ಪುಟ:Mrutyunjaya.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೧೭ “ ಇಂದು ಯಾರೊಡನೆ ನಾ ಮಾತಾಡಲೀ.... ಠಕ್ಕಿಗರೆಲ್ಲರು, ಬಲು ಮೋಸ ನಂಬಲು ನೆಚ್ಚಲು ಒಬ್ಬನೂ ఇల్ల...." ಕೊನೆಯ ಸಾಲು ಮತ್ತೆ ಎರಡು ಬಾರಿ ಕೇಳಿಸಿತು. ಅದನ್ನು ಹಿಂಬಾಲಿ ಸಿತು, ಬಿಕ್ಕಿ ಬಿಕ್ಕಿ, ಬಂದ ಅಳು. ಮೆನೆಷ್ ಟಾಗಿದು ಹಿಮಗಡ್ಡೆಯ ಸ್ಪರ್ಶ. ಇಷ್ಟು ಸಂಕಟ ? ಇಂಥ ಯಾತನೆ ? ' ಠಕ್ಕಿಗರೆಲ್ಲರು, ಬಲುಮೋಸ: ನಂಬಲು ನೆಚ್ಚಲು ಒಬನೂ ಇಲ್ಲ....' ಐಗುಪ್ತ ಪ್ರದೇಶದಲ್ಲಿ ಇದು ಎಷ್ಟು ನಿಜ! ಒಟಾ, ಔಟ,ಬೆಕ್ ಮೂಕರಾಗಿ ನಿಂತರು. ಅಳು ನಿಲ್ಲಿಸಿ, ಸಿಟ್ಟುಸಿರುಬಿಟ್ಟು, ಆ ಮನುಷ್ಯ ಹಾಡು ಮುಂದುವರಿಸಿದ: " ಇಂದು ಯಾರೊಡನೆ ನಾ ಮಾತಾಡಲೀ.... ಧರ್ಮಶೀಲನಾರೂ ಇಲ್ಲ ದುಷ್ಟರೆ ಲೋಕವ ಆಳುವರಲ್ಲ " ಇಂದು ಯಾರೊಡನೆ ನಾ ಮಾತಾಡಲೀ... ಬಳಲಿ ತೊಳಲಿ ಬೆಂಡಾಗಿಹೆನು ನಂಬಲು ನೆಚ್ಚಲು ಒಬ್ಬನೂ ಇಲ್ಲ “ ಇಂದು ಯಾರೊಡನೆ ನಾ ಮಾತಾಡಲೀ... ಪಾಪ ಪೀಡಿತವೀ ನೆಲ್ಲ ನಾ ಜಜರ್ರಿತ ಕೊನೆಯೇ ಇಲ್ಲ, ಇದಕೆ ಕೊನೆಯೇ ಇಲ್ಲ....” ಕಡೆಯ ಎರಡು ಸಾಲುಗಳನ್ನು ಮತ್ತೆರಡು ಬಾರಿ ಆತ ನುಡಿದ, 'ಪಾಪ ಪೀಡಿತವೀ ನೆಲ ನಾ ಜರ್ಜರಿತ, ಕೊನೆಯೇ ಇಲ್ಲ ಇದಕೆ ಕೊನೆಯೇ ఇల్ల' ಪದಗಳು ಮೆನೆಷ್ ಟಾನನ್ನು ಯೋಚನೆಗೆ ಈಡು ಮಾಡಿದುವು. ಹೀಗೆ ಹಾಡಲು ಎಷ್ಟು ಅಪಾರವಿರಬೇಡ ಈ ವ್ಯಕ್ತಿಯ ಯಾತನೆ ! ಹಾಡು ಮುಗಿದಾಗ, ಮತ್ತೊಮ್ಮೆ ಅಳು ಮುಂದೆ ಮೌನ ಶೋಕ.