ಪುಟ:Mrutyunjaya.pdf/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೩೩ ವಿದ್ಯೆ ಕಲಿತ ಯಾರು ಬೇಕಾದರೂ ಮಂದಿರ ಸೇವೆಗೆ ಹೋಗ್ಬಹುದು. ಆದರೆ ವಾಸ್ತವದಲ್ಲಿ, ಅರ್ಚಕರ ಮಕ್ಕಳಷ್ಟೇ ಅರ್ಚಕರಾಗ್ತಾರೆ.” ಬಟಾ : "ಆಡುವವರ ಮಕ್ಕಳು ಆಡ್ತಾರೆ !” ಮೆನೆಪ್ ಟಾ :"ಕುಯಿಲಿನ ಸಿದ್ಧತೆ ಮುಗಿದಿರಬೇಕು ನಮ್ಮಲ್ಲಿ." ಬಟಾ :ಈ ಸಲ ಕುಯಿಲಿನ ಹಬ್ಬವನ್ನ ಬಹಳ ಅದ್ದೂರಿಯಿಂದ-" ಮೆನೆಪ್ ಟಾ:ಖಿವವ ಕಾಲುವೆಯಾಗಿ ಹರಿದು ನೀಲನದಿ ಸೇರ ಬೇಕೇನೋ ?" ಬಟಾ : ಒಂದೊಂದ್ಸಲ ಇಡೀ ನದಿಯ ನೀರೇ ಖಿವವ ಆದರೆ ಎಷು ಮಜ ಅಂದ್ಕೋತೇನೆ." ಮೆನೆಪ್ ಟಾ : “ಒಂದು ದಿವಸ ಕುಡಿದು ಆಮಲೇರಿದಾಗ ನಿಜವಾದ ನೀರಾನೆಯೇ ಬಂದು ನಿನಗೆ ಗುಮ್ತದೆ ನೋಡ್ಕೋ." ಬಟಾ: “ನೀರಾನೆ ನಮ್ಮ ಪ್ರಾಂತದ ಜನರ ಕುಲದೈವ. ಅದೇ ಮುನಿದರೆ ಬಡ ಮನುಷ್ಯ ನಾನೇನು ಮಾಡೇನು ?” ಮೆನೆಪ್ ಟಾ: "........" ಬಟಾ : "ನಮ್ಮ ಲಿಪಿಕಾರ ಇಪ್ಯುವರ್ ಗೆ ರಾಜಧಾನಿಯವರು ಒಮ್ಮೆ ತನ್ನ ಹಸ್ತಾಕ್ಷರ ನೋಡ್ಬೇಕೂಂತ ಆಸೆ.” ಮೆನೆಪ್ ಟಾ : “ಸಾಧು. ಅವತ್ತು ಟೆಹುಟಿ ಬಂದಾಗ ನಾನು ಮಾತನಾಡಿದೆ ನೋಡು. ” ಬಟಾ : "ಬಂಡಾಯ ?" ಮೆನೆಪ್ ಟಾ : “ಅದನ್ನೆಲ್ಲ ಇಪ್ಯುವರ್ ಬರೆದಿಟ್ಟಿದ್ದಾನೆ. ಜಾಡಿ ಯೊಳಕ್ಕೆ ಸೇರಿಸಿ ಭದ್ರವಾಗಿ ಮುಚ್ಚಿಟ್ಟಿದ್ದಾನೆ.” ಬಟಾ : “ವಾಪ್ಸು ಬಂದ್ಮೇಲೆ ನಾನು ಪೆರೋನ ಗೋರಿ ನೋಡ್ಟೋ ದಕ್ಕೆ ಹೋಗ್ಬೇಕು. ಅಣ್ಣ, ನಿನ್ನ ಗೋರಿ ಕಟ್ಟಿಸುವಾಗ ಒಳಗಡೆ ಗೋಡೆ ಮೇಲೆ ನಮ್ಮ ಅಬ್ಟು ಯಾತ್ರೆಯ ಚಿತ್ರ ಬರೆಸ್ಬೇಕು. ಅಮರಲೋಕದ ನಿವಾಸಿಯಾದ್ಮೇಲೂ ವರ್ಷಕ್ಕೊಮ್ಮೆ ಅಬ್ಟು, ಯಾತ್ರೆಗೆ ನೀನು ಹೋಗೋದು ಬೇಡವಾ! ನನ್ನ ದೋಣಿ ಇಲ್ದೆ, ನಾನಿಲ್ದೆ, ಹ್ಯಾಗೆ ಯಾತ್ರೆ ಹೋಗ್ತೀಯಾ?”

ಮೆನೆಪ್ ಟಾ : “ತಮಾಷೆ ಸಾಕು. ನಮಗೆ ಆಡಂಬರದ ಬದುಕೂ.