ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
“ಸತ್ತವರಿಗೆ ಕಹಿಯಾದ ಜೇನಿನಿಂದ___” “ಸತ್ತೋರಿಗೆ ಕಹಿಯಾದ ಜೇನಿನಿಂದ___” “ಎಬ್ಡು ಮೀನಿನ ದುಷ್ಟ ಅಂಗದಿಂದ___” “ಎಬ್ಡು ಮೀನಿನ ದುಷ್ಟ ಅಂಗದಿಂದ____" “ತಿಳಿನೀರು ಮೀನಿನ ಬೆನ್ನು ಹುರಿಯಿಂದ____” “ತಿಳಿನೀರು ಮೀನಿನ ಬೆನ್ನು ಹುರಿಯಿಂದ____" “ಮಗೂಗೆ ನಾನು ರಕ್ಷಣೆ ಒದಗಿಸಿದ್ದೇನೆ.” "ಮುಗೂಗೆ ನಾನು ರಕ್ಷಣೆ ಒದಗಿಸಿದ್ದೇನೆ." “ಇರುಳಲ್ಲಿ ಬರುವವನೆ ಹೊರಟು ಹೋಗು!” “ಇರುಳಲ್ಲಿ ಬರುವವನೆ ಹೊರಟ್ಹೋಗು !"
ಧ್ವನಿ ಬದಲಿಸಿ ಇನೇನಿ ನುಡಿದ : “ನೋಡಮ್ಮ , ಈ ತಟ್ಟೆಲಿರೋದನ್ನೂ ಮಗೂ ಜತೆ ಎತ್ಕೊ. ಮನೆಗೆ ಹೋಗಿ ಅದೆಲ್ಲ ಮಗೂನ ಮೈಗೆ ತಗಲೋ ಹಾಗೆ ಇಡು. ಮಗು ಮಲಗಲಿ ಜ್ವರ ಇಳೀತದೆ.”
ಕಿರಿಯ ದೇವಸೇವಕ ತಂದು ಹಿಡಿದ ಪವಿತ್ರೋದಕದ ಪಾತ್ರೆಯಲ್ಲಿ ಬೆರಳುಗಳನ್ನು ಆದ್ದಿ ಮಗುವಿನ ಮೇಲೂ ಅದರ ತಾಯಿಯ ಮೇಲೂ ಇನೇನಿ ಒಂದೊಂದು ಹನಿ ರಾಚಿದ.
"ಕಾಣಿಕೆ ಏನು ತಂದ್ಕೊಡ್ಲಿ ಅಯ್ಯ?" “ಅವಸರವಿಲ್ಲ . ನಿಧಾನವಾಗಿ ಕೊಡು. ಬೆಸ್ ದೇವರ ಒಂದು ಮೂರ್ತಿ ಸಾಕು.” ಮಂತ್ರಿತ ವಸ್ತುಗಳನ್ನು ಮಗುವಿನ ಜೊತೆಯಲ್ಲಿ ಸುತ್ತಿ, ಎತ್ತಿಕೊಳ್ಳುತ್ತ ಆಕೆ ಅಂದಳು : “ಮೂರ್ತಿ ಎಲ್ಲಿ ಸಿಗ್ತದೆ ಅಯ್ಯ ?” “ಮಹಾಮಂದಿರದ ಎದುರಿಗೆ ಆಂಗಡಿ ಸಾಲು ನೋಡಿದ್ದೀಯಾ ?” "ಹೂಂ." “ಅಲ್ಲಿ ಸಿಗ್ತದೆ.” “ಏನು ಕೇಳ್ತಾರೊ?”