ಪುಟ:Mrutyunjaya.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯು೦ಜಯ

ಒ೦ದು ಸುರುಳಿಯನ್ನು ಹೊರತೆಗೆದು ಬಿಚ್ಚಿ ಲಿಪಿಕಾರ ಓದಿದ :
"ಹಗಲುಗನಸು ಕಾಣುವುದರಲ್ಲಿ ಕಾಲ ಕಳೆಯಬೇಡ; ಹಾಗೆ ಮಾಡಿದೆ
ಯೆ೦ದರೆ ಸಂಕಷ್ಟಕ್ಕೆ ಈಡಾಗುವೆ."
ಹುಬ್ಬು ಹಾರಿಸಿ ಮೆನೆಪ್ಟಾನನ್ನೊಮ್ಮೆ ನೋಡಿ, ఆ ಹಾಳೆಯನ್ನು
ಸುತ್ತಿ, ಇನ್ನೊಂದನ್ನು ಲಿಪಿಕಾರ ಬಿಚ್ಚಿ ಓದಿದ :
"ನಿನ್ನ ಬಾಯಿ ನಿನ್ನ ಕೈಯಲ್ಲಿರುವ ಪುಸ್ತಕವನ್ನು ಓದಲಿ; ನಿನಗಿ೦ತ
ಹೆಚ್ಚು ಬಲ್ಲವರಿಂದ ನೀನು ಸಲಹೆ ಪಡೆ."
ಬಳಿಕ ಮತ್ತೊ೦ದು :
"ಎಳೆಯರಿಗೆ ಬೆನ್ನಿದೆ. ಅದಕ್ಕೆ ಬಾರಿಸಿದಾಗಲೇ ಅವರು ಪಾಠದತ್ತ
ಗಮನ ಹರಿಸುತ್ತಾರೆ. ಯಾಕೆಂದರೆ, ಎಳೆಯರ ಕಿವಿ ಇರುವುದು ಅವರ ಬೆನ್ನಿನ
ಮೇಲೆ."
ಓದಿ, "ಇದು ಚೆನ್ನಾಗಿದೆ ಅಲ್ಲವೇನಪ್ಪ?” ಎಂದ ಲಿಪಿಕಾರ.
ಮೆನೆಪ್ಟಾ ಮೆಲ್ಲನೆ ತಲೆದೂಗುತ್ತ, ಆತ ಓದುತ್ತಿದ್ದ ಎಲ್ಲವನ್ನೂ
ಆಸಕ್ತಿಯಿಂದ ಆಲಿಸುತ್ತಿದ್ದ. ರಾಮೆರಿಪ್ಟಾಗೆ ಕೌತುಕ. ರೊಟ್ಟಿಯನ್ನು
ಮೆಲ್ಲುತ್ತ ಆತ ನಿಂತ. ನೆಫಿಸಳ ಮುಖದ ಮೇಲೆ ರೂಪುಗೊಂಡ ಅಚ್ಚರಿ
ಮಾಯವಾಗಲೇ ಇಲ್ಲ.
ಈ ಗಿರಾಕಿ ಇತ್ಯರ್ಥಕ್ಕೆ ಬರುತ್ತಿಲ್ಲವಲ್ಲ ಎ೦ಬ ಕಾತರ ಲಿಪಿಕಾರನಿಗೆ.
ಇರಲಿ ನೋಡೋಣ, ಎ೦ದು ಇನ್ನೊಂದು ಸುರುಳಿಯನ್ನು ಕೈಗೆತ್ತಿಕೊಂಡ :
"ಸಿಡಿ ನುಡಿಗಳನ್ನಾಡಿ ವೈರತ್ವ ಸಂಪಾದಿಸೀಯೆ, ಎಚ್ಚರವಿರಲಿ.
ನುಣುಪು ಕಲ್ಲುಗಳ ನಡುವೆ ದಾಸಿ ಕನ್ಯೆಯರು ಕ೦ಡುಹಿಡಿಯುವ ಪಚ್ಚೆ ಕಲ್ಲಿ
ಗಿಂತಲೂ ಹೆಚ್ಚು ದುರ್ಲಭ, ಸವಿ ನುಡಿ."
ಇನ್ನು ಸಾಕು ಎಂದು ಅರ್ಧಕ್ಷಣ ಸುಮ್ಮನಿದ್ದು, ಮತ್ತೆ ನೆಫಿಸಳ ಮುಖ
ನೋಡಿ, ಹಲ್ಲು ಕಿರಿದು, ಇನ್ನೊ೦ದು ಲಿಪಿ ಸುರುಳಿಯನ್ನು ಲಿಪಿಕಾರ ಓದ
ತೊಡಗಿದ:
"ನಿನ್ನ ತಾಯಿ ನಿನಗಾಗಿ ಏನೇನು ಮಾಡಿರುವಳೆಂಬುದನ್ನು ನೀನೆ೦ದೂ
ಮರೆಯಬಾರದು....ನಿನ್ನನ್ನು ಆಕೆ ಹೆತ್ತಳು. ಸಾಧ್ಯವಾದ ರೀತಿಯಲ್ಲೆಲ್ಲ