ಪುಟ:Mrutyunjaya.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಮೃತ್ಯುಂಜಯ ಬಾಗಿಲು ಮುಚ್ಚಿದ್ದ ಕಟ್ಟಡವನ್ನು ಬೆಳಗುತ್ತಿದ್ದುವು. ದ್ವಾರದ ಮೇಲಿನ ಸ್ವರ್ಣಲೇಪನ ಚಕಚಕಿಸುತ್ತಿತ್ತು. ಮೇಲಣ ಹಂತದಲ್ಲಿ ಬೆಳಕು ಮಂದ ವಾಗುತ್ತ ಹೋದಂತೆ ಗೋಪುರ ಇರುಳಿನೊಡನೆ ಬೆರೆಯಲು ತವಕಿಸುತ್ತಿತ್ತು.

 ಮೆನೆಪ್ಟಾ ಮತ್ತು ಸಂಗಡಿಗರು ಮುಚ್ಚಿದ ಬಾಗಿಲಿನ ಹಿಂದಿದ್ದ ಪ್ ಟಾ

ನಿಗೆ ಮಂಡಿಯೂರಿ ನಮಿಸಿ ಎದ್ದರು. ಅಲ್ಲಿಂದ ಹಿಂದಕ್ಕೆ ಹೊರಳಿ ಪ್ರಾಕಾರದ ದ್ವಾರವನ್ನು ಸಮೀಪಿಸಿದರು. ಅಲ್ಲಿ ಕಾವಲಿನವರ ಮುಖ್ಯಸ್ಥ ಇದಿರಾದ.

 “ನೀವು ದಡದ ಮೇಲೆ ತಿರುಗಾಡಬಹುದೂಂತ ಅಮಾತ್ಯರು ತಿಳಿಸಿ

ದ್ವಾರೆ. ಆದರೆ, ನಿಮ್ಮ ಅಂಗರಕ್ಷಕರ ಜತೆ ನಮ್ಮ ಭಟರನ್ನೂ ಕಳಿಸ್ಬೇ ಕೂಂತ ಹೇಳಿದ್ದಾರೆ,” ಎಂದ ಆತ.

 ಬಟಾ ಕುಟುಕಿದ :

"ಯಾಕೆ? ಇಲ್ಲಿ ಕಳ್ಳರು ಜಾಸ್ತೀನಾ ? ನಮ್ಮ ಮೈ ಮೇಲೆ ಆಭರಣ ಗಳೇ ಇಲ್ವಲ್ಲ !"

 ಮುಖ್ಯಸ್ಥ ಉಗುಳು ನುಂಗಿ, ಮೆನೆಪ್ ಟಾಗೆ ನಮಿಸಿ, ತನಗೆ ನೀಡ

ಲಾಗಿದ್ದ ನಿರ್ದೇಶಕ್ಕೆ ಅನುಸಾರವಾಗಿ ನುಡಿದ:

 “ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ. ಆದರೂ ಹೇಳ್ತೇನೆ. ನೀವು 

ವಿಚಿತ್ರ ಪ್ರಾಂತದಿಂದ ಬಂದಿದ್ದೀರಿ. ಪೆರೋಗಿದಿರು ಬಂಡಾಯ ಸಾಮಾನ್ಯವೆ? ಅದರ ವಿವರ ಕೇಳಿ, ರಾಜಧಾನಿಯ ಪ್ರಜೆಗಳು ಕೆಂಡವಾಗಿದ್ದಾರೆ. ಯಾರಾ ದರೂ ತಲೆಹೋಕರು ನಿಮ್ಮ ಮೇಲೆ ಏರಿಬರಬಹುದು. ಆದರೆ ನೀವು ಅರ ಮನೆಯ ಮಾನ್ಯ ಅತಿಥಿಗಳು. ನಿಮಗೆ ಏನಾದರೂ ಸಂಭವಿಸಿದರೆ ನಾವು ಅದಕ್ಕೆ ಜವಾಬ್ದಾರರಾಗ್ತೇವೆ. ಅದಕ್ಕೋಸ್ಕರ ಇಷ್ಟೊಂದು ಮುಂಜಾಗ್ರತೆ.”

 " ನಿಮ್ಮ ಕರ್ತವ್ಯ ನೀವು ಪಾಲಿಸ್ಬೇಕಾದ್ದೇ. ಸಂತೋಷ " ಎಂದ,

ಮೆನೆಪ್ ಟಾ. " ಸ್ವಲ್ಪ ಹೊತ್ತು ತಿರುಗಾಡ್ಕೊಂಡು ಬನ್ನಿ. ರಾಣೀವಾಸದವರು ಬರೋ ಸಂಭವ ಇದ್ದರೆ, ನಿಮಗೆ ತಿಳಿಸಿ ನಿಮ್ಮನ್ನು ಕರಕೊಂಡು ಬರ್ತೇವೆ. ನಿಮಗೊಬ್ಬ ದೇವಸೇವಕ ಸಿಗ್ಬಹುದು. ಬಡಪಾಯಿ. ಚಿಕ್ಕವಯಸ್ಸು. ತಲೆ ಸರಿಯಿಲ್ಲ. ಮಹಾ ಅರ್ಚಕರ ಪರಿವಾರದಲ್ಲಿದ್ದ. ಅಲ್ಲೇನೋ ಗಲಾಟೆ ಮಾಡಿದಾಂತ