ಪುಟ:Mrutyunjaya.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೨

ಮೃತ್ಯುಂಜಯ

ನಿಮ್ಮನ್ನು ಅಮಾತ್ಯರು ಕರೆಸಿದ ವಿಷಯ ಅವರಿಗೆ ಇನ್ನೂ ತಿಳೀದು."
ಮೆನೆಪ್ ಟಾ ಏನಾದರೂ ಹೇಳುವನೋ ಎಂದು ಕಾದು ನಿರಾಶನಾಗಿ,
ಗೇಬುವೇ ಮುಂದುವರಿಸಿದ :
"ನಾನು ಓದಿದ್ಧು ಬೆಳೆದದ್ದು ರಾಜಧಾನಿಯಲ್ಲೇ. ಆಗ ನಮ್ಮ ಸೋದರ
ಮಾವ ಅರಮನೇಲಿ ಕಣಜದ ಆಧಿಕಾರಿಯಾಗಿದ್ರು.ಇಲ್ಲಿನ ಗಜಿಬಿಜಿ ಗಡಿಬಿಡಿ
ನನಗೆ ಇಷ್ಟವಾಗದೆ ಅವಕಾಶ ಸಿಕ್ಕಿದಾಗಲೆಲ್ಲ ನಮ್ಮುರು ಲಿಷ್ಟಾಗೆ ಹೋಗಿ
ಬಿಡ್ತಿದ್ದೆ....ಈಗಲೂ ಅಷ್ಟೆ."
"ಬರತ್ತ ನಿಮ್ಮೂರು ಕಂಡ್ವಿ."
ನನ್ನೂರಿನಂಥ ಸುಂದರ ಪಟ್ಣಣ ಐಗುಸ್ತದಲ್ಲಿ ಇನ್ನೊಂದಿಲ್ಲ.ಹುಣ್ಣಿಮೆ
ರಾತ್ರೀಲಿ ನದೀಲಿದ್ಕೊಂಡು ಲಿಷ್ಟನ ಸೊಬಗು ನೋಡ್ಬೇಕು. ಮುಂದಿನ
ಹುಣ್ಣಿ ಮೆಗೆ ಹೋಗ್ಬರೋಣ. ಅಲ್ದೆ...."
ಮಾತು ಅರ್ಧಕ್ಕೇ ನಿಂತಿತೆಂದು ಮೆನೆಪ್ ಟಾ ಕೇಳಿದ:
"ಏನು ?”
"ನನ್ನ ಹೆಂಡತಿ ನಿಮ್ಮನು ನೋಡೋದಕ್ಕೆ ಕಾತರಳಾಗಿದ್ದಾಳೆ. ಏನೋ
ಕೇಳ್ಖೇಕಂತೆ."
"ನಿಮ್ಮ ಸಂಸಾರದ ಎಲ್ಲ ಸಾಮಾನುಗಳನ್ನೂ ಎರಡು ದೊಡ್ಡ ಪೆಟಾರಿ
ಗಳಲ್ಲಿ ಹಾಕಿ ಮುದ್ರೆ ಒತ್ತಿ, ಸುರಕ್ಷಿತವಾಗಿ ಇಟ್ಟಿದ್ದೇವೆ.”
"ಅಬ್ಬ! ಬದುಕಿದೆ! ಇನ್ನು ಹೆದರಿಕೆ ఇల్ల.   ನನ್ನ ಹೆಂತಿಯ
ಬೈಗಳು ಕೇಳಿ ಕೇಳಿ ನಾನು ಸೊರಗಿ ಹೋಗಿದ್ದೇನೆ.”
ಸೊರಗಿದ ಯಾವ ಲಕ್ಷಣಗಳನ್ನೂ ತೋರಿಸದ ಪದಚ್ಯತ ಪ್ರಾಂತ
ಪಾಲನ ಸೊಂಸಿನ ಶರೀರವನ್ನು ನೋಡಿ ಮೆನೆಪ್ ಟಾ ನಸುನಕ್ಕ.
ಗೇಬು ಧ್ವನಿ ತಗ್ಗಿಸಿ ಮುಂದುವರಿಸಿದ:
"ನಿಮ್ಮ ಬಂಡಾಯದಿಂದ ನಾನೂ ನನ್ನ ಹೆಂಡತಿಯೂ ಎಷ್ಟು ಸಂತುಷ್ಟ
ರಾಗಿದ್ದೇವೆ ಗೊತ್ತಾ ? ನಿಮ್ಮ ಪ್ರಾಂತ ನಮಗೆ ಯಾರಿಗೂ-ಕ್ಷಮಿಸಿ-
ಇಷ್ಟವಾಗಿರಲಿಲ್ಲ. ಬಂಡಾಯದಿಂದಾಗಿ ನಮಗೂ ಮುಕ್ತಿ ಸಿಗ್ತು !"
"ಅಮಾತ್ಯರು ಏನು ಹೇಳ್ತಾರೆ?”