ಪುಟ:Mrutyunjaya.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೩೧ ಮೆನೆಪ್ ಟಾನೆಡೆಗೆ ಮುಗುಳುನಗೆ ಬೀರಿ, ಅಮಾತ್ಯನೆಂದ:

“ ನುಟ್ ಮೋಸ್ ನಿಮಗೆ ಗೊತ್ತಿರಬೇಕು."
ನಾಯಕ ಗೋಣು ಆಡಿಸಿದೊಡನೆ ಸೆನೆಬ್ ನೆಡೆಗೆ ತಿರುಗಿ, ತುಸು ಧ್ವನಿ ಏರಿಸಿ,ಆಮೆರಬ್ ನುಡಿದು :

“ ಸಂದರ್ಶನಕ್ಕೆ ಬರಹೇಳಿಲ್ವಲ್ಲ....ಯಾಕೆ ಬಂದ ಇವತ್ತು? (ಲಿಪಿಕಾರ ಸೆನೆಬ್ ತುಟಿಕಚ್ಚಿದ )ನಿನ್ನ ಏರ್ಪಾಟೊ ? (ಸೆನೆಬ್ ನಿರುತ್ತರ) ಇನ್ನು ಮುಂದೆ ಹೀಗೆ ಮಾಡ್ಬೇಡ, ಅವನಿಗೆ ಹೊರಟು ಹೋಗೋದಕ್ಕೆ ಹೇಳು ಕರೀದೆ ಇಲ್ಲಿಗೆ ಬರಬಾರದು ಅಂತ ತಿಳಿಸು.” ಲಿಪಿಕಾರನ ಮುಖ ಕೆಂಪಡರಿತು. ಆತ ತಲೆ ತಗ್ಗಿಸಿ ಬಾಗಿಲಿನತ್ತ ನಡೆದ. ಸ್ವರದಲ್ಲಿ ಮತ್ತೆ ಮಾರ್ದವತೆ ತುಂಬಿ ಅಮಾತ್ಯನೆಂದ; " ನನ್ನ ಹತ್ತಿರ ಬಂದರೆ, ಎಂಥ ಕೆಲಸವಾದರೂ ಆಗ್ತದೆ ಅಂತ ಹಲವರ అಭಿಪ್ರಾಯ. ಒಂದು ಕ್ಷಣ ಎಚ್ಚರ ತಪ್ಪಿದರೂ ಸಾಕು , ಬಿಗಿ ಸಡಿಲ್ತದೆ ,ಶಿಸ್ತು ಮಾಯವಾಗ್ತದೆ .” ಕೈಸನ್ನೆಯಿಂದಲೇ ನುಟ್ಮೋಸ್ ನನ್ನು ಹೋಗಲು ಹೇಳಿ,ಬೇರೆ ಮೂವರನ್ನು ಒಳಕ್ಕೆ ಕಳುಹಿಸಲು ಸೇವಕರಿಗೆ ಸೂಚನೆ ಇತ್ತು, ಸೆನೆಬ್ ವೇದಿಕೆ ಯತ್ತ ಧಾವಿಸಿದ. ತನ್ನನ್ನು ಕುರಿತು ಮಾತುಕತೆಯನ್ನು ಬೆಳೆಯಗೊಡುವುದು ಅವನಿಗೆ ಇಷ್ಟವಿರಲಿಲ್ಲ. ಒಳಗೆ ಬಂದವರು ಶಿಲ್ಪಿ, ಚಿತ್ರಕಾರ ಮತ್ತು ಅಕ್ಕಸಾಲಿಗ. ಶಿಲ್ಪಿಯ ಕೈಯಲ್ಲಿ ಪೆಪೈರಸ್ ನ ನೀಳ ಸುರುಳಿ ಇತ್ತು. ಚಿತ್ರಕಾರ ಹಲವು ಸುರುಳಿಗಳ ಕಟ್ಟನ್ನೇ ತಂದಿದ್ದ, ಅಕ್ಕಸಾಲಿಗನ ಕೈಯಲ್ಲೂ ಕೆಲವು ಸುರುಳಿಗಳಿ ದ್ದುವು. ತಾವು ತಂದುದೆಲ್ಲವನ್ನೂ ಅವರು ವೇದಿಕೆಯ ಮೇಲಿರಿಸಿದರು. ಶಿಲ್ಪಿ. " ತಾವು ಸೂಚಿಸಿದ ತಿದ್ದುಪಡಿಗಳನ್ನೆಲ್ಲ ಸೇರಿಸಿ ಬೇರೆಯೇ ನಕಾಶೆ ಸಿದ್ಧ