ಪುಟ:Mrutyunjaya.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್‍ಯುಂಜಯ "ಒಳ್ಳೇ ಸಲಹೆ." ಸೆತ್ನಾ ಮತ್ತೆ ಮೆರುಗೆಣ್ಣೆ ಲೇಪಿಸಿ ಗಡಿಯಾರ ಥಳಥಳಿಸುವಂತೆ ಮಾಡಿದ. ಅದನೊಯ್ಯಲು ಸಣ್ಣ ಪಟ್ಟ ಚಿತ್ತಾರಗಳಿದ್ದ ಗಾತ್ರದ ಪೆಟಾರಿ ಸಿದ್ಧವಾಯಿತು. ಹೆಮ್ಟಿಯಿಂದ ಯೋಧತರಬೇತಿ ಪಡೆಯುತ್ತಿದ್ದವರಲ್ಲಿ ಅತ್ಯಂತ ದಕ್ಷರಾದ ಇಬ್ಬರು—ಔಟ ಮತ್ತು ಬೆಕ್, ಐವತ್ತು ಯೋಧರ ಮುಖ್‍ಯಸ್‍ಥರು. ಅವರು ಮೆನೆಪ್ಟಾನ ಅನುಚರರಾಗಿ ರಾಜಧಾನಿಗೆ ಹೋಗಬೇಕೆಂದು ಗೊತ್ತಾಯಿತು. ಕೆಫ್‍ಟು ಬಂದು ಹೋದ ಮೇಲೆ ಬಟಾ ತನ್ನ ದೋಣಿಗೆ ಹೊಸದಾಗಿ ಮರದೆಣ್ಣೆ ಬಳೆದಿದ್ದ ಅವನೋಡನೆ ఆಬ್ಟು ಯಾತ್ರೆಗೆ బందిದ್ದ ನಾಲ್ವರು ರಾಜಧಾನಿಯ ಪ್ರಯಾಣಕ್ಕೆ ಅಣಿಯಾದರು. ಹೊರಡಲು ಮೂರು ದಿನ ಉಳಿಯಿತು.... ಅಸೆತಟ್ ನಾಯಕನನ್ನು ಕಾణలు బండದ.

"ಸೆರೋ ಆಮಂತ್ರಣ ಕಳಿಸಿದ್ದಾರೆ ಅಂತ ಕೇಳಿ ಸಂತೋಷವಾಯ್ತು.”
"ಉಗ್ರಾಣ ವಸತಿಗಳ ಕಟ್ಟಡ ಕೆಲಸ ಮುಗಿಯುತ್ತ ಬಂತು, ಅಲ್ಲವಾ?”
" ಹೌದು.ನಿಮ್ಮನ್ನು ನೋಡಿ ಮಹಾಅರ್ಚಕರಿಗೆ ಆನಂದವಾಗ್ತದೆ.”
"ಏನೋ___ಗೋತ್ತಿಲ್ಲ."
" ಪಯಣ ನಡೆಸುವ ದಿವಸ ಬೆಳಿಗ್ಗೆ-”
" ದೇವದರ್ಶನಕ್ಕೆ ಬರ್‍ತೇನೆ.”

ಇನ್ನು ಎರಡು ದಿನ........ ಹಿರಿಯರ ಸಮಿತಿ ದಿನವು ಸಭೆ ಸೇರಿತು. 'ಒಳ್ಳೆಯ ನೀಲ' ಸಂವತ್ಸರ ಎಂಬ ಆಧಾರದ ಮೇಲೆ ಮುಂದಿನ ಕಂದಾಯ ವನ್ನು ಇಪ್ಪವರ್ ಲೆಕ್ಕಹಾಕಿದ್ದ "ಆಂದಾಜು ಹಾಕೋದು ಯಾವಾಗಲೂ ಒಳ್ಳೆದು. ಖಚಿತ ಕಂದಾ ಯುದ ನಿಷ್ಕರ್ಷೆ ಮಾತ್ರ ಕುಯಿಲು ಆದಮೇಲೆ,” ಎಂದು ಮೆನೆಪ್ಟಾ ಮತ್ತೆ ನೆನಪು ಮಾಡಿಕೊಟ್ಟ. ಹಿಂದಿನ ದಿನ......... ಜನರಿಗೆ ಮೆನೆಪ್ಟಾನನ್ನು ಕಂಡು ಶುಭಕೋರುವ ತವಕ. ಒಬ್ಬೊಬ್ಬ ರಾಗಿ ಒಂದಷ್‍ಟು ಜನ ಬಂದರು.