆಮ್ ಇಂದ ಅವರು ಆಗಲೇ